ಸೆಂಚುರಿ ಬಾರಿಸಿದ ಬಿಳಿಜೋಳ: ಉತ್ತರ ಕರ್ನಾಟಕದ ರೊಟ್ಟಿ ಇನ್ಮುಂದೆ ತುಟ್ಟಿ

ಉತ್ತರ ಕರ್ನಾಟಕದಲ್ಲಿ ಜೋಳದ ಬೆಲೆ ಕೆಜಿಗೆ 100 ರೂ ಗಡಿ ದಾಟಿದೆ. ಇತಿಹಾಸದಲ್ಲೇ ಇದೇ ಮೊದಲ‌ ಬಾರಿಗೆ ಇಷ್ಟೊಂದು ದುಬಾರಿ ಎನ್ನಲಾಗುತ್ತಿದೆ. ಇದರಿಂದ ರೈತರಿಗೆ ಬಂಪರ್ ಲಾಭವಾದರೂ, ರೊಟ್ಟಿ ಪ್ರಿಯರು ಮತ್ತು ಖಾನಾವಳಿ ಮಾಲೀಕರಿಗೆ ದರ ಏರಿಕೆ ಬಿಸಿ ತಟ್ಟಿದೆ. ಮಾರುಕಟ್ಟೆಯಲ್ಲಿ ಜೋಳದ ಕೊರತೆ ಎದುರಾಗಿದೆ.

ಸೆಂಚುರಿ ಬಾರಿಸಿದ ಬಿಳಿಜೋಳ: ಉತ್ತರ ಕರ್ನಾಟಕದ ರೊಟ್ಟಿ ಇನ್ಮುಂದೆ ತುಟ್ಟಿ
ಜೋಳ
Edited By:

Updated on: Nov 18, 2026 | 4:02 PM

ಮುಖ್ಯಾಂಶಗಳು

  • ಕೆಜಿಗೆ 100 ರೂ ಗಡಿ ದಾಟಿದ ಜೋಳದ ಬೆಲೆ
  • ಇತಿಹಾಸದಲ್ಲೇ ಇದೇ ಮೊದಲ‌ ಬಾರಿಗೆ ಇಷ್ಟೊಂದು ದುಬಾರಿ
  • ರೈತರು ಕಬ್ಬು ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳತ್ತ ಮುಖ

ಬಾಗಲಕೋಟೆ, ನವೆಂಬರ್​​ 18: ಉತ್ತರ ಕರ್ನಾಟಕದ ಜನರ ನೆಚ್ಚಿನ ಆಹಾರವಾದ ಜೋಳದ ರೊಟ್ಟಿಗೆ ಇದೀಗ ಬೆಲೆ ಏರಿಕೆಯ ಬಿಸಿ ತಟ್ಟುವ ಆತಂಕ ಶುರುವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಬಿಳಿಜೋಳದ ಬೆಲೆ ಕೆಜಿಗೆ 100 ರೂ ಗಡಿ ದಾಟಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 100ರಿಂದ 110 ರೂಪಾಯಿವರೆಗೆ ಮಾರಾಟವಾಗುತ್ತಿದೆ. ರೈತರು ಬೆಳೆದ ಜೋಳಕ್ಕೆ ಬಂಪರ್ ಬೆಲೆ ಸಿಕ್ಕಿದ್ದರೂ, ಗ್ರಾಹಕರು ಮಾತ್ರ ದುಬಾರಿ ದರದಿಂದ ಶಾಕ್​ ಆಗಿದ್ದಾರೆ.

ಕ್ವಿಂಟಲ್‌ಗೆ 10 ಸಾವಿರ ರೂ ದಾಟಿದ ಬೆಲೆ

ಕಳೆದ ದಿನಗಳಲ್ಲಿ ಪ್ರತಿ ಕ್ವಿಂಟಲ್‌ಗೆ ಸುಮಾರು 5 ಸಾವಿರ ರೂ ಇದ್ದ ಜೋಳದ ಬೆಲೆ ಇದೀಗ ದ್ವಿಗುಣಗೊಂಡಿದೆ. ಪ್ರಸ್ತುತ ಕ್ವಿಂಟಲ್‌ಗೆ 10 ಸಾವಿರ ರೂ ದಾಟಿದ್ದು, ಕೆಜಿಗೆ 100ರಿಂದ 110 ರೂ. ವರೆಗೆ ತಲುಪಿದೆ. ಹಿಂದೆ ಕೆಜಿಗೆ 40ರಿಂದ 50 ರೂ, ಇದ್ದ ಜೋಳದ ಬೆಲೆ ಈಗ ದುಪ್ಪಟ್ಟಾಗಿರುವುದು ಮಾರುಕಟ್ಟೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Loading...

ಜೋಳದ ಬಿತ್ತನೆ ಪ್ರಮಾಣದಲ್ಲಿ ಭಾರೀ ಇಳಿಕೆ

ಬಾಗಲಕೋಟೆ ಜಿಲ್ಲೆಯಲ್ಲಿ ಈ ಹಿಂದೆ ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿತ್ತು. ಆದರೆ ಇದೀಗ ಜೋಳದ ಬಿತ್ತನೆ ಪ್ರಮಾಣ 30ರಿಂದ 40 ಸಾವಿರ ಹೆಕ್ಟೇರ್‌ಗೆ ಸೀಮಿತವಾಗಿದೆ. ರೈತರು ಜೋಳದ ಬದಲಿಗೆ ಕಬ್ಬು ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಬರಗಾಲದ ಪರಿಣಾಮವೂ ಜೋಳದ ಇಳುವರಿ ಮತ್ತು ಉತ್ಪಾದನೆಯ ಮೇಲೆ ಬೀರಿದೆ.

ಮಾರುಕಟ್ಟೆಯಲ್ಲಿ ಜೋಳದ ಖರೀದಿ ಪ್ರಮಾಣ ಇಳಿಕೆ

ಜೋಳದ ಬೆಲೆ ಹೆಚ್ಚಳದಿಂದಾಗಿ ಮಾರುಕಟ್ಟೆಯಲ್ಲಿ ಖರೀದಿಯೂ ಕಡಿಮೆಯಾಗಿದೆ. ಈ ಹಿಂದೆ ದಿನಕ್ಕೆ 2ರಿಂದ 3 ಕ್ವಿಂಟಲ್ ಜೋಳ ಮಾರಾಟವಾಗುತ್ತಿತ್ತು. ಆದರೆ ಈಗ ಗರಿಷ್ಠ ಒಂದು ಕ್ವಿಂಟಲ್ ಮಾತ್ರ ಮಾರಾಟವಾಗುತ್ತಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಮತ್ತೊಂದೆಡೆ, ಬಿತ್ತನೆ ಪ್ರಮಾಣ ಕಡಿಮೆಯಾಗಿರುವುದರಿಂದ ರೈತರಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಜೋಳ ಪೂರೈಕೆಯಾಗುತ್ತಿಲ್ಲ.

ರೊಟ್ಟಿ ಊಟದ ಬೆಲೆಯೂ ಹೆಚ್ಚಳ ಆತಂಕ

ಇನ್ನು ಜೋಳದ ಬೆಲೆ ಏರಿಕೆಯಿಂದ ಉತ್ತರ ಕರ್ನಾಟಕದ ಜನರ ನೆಚ್ಚಿನ ಜೋಳದ ರೊಟ್ಟಿ ಊಟದ ಬೆಲೆಯೂ ಹೆಚ್ಚಾಗುವ ಆತಂಕ ಎದುರಾಗಿದೆ. ಈಗಾಗಲೇ ಜೋಳ ಖರೀದಿಸಲು ಹೆಚ್ಚಿನ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರೊಟ್ಟಿ ಊಟದ ದರವನ್ನೂ ಜಾಸ್ತಿ ಮಾಡುವುದು ಅನಿವಾರ್ಯ ಎನ್ನುತ್ತಿದ್ದಾರೆ ಖಾನಾವಳಿ ಮಾಲೀಕರು.

Jowar Price Hike: ಇತಿಹಾಸದಲ್ಲೇ ಮೊದಲ ಬಾರಿಗೆ ಸೆಂಚ್ಯೂರಿ ಬಾರಿಸಿದ ಜೋಳ.. ರೊಟ್ಟಿ ತುಟ್ಟಿ ಗ್ರಾಹಕ ಆತಂಕ | #TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:01 pm, Wed, 18 November 26

ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Loading...
Unable to load recommendations.
Follow Us