Bagalakote: 2005ರಿಂದಲೂ ಪ್ರವಾಹಕ್ಕೆ ತುತ್ತಾಗುತ್ತಿರುವ ತಮದಡ್ಡಿ ಗ್ರಾಮ; ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಧರಣಿ

TV9 Digital Desk

| Edited By: ganapathi bhat

Updated on:Jul 31, 2021 | 7:25 PM

ಬಾಗಲಕೋಟೆ: ಪರಿಹಾರವಾಗಿ ಜಿಲ್ಲಾಡಳಿತ ಹಳಿಂಗಳಿ ಗುಡ್ಡದಲ್ಲಿ 89 ಎಕರೆ ಜಾಗ ಗುರುತಿಸಿದೆ ಎಂದು ತಿಳಿದುಬಂದಿದೆ. ಆದರೆ, ಇದುವರೆಗೂ ಸಂತ್ರಸ್ತರಿಗೆ ಜಿಲ್ಲಾಡಳಿತ ಹಕ್ಕುಪತ್ರ ವಿತರಿಸಿಲ್ಲ.

Bagalakote: 2005ರಿಂದಲೂ ಪ್ರವಾಹಕ್ಕೆ ತುತ್ತಾಗುತ್ತಿರುವ ತಮದಡ್ಡಿ ಗ್ರಾಮ; ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಧರಣಿ
ರಸ್ತೆ ತಡೆದು ಧರಣಿ

Follow us on

ಬಾಗಲಕೋಟೆ: ಇಲ್ಲಿನ ಪ್ರವಾಹ ಪೀಡಿತ ತಮದಡ್ಡಿ ಗ್ರಾಮಸ್ಥರು ಇಂದು (ಜುಲೈ 31) ದಿಢೀರ್​ ಪ್ರತಿಭಟನೆ ಕೈಗೊಂಡಿದ್ದಾರೆ. ಜಮಖಂಡಿ-ಕಾಗವಾಡ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಧರಣಿ ನಿರತರಾಗಿದ್ದಾರೆ. ಕೃಷ್ಣಾ ನದಿ ಪ್ರವಾಹದಲ್ಲಿ ಜಲಾವೃತವಾಗಿರುವ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ತಮದಡ್ಡಿ ಗ್ರಾಮ, 2005 ರಿಂದಲೂ ಪ್ರವಾಹಕ್ಕೆ ತುತ್ತಾಗುತ್ತಿದೆ. ಹೀಗಾಗಿ ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಮೊದಲು ಕೂಡ, 2005 ರಿಂದ ಹಲವು ಬಾರಿ ಪ್ರವಾಹಕ್ಕೆ ತುತ್ತಾಗಿದ್ದ ಗ್ರಾಮ ಇದಾಗಿದ್ದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಪರಿಹಾರವಾಗಿ ಜಿಲ್ಲಾಡಳಿತ ಹಳಿಂಗಳಿ ಗುಡ್ಡದಲ್ಲಿ 89 ಎಕರೆ ಜಾಗ ಗುರುತಿಸಿದೆ ಎಂದು ತಿಳಿದುಬಂದಿದೆ. ಆದರೆ, ಇದುವರೆಗೂ ಸಂತ್ರಸ್ತರಿಗೆ ಜಿಲ್ಲಾಡಳಿತ ಹಕ್ಕುಪತ್ರ ವಿತರಿಸಿಲ್ಲ. ಇದೀಗ, ಮತ್ತೆ ನೆರೆ ಉಂಟಾಗಿದೆ. ಹೀಗಾಗಿ, ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ತಮದಡ್ಡಿ ಗ್ರಾಮಸ್ಥರು ಧರಣಿ ನಿರತರಾಗಿದ್ದಾರೆ.

ರೋಸಿಹೋದ ತಮದಡ್ಡಿ ಗ್ರಾಮಸ್ಥರು ಹೆದ್ದಾರಿ ತಡೆದು ಧರಣಿ ನಡೆಸಿದ್ದಾರೆ. ಕೂಡಲೇ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ಹೆದ್ದಾರಿ ತಡೆ ನಡೆಸಿದ್ದಾರೆ. ಹೆದ್ದಾರಿ ತಡೆಯಿಂದ ನೂರಾರು ವಾಹನಗಳು ಸಾಲಾಗಿ ನಿಲ್ಲುವಂತಾಗಿದೆ.

ಬಾಗಲಕೋಟೆಯಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ಥ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕೃಷ್ಣಾ, ಘಟಪ್ರಭಾ ನದಿ ನೆರೆಯಿಂದ ಜಿಲ್ಲೆಯ 5 ತಾಲೂಕಿನ 50 ಗ್ರಾಮಗಳಲ್ಲಿ ಸಂಕಷ್ಟ ಎದುರಾಗಿದೆ. ಅತಿವೃಷ್ಟಿಯಿಂದ 96 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 38,058 ಜನರು, 35 ಸಾವಿರ ಜಾನುವಾರು ಜಾನುವಾರುಗಳನ್ನು ಸ್ಥಳಾಂತರ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 65 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕಾಳಜಿ ಕೇಂದ್ರದಲ್ಲಿ 15,180 ಜನ ಆಶ್ರಯ ಪಡೆದಿದ್ದಾರೆ. ಜಾನುವಾರುಗಳಿಗೆ 995 ಮೆಟ್ರಿಕ್ ಟನ್ ಮೇವು ಪೂರೈಕೆ ಮಾಡಲಾಗಿದೆ.

ಪ್ರವಾಹದಿಂದ 19,299 ಹೆಕ್ಟೇರ್ ಕೃಷಿ ಹಾಗೂ 796 ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಜಲಾವೃತವಾಗಿವೆ ಪಿಡಬ್ಲ್ಯುಡಿಯ 96 ಕಿ.ಮೀ. ರಸ್ತೆ, 3 ಸೇತುವೆಗೆ ಹಾನಿಯಾಗಿದೆ. ಜಿಲ್ಲಾ ಪಂಚಾಯತಿ ವ್ಯಾಪ್ತಿಯ 344 ಕಿ.ಮೀ. ರಸ್ತೆ, 19 ಸೇತುವೆಗೆ ಹಾನಿಯಾಗಿದೆ. 6,247 ವಿದ್ಯುತ್ ಕಂಬಗಳು, 1,859 ಟ್ರಾನ್ಸ್​ಫಾರ್ಮರ್, 17 ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿದೆ. ಪ್ರವಾಹದಿಂದ 63 ಅಂಗನವಾಡಿ, 30 ಶಾಲೆಗಳು ಜಲಾವೃತವಾಗಿದ್ದು, 19 ಕುಡಿಯುವ ನೀರಿನ ಯೋಜನೆಗಳಿಗೆ ಹಾನಿಯಾಗಿದೆ.

ಇದನ್ನೂ ಓದಿ: ಪ್ರವಾಹಕ್ಕೆ ನಲುಗಿದ ರೈತರ ಬದುಕು; ಬೆಳಗಾವಿಯಲ್ಲಿ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ

ಕೃಷ್ಣಾ, ಘಟಪ್ರಭಾ ನದಿ ನೆರೆಯಿಂದ ತತ್ತರಿಸಿದ ಬಾಗಲಕೋಟೆ; 96 ಮನೆಗಳಿಗೆ ಹಾನಿ

(Jamakhandi Kagawada State Highway bundh Protest by Thamadaddi Villagers amid Karnataka Rains Flood)

ತಾಜಾ ಸುದ್ದಿ

Related Stories

Click on your DTH Provider to Add TV9 Kannada