Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಬಿಲ್‌ಕೆರೂರು ಗ್ರಾಮಕ್ಕೂ ರಾಮಾಯಣಕ್ಕೂ ಇದೆ ನಂಟು; ಏನದು ಗೊತ್ತಾ?

ಸದ್ಯ ದೇಶದಾದ್ಯಂತ‌ ರಾಮಮಂದಿರದ್ದೆ ಚರ್ಚೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಇಂತಹ ಸಮಯದಲ್ಲಿ ರಾಮಚರಿತೆಯ ಕುರುಹುಗಳು ವಿಶೇಷ‌ ಮಹತ್ವ ಪಡೆದುಕೊಳ್ಳುತ್ತಿವೆ. ಅಂತ‌ಹ ಕುರುಹು ಹೊಂದಿದ ಸ್ಥಳದಲ್ಲಿ ಬಿಲ್‌ಕೆರೂರು ಎಂಬ ಗ್ರಾಮ ಕೂಡ ಒಂದಾಗಿದ್ದು, ರಾಮನ ಬಿಲ್ಲಿನಿಂದಲೇ ಬಿಲ್‌ಕೆರೂರು ಎಂದು ಹೆಸರು ಪಡೆದುಕೊಂಡಿದೆ.

ಬಾಗಲಕೋಟೆ: ಬಿಲ್‌ಕೆರೂರು ಗ್ರಾಮಕ್ಕೂ ರಾಮಾಯಣಕ್ಕೂ ಇದೆ ನಂಟು; ಏನದು ಗೊತ್ತಾ?
ರಾಮನ ಬಿಲ್ಲಿನಿಂದಲೇ ಈ ಗ್ರಾಮವು ಬಿಲ್‌ಕೆರೂರು ಎಂದು ಹೆಸರು ಪಡೆದುಕೊಂಡಿದೆ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: Rakesh Nayak Manchi

Updated on:Jan 04, 2024 | 8:36 AM

ಬಾಗಲಕೋಟೆ, ಜ.4: ಒಂದು ಕಡೆ ಹಳ್ಳ, ಹಳ್ಳದ ಹೊಂಡದಲ್ಲಿ ನೀರು. ಪಕ್ಕದಲ್ಲಿ ದೇವಸ್ಥಾನ, ದೇವಸ್ಥಾನದ‌ ಮುಂದೆ ಲವಕುಶರ‌ ಕಟ್ಟೆಗಳು. ಇವೆಲ್ಲವನ್ನೂ ಬಾಗಲಕೋಟೆ (Bagalkot) ತಾಲ್ಲೂಕಿನ ಬಿಲ್‌ಕೆರೂರು ಗ್ರಾಮದಲ್ಲಿ ನೋಡಬಹುದು. ಬಿಲ್‌ಕೆರೂರು ಹೆಸರಿನಲ್ಲೇ ಬಿಲ್ ಅಂತಿದೆ. ಆದರೆ ಇದು ಸಾಮಾನ್ಯವಾಗಿ ಬಂದಿರುವಂತದ್ದಲ್ಲ. ಇದಕ್ಕೆ ರಾಮಾಯಣ ಇತಿಹಾಸವಿದೆ. ರಾಮನ ಬಿಲ್ಲಿನಿಂದ ಗ್ರಾಮಕ್ಕೆ‌ ಬಿಲ್‌ಕೆರೂರು (Bilkeruru) ಅಂತ‌ ಹೆಸರು ಬಂದಿದೆ.

ರಾಮಸೀತೆ ಲಕ್ಷ್ಮಣ ವನವಾಸದಲ್ಲಿದ್ದಾಗ ಈ ಜಾಗದಲ್ಲಿ ಸಂಚರಿಸುತ್ತಿದ್ದರಂತೆ. ಆಗ ಸೀತೆಗೆ ವಿಪರೀತ‌ ಬಾಯಾರಿಕೆ ಆಗಿತ್ತಂತೆ. ಸುತ್ತಮುತ್ತ ಎಲ್ಲೂ ನೀರು ಸಿಗದಿದ್ದಾಗ ರಾಮ‌ ತನ್ನ ಬಿಲ್ಲಿನಿಂದ ಬಾಣ ಬಿಟ್ಟಾಗ‌ ಗಂಗೆ ಚಿಮ್ಮಿದ್ದಾಳೆ. ಆ ನೀರನ್ನು ಕುಡಿದು ಸೀತಾಮಾತೆ ದಾಹ ನೀಗಿಸಿಕೊಂಡಿದ್ದಳು ಎಂಬುದು ನಂಬಿಕೆ.

ರಾಮ ಬಿಲ್ಲಿನಿಂದ‌ ನೆಲಕ್ಕೆ ಬಾಣ ಬಿಟ್ಟು ನೀರು ಹೊರತೆಗೆದ ಕಾರಣ ಅಲ್ಲಿ‌ ಕೆರೆ ನಿರ್ಮಾಣವಾಗಿದೆ. ಮೊದಲು ಈ ಸ್ಥಳಕ್ಕೆ ಬಿಲ್‌ ಕೆರಿ ಅಂತ ಕರೆಯುತ್ತಿದ್ದರು. ಕಾಲಕ್ರಮೇಣ ಅದು ಬಿಲ್‌ಕೆರೂರು ಆಗಿ ಬದಲಾಗಿದೆ. ರಾಮನ ಬಿಲ್ಲಿನಿಂದ‌‌ ಗ್ರಾಮಕ್ಕೆ ಬಿಲ್‌ಕೆರೂರು ಎಂದು ಹೆಸರು ಬಂದಿದ್ದು ಗ್ರಾಮ ರಾಮಚರಿತೆಯ‌ ಒಂದು ಕುರುಹಾಗಿ ಎಲ್ಲರ‌ ಗಮನ ಸೆಳೆಯುತ್ತಿದೆ.

ರಾಮನ ಶಕ್ತಿಗೆ ಸಾಕ್ಷಿ ರಾಮತೀರ್ಥ ಹೊಂಡ

ಈ ಹೊಂಡದ ವಿಶೇಷತೆ ಏನೆಂದರೆ, ಅಂದು ನಿರ್ಮಾಣವಾದ ಈ ಹೊಂಡಕ್ಕೆ ರಾಮತೀರ್ಥ ಹೊಂಡ ಅಂತ ಕರೆಯುತ್ತಾರೆ. ಈ ಹಳ್ಳಕ್ಕೆ ರಾಮತೀರ್ಥ‌ಹಳ್ಳ ಅಂತಾನು ಕರೆಯುತ್ತಾರೆ. ಈ‌ ಹೊಂಡದ ನೀರು ಎಂದು ಕೂಡ ಬತ್ತಿಲ್ಲ ಇದು ರಾಮನ ಶಕ್ತಿಗೆ ಸಾಕ್ಷಿ ಅಂತ ಸ್ಥಳೀಯರ‌‌ ನಂಬಿಕೆ. ಇನ್ನು ಹೊಂಡದ ಪಕ್ಕದಲ್ಲಿ ಒಂದು ಪ್ರಾಚೀನ ಗುಡಿಯೂ ಇದೆ. ಅದಕ್ಕೆ ರಾಮಲಿಂಗೇಶ್ವರ ದೇವಸ್ಥಾನ ಎಂದು ಕರೆಯುತ್ತಾರೆ.

ಇಲ್ಲಿಯೇ ಶ್ರೀರಾಮ, ಸೀತೆ ಕೆಲ ಕಾಲ ಇದ್ದರು ಎನ್ನುವ ಐತಿಹ್ಯ ಇದೆ. ರಾಮಲಿಂಗೇಶ್ವರ ಎಂದು ಕರೆಯುವ ಪುರಾತನ ದೇವಾಲಯದಲ್ಲಿ ಹನಮಂತ ಹಾಗೂ ಲಿಂಗುವಿನ ಮೂರ್ತಿಗಳು ಇವೆ. ಇನ್ನು ದೇವಾಲಯದ ಎದುರಿಗೆ ಎರಡು ಕಟ್ಟೆಗಳು ಇದ್ದು, ಅವುಗಳಿಗೆ ಲವ-ಕುಶ ಕಟ್ಟೆಗಳು ಎಂದು ಕರೆಯುತ್ತಾರೆ.

ಇದನ್ನೂ ಓದಿ: ರಾಮಚರಿತೆ ಸಾರುತ್ತಿರುವ ಬಾಗಲಕೋಟೆಯ ಸೀತೆಮನೆ ಗ್ರಾಮ; ಬರಗಾಲದಲ್ಲೂ ಬತ್ತದ ಸೀತಾ ಹೊಂಡ

ಈ ಕಟ್ಟೆಗಳ ಮೇಲೆ ಲವ-ಕುಶ ಆಟ ಆಡುತ್ತಿದ್ದರು ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಕಟ್ಟೆ‌‌ ಮೇಲೆ ಲವಕುಶರ‌ ಪಾದಗಳು‌‌ ಇವೆ. ಅವುಗಳ ಪಕ್ಕದಲ್ಲಿ ಕಲ್ಲಿನ ಗುಂಡು ಇದ್ದು, ಲವಕುಶ ಕಲ್ಲು ಎಂದು ಕರೆಯುತ್ತಾರೆ. ಜನರು ಈಗಲೂ ಆ ಕರಿಕಲ್ಲಿನ ಗುಂಡು ಎತ್ತುವ ಸಂಪ್ರದಾಯ ಇದೆ. ಗುಂಡು ಸರಳವಾಗಿ ಎದ್ದರೆ ತಮ್ಮ ಬೇಡಿಕೆ ಈಡೇರುತ್ತವೆ, ಭಾರವಾದರೆ ಕೆಲಸ ಆಗಲ್ಲ ಎನ್ನುವ ನಂಬಿಕೆ.

ಪ್ರತಿ ವರ್ಷ ಶ್ರಾವಣದ‌ ದಿನ‌ದಂದು ರಾಮಭಕ್ತರು ಇಲ್ಲಿಗೆ ಬಂದು ವಿಶೇಷ ಪೂಜೆ‌ ಪುನಸ್ಕಾರ‌ ಮಾಡುತ್ತಾರೆ. ಒಟ್ಟಿನಲ್ಲಿ ರಾಮಮಂದಿರ ಉದ್ಘಾಟನೆಯ ಈ ಸಂದರ್ಭದಲ್ಲಿ ರಾಮನ ಅನೇಕ‌ ಕುರುಹುಗಳು ಚರ್ಚೆಗೆ ಬರುತ್ತಿದ್ದು, ರಾಮನ ಚರಿತೆಗೆ ಸಾಕ್ಷಿ ಹೇಳುವಂತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:28 am, Thu, 4 January 24

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ