AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯತಮೆ ಮನೆ ಬಾಗಿಲು ತೆರೆಯದಿದ್ದಕ್ಕೆ ಕಿಟಕಿಯಿಂದ ಆ್ಯಸಿಡ್ ಎರಚಿದ ಪ್ರಿಯಕರ

ಬಾಗಲಕೋಟೆ(Bagalakote) ತಾಲೂಕಿನ ಗದ್ದನಕೇರಿ ಕ್ರಾಸ್​ನಲ್ಲಿ  ಮಹಿಳೆ ಮನೆ ಬಾಗಿಲು ತೆರೆಯದ ಹಿನ್ನೆಲೆ ರೊಚ್ಚಿಗೆದ್ದ ಪ್ರಿಯಕರ ಕಿಟಕಿಯಿಂದ ನೀರು ಮಿಶ್ರಿತ ಆ್ಯಸಿಡ್ ಎರಚಿದ (Acid Attack) ಘಟನೆ ನಡೆದಿದೆ. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೌನೇಶ್ ಪತ್ತಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಅಪಾಯದಿಂದ ಮಹಿಳೆ ಪಾರಾಗಿದ್ದಾರೆ.

ಪ್ರಿಯತಮೆ ಮನೆ ಬಾಗಿಲು ತೆರೆಯದಿದ್ದಕ್ಕೆ ಕಿಟಕಿಯಿಂದ ಆ್ಯಸಿಡ್ ಎರಚಿದ ಪ್ರಿಯಕರ
ಮಹಿಳೆ ಮನೆ ಬಾಗಿಲು ತೆಗೆಯದಕ್ಕೆ ಕಿಟಕಿಯಿಂದ ಆ್ಯಸಿಡ್ ಎರಚಿದ ಪ್ರಿಯಕರ
ರವಿ ಹೆಚ್ ಮೂಕಿ, ಕಲಘಟಗಿ
| Edited By: ಕಿರಣ್ ಹನುಮಂತ್​ ಮಾದಾರ್|

Updated on:May 28, 2024 | 9:19 PM

Share

ಬಾಗಲಕೋಟೆ, ಮೇ.28: ಮಹಿಳೆ ಮನೆ ಬಾಗಿಲು ತೆರೆಯದ ಹಿನ್ನೆಲೆ ರೊಚ್ಚಿಗೆದ್ದ ಪ್ರಿಯಕರ ಕಿಟಕಿಯಿಂದ ನೀರು ಮಿಶ್ರಿತ ಆ್ಯಸಿಡ್ ಎರಚಿದ (Acid Attack) ಘಟನೆ ಬಾಗಲಕೋಟೆ(Bagalakote) ತಾಲೂಕಿನ ಗದ್ದನಕೇರಿ ಕ್ರಾಸ್​ನಲ್ಲಿ ನಡೆದಿದೆ. ಮೌನೇಶ್ ಪತ್ತಾರ ಆ್ಯಸಿಡ್ ಎರಚಿದ ವ್ಯಕ್ತಿ. ಈ ವೇಳೆ ಲಕ್ಷ್ಮಿ ಬಡಿಗೇರ ಎಂಬ ಮಹಿಳೆಯ ಎಡಗಣ್ಣು ಮತ್ತು ಮುಖದ ಮೇಲೆ ಗಾಯವಾಗಿದೆ. ಜೊತೆಗೆ ಆಕೆಯ ಎಂಟು ವರ್ಷದ ಮಗಳ ಮುಖಕ್ಕೂ ಅಲ್ಪ ಪ್ರಮಾಣದಲ್ಲಿ ಆ್ಯಸಿಡ್​ ತಗುಲಿದ್ದು, ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಾಯದಿಂದ ಪಾರಾದ ಮಹಿಳೆ; ಆರೋಪಿ ಬಂಧನ

ಈ ಘಟನೆ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೌನೇಶ್ ಪತ್ತಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಅಪಾಯದಿಂದ ಮಹಿಳೆ ಪಾರಾಗಿದ್ದಾರೆ. ಇಬ್ಬರು ವಿಜಯಪುರ ನಗರದ ಮೂರನಕೇರಿ ಮೂಲದವರಾಗಿದ್ದು, ಮೌನೇಶ್ ಮೂರ್ತಿ ತಯಾರಿಕೆ ಕೆಲಸ‌ ಮಾಡುತ್ತಿದ್ದ. ಇಬ್ಬರು ಪ್ರತ್ಯೇಕ ಬೇರೆ ಬೇರೆಯವರನ್ನು ಮದುವೆಯಾಗಿದ್ದರೂ ಅನಧಿಕೃತವಾಗಿ ಒಂದುವರೆ ತಿಂಗಳಿಂದ ಗದ್ದನಕೇರಿ ಕ್ರಾಸ್​ನಲ್ಲಿ ಒಂದೇ ಮನೆಯಲ್ಲಿ ಲೀವಿಂಗ್ ಟುಗೆದರ್ ರೀತಿ ವಾಸವಿದ್ದರು.

ಇದನ್ನೂ ಓದಿ:Acid Attack: ಪ್ರೀತಿಸಿ ಮೋಸ ಮಾಡಿದ ಪ್ರಿಯಕರನ ಮೇಲೆ ಆ್ಯಸಿಡ್​ ಎರಚಿದ ಯುವತಿ!

ಆಗಿದ್ದೇನು?

ಲಕ್ಷ್ಮಿ ಬಡಿಗೇರ‌‌ ಮೇಲೆ ಪದೆ ಪದೆ ಸಂಶಯಪಡುತ್ತಿದ್ದ ಮೌನೇಶ್, ಇದರಿಂದ‌‌ ಮೇಲಿಂದ ಮೇಲೆ‌ ಇಬ್ಬರ ನಡುವೆ ಜಗಳವಾಗುತ್ತಿತ್ತು. ಆದರೆ, ಕಳೆದ ಒಂದು ವಾರದಿಂದ ಮೌನೇಶ್ ‌ಮನೆ ಬಿಟ್ಟು ಹೋಗಿದ್ದ. ಈ ಹಿನ್ನಲೆ ಮಹಿಳೆ ಆತನ‌ ನಂಬರ್ ಬ್ಲಾಕ್ ಮಾಡಿದ್ದಳು. ನಿನ್ನೆ(ಮೇ.27) ರಾತ್ರಿ‌ ಮನೆಗೆ ವಾಪಸ್ ಬಂದಿದ್ದ ಮೌನೇಶ್​ಗೆ ಲಕ್ಷ್ಮಿ ಬಾಗಿಲು ತೆರೆದಿರಲಿಲ್ಲ. ಇದರಿಂದ‌ ಸಿಟ್ಟಿಗೆದ್ದ ಮೌನೇಶ್ ಕಿಟಕಿ ತೆಗೆದು ಆ್ಯಸಿಡ್ ದಾಳಿ ನಡೆಸಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:09 pm, Tue, 28 May 24

Follow Us
Ravi H Mooki
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More