AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದೇನೆ, ಆಹ್ವಾನ ನೀಡಿಲ್ಲ’ ಲಕ್ಷ್ಮಣ್​​​ ಸವದಿ, ​​ಶೆಟ್ಟರ್​​ ಹೇಳಿಕೆಗೆ ಪೇಜಾವರ ಶ್ರೀ ಕಿಡಿ

ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದೇನೆ, ನಮಗೂ ಆಹ್ವಾನ ನೀಡಿಲ್ಲ ಎಂಬ ಲಕ್ಷ್ಮಣ್​​​ ಸವದಿ ಹಾಗೂ ಜಗದೀಶ್​ ​​ಶೆಟ್ಟರ್​​ ಹೇಳಿಕೆಗೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ(Pejawar Vishwaprasanna Tirtha)ಗಳು ವಾಗ್ದಾಳಿ ನಡೆಸಿದ್ದಾರೆ. ‘ದೇವಾಲಯದ ಪರಿಸರ ಸಣ್ಣ ಪರಿಸರ, ದೇಣಿಗೆ ನೀಡಿದ ಮಂದಿ ಹೆಚ್ಚು. ಎಲ್ಲರನ್ನು ಕರೆದು ಸಮಾರಂಭ ಮಾಡುವುದಕ್ಕೆ ಅವಕಾಶವೇ ಇಲ್ಲ ಎಂದಿದ್ದಾರೆ.

‘ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದೇನೆ, ಆಹ್ವಾನ ನೀಡಿಲ್ಲ’ ಲಕ್ಷ್ಮಣ್​​​ ಸವದಿ, ​​ಶೆಟ್ಟರ್​​ ಹೇಳಿಕೆಗೆ ಪೇಜಾವರ ಶ್ರೀ ಕಿಡಿ
ಪೇಜಾವರ ಶ್ರೀ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 04, 2024 | 7:23 PM

ಬಾಗಲಕೋಟೆ, ಜ.04: ‘ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದೇನೆ, ನಮಗೂ ಆಹ್ವಾನ ನೀಡಿಲ್ಲ ಎಂಬ ಲಕ್ಷ್ಮಣ್​​​ ಸವದಿ ಹಾಗೂ ಜಗದೀಶ್​ ​​ಶೆಟ್ಟರ್​​ ಹೇಳಿಕೆಗೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ(Pejawar Vishwaprasanna Tirtha)ಗಳು ವಾಗ್ದಾಳಿ ನಡೆಸಿದ್ದಾರೆ. ‘ದೇವಾಲಯದ ಪರಿಸರ ಸಣ್ಣ ಪರಿಸರ, ದೇಣಿಗೆ ನೀಡಿದ ಮಂದಿ ಹೆಚ್ಚು. ಸಮಾಜದಲ್ಲಿ ಗಣ್ಯರು, ಮುಖಂಡರು ಎನ್ನುವವರು ಹೆಚ್ಚಿನ ಜನ ಇದ್ದಾರೆ. ಎಲ್ಲರನ್ನು ಕರೆದು ಸಮಾರಂಭ ಮಾಡುವುದಕ್ಕೆ ಅವಕಾಶವೇ ಇಲ್ಲ. ಕರೆದಿಲ್ಲ ಎಂಬ ಮಾತ್ರಕ್ಕೆ ಅಪನಂಬಿಕೆ ಯಾರು ಇಟ್ಟುಕೊಳ್ಳಬಾರದು ಎಂದು ತಿರುಗೇಟು ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್​​ನ ಹಿರಿಯರಿಗೂ ಬರಬೇಡಿ ಎಂದಿದ್ದೇವೆ

ಆದಿನ ಎಲ್ಲರೂ ತಮ್ಮ ಊರುಗಳಲ್ಲಿ ದೊಡ್ಡ LED ಪರದೆ ಹಾಕಬೇಕು. ಶ್ರೀ ರಾಮನ ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ನೋಡಬೇಕು. ಯಾರೂ ಕೂಡ ಅಯೋದ್ಯೆಗೆ ಬರುವುದು ಬೇಡ ಎನ್ನುವಂತಹ ಅಪೀಲ್​​​ ಮಾಡಲಾಗಿದೆ. ವಿಶ್ವ ಹಿಂದೂ ಪರಿಷತ್​​ನ ಹಿರಿಯರಿಗೂ ಬರಬೇಡಿ ಎಂದಿದ್ದೇವೆ. ಹೀಗಾಗಿ ಆಹ್ವಾನಿಸಿಲ್ಲ ಎಂಬ ಅಪ ನಂಬಿಕೆ ಇಟ್ಟುಕೊಳ್ಳಬಾರದು ಎಂದರು.

ಇದನ್ನೂ ಓದಿ:ಮೋದಿ, ಯೋಗಿ ಇರುವವರೆಗೂ ರಾಮ ಮಂದಿರ ಇರತ್ತೆ: ಪೇಜಾವರ ಶ್ರೀ

ಬಿಕೆ ಹರಿಪ್ರಸಾದ್​ ಹೇಳಿಕೆಗೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ ಕಿಡಿ

ಮತ್ತೊಂದು ಗೋಧ್ರಾ ಹತ್ಯಾಕಾಂಡ ಆಗದಂತೆ ನೋಡಿಕೊಳ್ಳಿ ಎಂಬ ಬಿಕೆ ಹರಿಪ್ರಸಾದ್​ ಹೇಳಿಕೆಗೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ ಕಿಡಿಕಾರಿದ್ದಾರೆ. ‘ಜವಾಬ್ದಾರಿ ಸ್ಥಾನದಲ್ಲಿದ್ದವ್ರು ಈ ವಿಚಾರದ ಗಂಭೀರತೆ ಅರಿಯಬೇಕು. ಈ ವಿಚಾರ ಮೊದಲು ಇಲಾಖೆಗೆ ತಿಳಿಸಬೇಕು. ಹರಿಪ್ರಸಾದ್​​​ ಈ ವಿಚಾರ ಯಾರಾದ್ರೂ ಕೇಳಿದ್ರೆ ಹೇಳುತ್ತೇವೆ ಎನ್ನುತ್ತಾರೆ. ಇವರು ಯಾರನ್ನೋ ರಕ್ಷಿಸಲು ಮುಂದಾಗಿದ್ದಾರೆಂಬ ಸಂಶಯ ಇದರಿಂದ ಮೂಡುತ್ತದೆ. ಪ್ರಜೆಗಳ ರಕ್ಷಣೆಯೋ, ವಿದ್ವಂಸಕ ಕೃತ್ಯ ಮಾಡಿದವರ ರಕ್ಷಣೆಯೋ?, ತಿಳಿಯದು. ಸಾಕ್ಷ್ಯಾಧಾರ ನೀಡದೇ ಇಂತಹ ಮಾತುಗಳನ್ನಾಡುತ್ತಿದ್ದಾರೆ ಅಂದರೆ ಭಯದ ವಾತಾವರಣ ಹುಟ್ಟಿದ್ದು ಯಾರಿಂದ?, ಸಮಾಜದಲ್ಲಿ ಭಯದ ವಾತಾವರಣ ಹುಟ್ಟಿಸುತ್ತಿದ್ದವರು ಯಾರು? ಇಂತಹ ಕೃತ್ಯವನ್ನು ಯಾರು ಕೂಡ ಮಾಡಬಾರದು. ಅದರಲ್ಲೂ ಜನಪ್ರತಿನಿಧಿಗಳು ಇಂತಹ ಕೆಲಸಕ್ಕೆ ಕೈ ಹಾಕಬಾರದು ಎನ್ನುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

ದತ್ತಪೀಠ ಕೇಸ್‌ ರಿ ಓಪನ್; ಸರ್ಕಾರದ ನಡೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಸಂಶಯ

ಬಾಬಾಬುಡನ್​ಗಿರಿಯಲ್ಲಿ ಗೋರಿ ಧ್ವಂಸ ಪ್ರಕರಣ ರೀ ಓಪನ್ ಆರೋಪ ‘ಸರ್ಕಾರದ ನಡೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಸಂಶಯ ಮೂಡಿದೆ ಎಂದು ವಿಶ್ವಪ್ರಸನ್ನ ತೀರ್ಥಶ್ರೀ ಹೇಳಿದ್ದಾರೆ. ‘ದೇಶದ ಜನತೆ ಶ್ರೀರಾಮಮಂದಿರ ಉದ್ಘಾಟನೆ ಸಂಭ್ರಮದಲ್ಲಿದ್ದಾರೆ. ನಮ್ಮ ಸರ್ಕಾರ ತೆಗೆದುಕೊಂಡ ಕೆಲ ನಿಲುವು ಸಂಶಯ ಹುಟ್ಟುಹಾಕುತ್ತಿದೆ. ತಪ್ಪಿತಸ್ಥರನ್ನು ಶಿಕ್ಷಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ, ರಾಜ್ಯ ಸರ್ಕಾರದ ನಡೆ ಸಮಾಜದ ಅಶಾಂತಿಗೆ ಕಾರಣವಾಗಿದೆ. ಸಮಾಜದಲ್ಲಿ ಧರ್ಮ, ಪಂಗಡಗಳ ನಡುವೆ ಅಪನಂಬಿಕೆ ಹುಟ್ಟಾಕುತ್ತಿದೆ. ಸಂಶಯ ಸಂದೇಹಗಳಿಗೆ ಎಡೆಯಿಲ್ಲದಂತೆ ನಡೆಯಲಿ ಎಂಬ ಅಪೇಕ್ಷೆ, ರಾಜ್ಯ ಸರ್ಕಾರ ಸರ್ವರಿಗೂ ರಕ್ಷಣೆ ನೀಡುವ ಕೆಲಸ ಮಾಡಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ