ತಮ್ಮ PA ಬಾಗಲಕೋಟೆಯ ಚೌರಿ ಸಿಐಡಿ ವಶಕ್ಕೆ: ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಕೊಡೋ ಸ್ಪಷ್ಟನೆ ಏನು?

ತಮ್ಮ PA ಬಾಗಲಕೋಟೆಯ ಚೌರಿ ಸಿಐಡಿ ವಶಕ್ಕೆ: ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಕೊಡೋ ಸ್ಪಷ್ಟನೆ ಏನು?
ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ

ಶ್ರೀಕಾಂತ್ ಚೌರಿ ನಮ್ಮ ಜೊತೆ ಮೂರರಿಂದ ನಾಲ್ಕು ತಿಂಗಳು ಪಿಎ ಅಂತ ಕೆಲಸ‌ ಮಾಡಿದ್ದಾನೆ. ಆಪ್ತ ಕಾರ್ಯದರ್ಶಿ ಅಂತ ಆತನಿಗೆ ಪೋಸ್ಟ್ ಕೊಟ್ಟೇ ಇಲ್ಲ. ಆತನ ಆ್ಯಕ್ಟಿವಿಟಿ ನಮಗೆ ಸರಿ ಕಾಣಲಿಲ್ಲ. ಆತ ಹಣ ಪಡೆದು ಅಧಿಕಾರಿಗಳ ಟ್ರಾನ್ಸವರ್ ಮಾಡಿಸುವ ಕೆಲಸ ಮಾಡ್ತಿದಾನೆ ಎಂದು ಕೆಲವರು ಮಾಹಿತಿ ನೀಡಿದ್ದರು.

TV9kannada Web Team

| Edited By: Ayesha Banu

May 18, 2022 | 8:06 PM

ಬಾಗಲಕೋಟೆ: ಪಿಎಸ್ಐ ಪ್ರಕರಣ ಆರೋಪದಲ್ಲಿ ಬಾಗಲಕೋಟೆ ಶ್ರೀಕಾಂತ್ ಚೌರಿಯನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ(Handicrafts Development Corporation Chairman Belur Raghavendra Shetty). ಶ್ರೀಕಾಂತ್ ಚೌರಿ ಬಗ್ಗೆ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಶ್ರೀಕಾಂತ್ ಚೌರಿ ನಮ್ಮ ಜೊತೆ ಮೂರರಿಂದ ನಾಲ್ಕು ತಿಂಗಳು ಪಿಎ ಅಂತ ಕೆಲಸ‌ ಮಾಡಿದ್ದಾನೆ. ಆಪ್ತ ಕಾರ್ಯದರ್ಶಿ ಅಂತ ಆತನಿಗೆ ಪೋಸ್ಟ್ ಕೊಟ್ಟೇ ಇಲ್ಲ. ಆತನ ಆ್ಯಕ್ಟಿವಿಟಿ ನಮಗೆ ಸರಿ ಕಾಣಲಿಲ್ಲ. ಆತ ಹಣ ಪಡೆದು ಅಧಿಕಾರಿಗಳ ಟ್ರಾನ್ಸವರ್ ಮಾಡಿಸುವ ಕೆಲಸ ಮಾಡ್ತಿದಾನೆ ಎಂದು ಕೆಲವರು ಮಾಹಿತಿ ನೀಡಿದ್ದರು. ಎರಡು ತಿಂಗಳ ಹಿಂದೆ ಆತನನ್ನು ಕೆಲಸದಿಂದ ತೆಗೆದಿದ್ದೇವೆ. ಪಿಎ ಆಗಿ ವಿಜಿಟಿಂಗ್ ಕಾರ್ಡ್ ಮಾಡಿಸಬಾರದು. ಆದ್ರೆ ಆತ ವಿಜಿಟಿಂಗ್ ಕಾರ್ಡ್ ಕೂಡ ಮಾಡಿಸಿದ್ದ. ಇದೆಲ್ಲ ಸರಿ ಹೋಗಲ್ಲ ಎಂದು ಹೇಳಿದ್ದೆ. ಇವೆಲ್ಲ ವರ್ತನೆಯಿಂದ ಆತನನ್ನು ತೆಗೆದಿದ್ದೇವೆ ಎಂದು ರಾಘವೇಂದ್ರ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಲೈಕಾ- ಅರ್ಜುನ್ ಮದುವೆಯ ಬಗ್ಗೆ ಜೋರಾಯ್ತು ಗಾಸಿಪ್; ರೂಮರ್​ಗಳಿಗೆ ನಟ ನೀಡಿದ ಉತ್ತರವೇನು?

ಆತನ ಮದುವೆಗೂ ನನಗೆ ಬರೋದಕ್ಕೆ ಬಹಳ ಒತ್ತಾಯ ಮಾಡಿದ್ದ. ನಾನು ಮದುವೆಗೂ ಹೋಗಿಲ್ಲ. ಆತನನ್ನು ಕೆಲಸದಿಂದ ತೆಗೆದಿರೋದನ್ನು ನಿಮಗಕ್ಕೆ ಅಪ್ಡೇಟ್ ಮಾಡಿಲ್ಲ. ಆದ ಕಾರಣ ನಮ್ಮ ಚಂದ್ರಶೇಖರ್ ಎಂಬ ಹೊಸ ಪಿಎಯ ಸಂಬಳ ಶ್ರೀಕಾಂತ್ ಚೌರಿ ಖಾತೆಗೆ ಹೋಗಿದೆ. ಎರಡು ತಿಂಗಳ ಸಂಬಳ ಹೋಗಿದೆ. ಅದನ್ನು ಚಂದ್ರಶೇಖರ್ ಖಾತೆಗೆ ಶ್ರೀಕಾಂತ್ ವಾಪಸ್ ಹಾಕಿದ್ದ. ಇಂತಹ ಪ್ರಾಡ್ ವ್ಯಕ್ತಿ ಮದುವೆಗೆ ಹೇಗೆ ಹೋಗೋದು. ಯಾರೊ ಬರ್ತಾರೆ ಅವರನ್ನು 24 ತಾಸು ಕಾಯೋಕೆ ಆಗಬೇಕಲ್ವಾ? ತಪ್ಪು ಮಾಡಿದರೆ ಶಿಕ್ಷೆ ಆಗಲೇಬೇಕಲ್ವಾ? ತಪ್ಪು ಮಾಡಿದ್ದಕ್ಕೆ ದಾಖಲೆಗಳು ಇದ್ದೆ ಇರುತ್ತವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಶ್ರೀಕಾಂತ್ ಚೌರಿ ವಶಕ್ಕೆ ಪಡೆದ ಸಿಐಡಿ ಪೊಲೀಸರು ಇನ್ನು ಈ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆಯಲ್ಲಿ ಆರೋಪಿ ಶ್ರೀಕಾಂತ್ ಚೌರಿಯನ್ನು ವಶಕ್ಕೆ ಪಡೆದಿದ್ದಾರೆ. ಶ್ರೀಕಾಂತ್ ಮೇ 14ರಂದು ಅಂದ್ರೆ ನಾಲ್ಕು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ನಿವಾಸಿಯಾಗಿರುವ ಆರೋಪಿ ಶ್ರೀಕಾಂತ್ ಚೌರಿ ಲಕ್ಷ ಲಕ್ಷ ಹಣ ಪಡೆದು ಡೀಲ್ ಮಾಡಿದ ಶಂಕೆ ಹಿನ್ನೆಲೆ ವಶಕ್ಕೆ ಪಡೆಯಲಾಗಿದೆ. ಪಿಎಸ್ಐ ಅಭ್ಯರ್ಥಿಗಳಿಂದ ಶ್ರೀಕಾಂತ್ ಹಣ ಪಡೆದ ಅನುಮಾನ ವ್ಯಕ್ತವಾಗಿದೆ. ಕಳೆದ 6 ದಿನದಿಂದ ಜಮಖಂಡಿಯಲ್ಲಿ ಬೀಡುಬಿಟ್ಟಿದ್ದ ಸಿಐಡಿ ತಂಡ ಯರಗಟ್ಟಿಯ ಯಲ್ಲಮ್ಮ ದೇಗುಲಕ್ಕೆ ತೆರಳುತ್ತಿದ್ದಾಗ ಶ್ರೀಕಾಂತ್ ವಶಕ್ಕೆ ಪಡೆದಿದೆ. ಬನಹಟ್ಟಿ ಠಾಣೆಯಲ್ಲಿ ಶ್ರೀಕಾಂತ್ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: Pug Dog: ಮನೆಗೆ ನುಸುಳಿದ ನಾಗರಹಾವಿನ ಜೊತೆ ಸೆಣಸಾಡಿ ಪ್ರಾಣ ಬಿಟ್ಟ ಶ್ವಾನ! ಮನೆ ಮಾಲೀಕನ ರಕ್ಷಿಸಿ ನಿಯತ್ತಿಗೆ ತಾನೇ ಸಾರ್ಮಭೌಮ ಎಂದು ನಿರೂಪಿಸಿತು

Follow us on

Related Stories

Most Read Stories

Click on your DTH Provider to Add TV9 Kannada