ಸಿದ್ದರಾಮಯ್ಯನವರ ಬಜೆಟ್ ಮುಸಲ್ಮಾನರಿಗೆ ರಂಜಾನ್ ಕೊಡುಗೆ: ಬಿಜೆಪಿ ರಾಜ್ಯಸಭಾ ಸದಸ್ಯ ವ್ಯಂಗ್ಯ

ಸಿಎಂ ಸಿದ್ದರಾಮಯ್ಯ ಮಂಡಿಸಿರೋ ಬಜೆಟ್​ನ ಗಾತ್ರ ಬರೋಬ್ಬರಿ 4 ಲಕ್ಷ ಕೋಟಿ. ಹೌದು, ಸಿಎಂ ಸಿದ್ದರಾಮಯ್ಯ ಇಂದು (ಮಾರ್ಚ್​ 07) ತಮ್ಮ 16ನೇ ಬಜೆಟ್ ಮಂಡನೆ ಮಾಡಿದ್ದಾರೆ. ಕಳೆದ ವರ್ಷ 3 ಲಕ್ಷ 71 ಸಾವಿರದ 383 ಕೋಟಿ ರೂ. ಬಜೆಟ್ ಗಾತ್ರವಿತ್ತು. ಈ ಬಾರಿ ಈ ಅಂಕಿ 4 ಲಕ್ಷ ಕೋಟಿ ದಾಟಿದೆ. ಅಂದ್ರೆ 4 ಲಕ್ಷ 9 ಸಾವಿರದ 549 ಕೋಟಿ ರೂಪಾಯಿಯ ದಾಖಲೆಯ ಬಜೆಟ್ ಇದಾಗಿದೆ. ಆದ್ರೆ, ಈ ಬಜೆಟ್​ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ನಾನಾ ರೀತಿ ವ್ಯಂಗ್ಯವಾಡುತ್ತಿದ್ದಾರೆ.

ಸಿದ್ದರಾಮಯ್ಯನವರ ಬಜೆಟ್ ಮುಸಲ್ಮಾನರಿಗೆ ರಂಜಾನ್ ಕೊಡುಗೆ: ಬಿಜೆಪಿ ರಾಜ್ಯಸಭಾ ಸದಸ್ಯ ವ್ಯಂಗ್ಯ
Narayanasa Bhandage
Edited By:

Updated on: Mar 07, 2025 | 3:20 PM

ಬಾಗಲಕೋಟೆ, (ಮಾರ್ಚ್​ 07): 2025ನೇ ಸಾಲಿನ ಕರ್ನಾಟಕ ಬಜೆಟ್​​ ಇಂದು (ಮಾರ್ಚ್​ 07) ಮಂಡನೆಯಾಗಿದ್ದು, ಸಿದ್ದರಾಮಯ್ಯ ಮಂಡಿಸಿರೋ ಬಜೆಟ್​ನ ಗಾತ್ರ ಬರೋಬ್ಬರಿ 4 ಲಕ್ಷ ಕೋಟಿ ರೂ ಆಗಿದೆ.. ಈ ಮೂಲಕ ಸಿದ್ದರಾಮಯ್ಯನವರು ದಾಖಲೆ ಬರೆದಿದ್ದಾರೆ. ಇನ್ನು ಈ ಬಜೆಟ್​ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸಿದ್ದರಾಮಯ್ಯನವರ ಬಜೆಟ್ ಮುಸಲ್ಮಾನರಿಗೆ ರಂಜಾನ್ ಕೊಡುಗೆ. ಸರ್ಕಾರ ರಂಜಾನ್ ಹಬ್ಬದ ಇಫ್ತಾರ್ ಕೂಟದ ಔತಣವನ್ನು ಪೂರ್ಣವಾಗಿ ಕೊಟ್ಟಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಬಾಗಲಕೋಟೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರ ಬಜೆಟ್ ಮುಸಲ್ಮಾನರಿಗೆ ರಂಜಾನ್ ಕೊಡುಗೆ. ಸರ್ಕಾರ ರಂಜಾನ್ ಹಬ್ಬದ ಇಫ್ತಾರ್ ಕೂಟದ ಔತಣವನ್ನು ಪೂರ್ಣವಾಗಿ ಕೊಟ್ಟಿದೆ. ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸಲ್ಮಾನರಿಗೆ ಕೊಟ್ಟ ಅನುದಾನ ನೋಡಿದ್ರೆ, ಇದು ಮುಸಲ್ಮಾನರ ಸರ್ಕಾರ ಅನ್ನೋದನ್ನ ಸಿದ್ದರಾಮಯ್ಯ ಮತ್ತೊಮ್ಮೆ ಸಿದ್ದ ಮಾಡಿಕೊಟ್ಟಿದ್ದಾರೆ. ರಾಹುಲ್ ಗಾಂಧಿ ಹೇಳಿದಂತೆ ಇನ್ನೊಮ್ಮೆ ಇದು ಮುಸಲ್ಮಾನರ ಸರ್ಕಾರ ಎನ್ನುವುದನ್ನ ದೃಢಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Budget 2025 Highlights: 16ನೇ ಬಾರಿಗೆ ಬಜೆಟ್​ ಮಂಡಿಸಿ ದಾಖಲೆ ನಿರ್ಮಿಸಿದ ಸಿಎಂ ಸಿದ್ದರಾಮಯ್ಯ, ಸ್ವೀಟ್​ 16

ಅಲ್ಪಸಂಖ್ಯಾತ 16 ಮಹಿಳಾ ಕಾಲೇಜ್, 100 ಉರ್ದು ಶಾಲೆಗೆ ಹೈಟೆಕ್ ಟಚ್, ಹಜ್ ಭವನ ನಿರ್ಮಾಣಕ್ಕೆ ದುಡ್ಡು ಕೊಡ್ತಿದ್ದಾರೆ. ಮುಸಲ್ಮಾನರ ಮದುವೆಗೆ ಸಹಾಯಧನ ಕೊಟ್ಟಿದ್ದಾರೆ. ಮುಸಲ್ಮಾನರು ಎಂದು ಹೇಳಬಾರದು ಎನ್ನುವ ಸಲುವಾಗಿ ಅಲ್ಪಸಂಖ್ಯಾತರು ಎಂದು ಹೇಳಿದ್ದಾರೆ. 25 ಸಾವಿರ ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣಾ ತರಬೇತಿ. ಯಾಕೆ, ಅವರಿಗೆ ಯಾಕೆ ರಕ್ಷಣಾ ತರಬೇತಿ? ಬೇರೆ ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣೆ ಬೇಡವೇನು ಎಂದು ಪ್ರಶ್ನಿಸಿದರು.

ಇದನ್ನೂ ಓದಿ
ಬಜೆಟ್ ಗಾತ್ರ 4.09 ಲಕ್ಷ ಕೋಟಿ ರೂ; ಪೂರ್ಣ ವಿವರ
ಸಿದ್ದರಾಮಯ್ಯ ಬಜೆಟ್​ನಲ್ಲಿ ಯಾವ ಇಲಾಖೆ ಎಷ್ಟೆಷ್ಟು ಸಿಕ್ತು? ಇಲ್ಲಿದೆ ವಿವರ
ಸದ್ದಿಲ್ಲದೇ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಘೋಷಿಸಿದ ಸಿದ್ದರಾಮಯ್ಯ!
ವಕ್ಫ್ ಆಸ್ತಿ, ಮುಸ್ಲಿಂ ಸ್ಮಾಶನಗಳ ರಕ್ಷಣೆಗೆ 150 ಕೋಟಿ ರೂ: ಸಿದ್ದರಾಮಯ್ಯ

ಈ ಬಜೆಟ್ ನಲ್ಲಿ ಹುಡುಕಿ ಹುಡುಕಿ ಮುಸಲ್ಮಾನರಿಗೆ ಎನ್ ಕೊಡಬೇಕೆಂದು ರಂಜಾನ್ ಹಬ್ಬದ ಕೊಡುಗೆಯಾಗಿ ಸಂಪೂರ್ಣ ಬಜೆಟ್ ನ ಮುಸಲ್ಮಾನರಿಗೆ ಕೊಟ್ಟಿದ್ದಾರೆ. ಎಲ್ಲವನ್ನೂ ಮುಸಲ್ಮಾನರಿಗೆ ಕೊಟ್ಟ ಈ ಸರ್ಕಾರದ್ದು ಬೋಗಸ್ ಬಜೆಟ್ ಉರ್ದು ಉರ್ದು ಅಂತ ಅಲ್ಪಸಂಖ್ಯಾತರ ಹೆಸರಿನಲ್ಲಿ ಎಲ್ಲವನ್ನೂ ಮುಸಲ್ಮಾನರಿಗೆ ಕೊಟ್ಟಿದ್ದು, ಇದು ತಾರತಮ್ಯ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಬಾಗಲಕೋಟೆಗೆ ಮೆಡಿಕಲ್ ಕಾಲೇಜು 10 ವರ್ಷಗಳ ಹಿಂದೆ ಸಿದ್ದರಾಮಯ್ಯನವರೆ ನೀವೇ ಘೋಷಣೆ ಮಾಡಿದ್ರಿ. ಇವತ್ತಿನವರೆಗೆ ಒಂದು ರೂಪಾಯಿ ಸಹಿತ ಅನುಧಾನ ಅದಕ್ಕೆ ಇಟ್ಟಿಲ್ಲ. ಪುನಃ ಅದಕ್ಕೆ ಅದೇ ಮಾತನ್ನ ಈ ಬಜೆಟ್ ನಲ್ಲಿ ಹೇಳಿದ್ದೀರಿ. ಎಸ್ಸಿಎಸ್ಟಿ ಜನಾಂಗಕ್ಕೆ ಯಾವುದೇ ಹೊಸ ಯೋಜನೆ ಕೂಡ ಮಾಡಿಲ್ಲ. ನಿಮಗೆ ರಾಜಕೀಯ ಪುನರ್ಜನ್ಮ ನೀಡಿದ ಬಾದಾಮಿ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ಕೊಟ್ಟಿಲ್ಲ. ಲಲಿತಕಲಾ ವಿಶ್ವವಿದ್ಯಾಲಯಕ್ಕೆ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. ರಾಜ್ಯದ ಜನ ನಿಮ್ಮ ಮೇಲೆ ಇಟ್ಟ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ, ತಾರತಮ್ಯ ಮಾಡಿ ಅಲ್ಪಸಂಖ್ಯಾತರ ಹೆಸರಿನಲ್ಲಿ ಈ ಬಜೆಟ್ ಸಂಪೂರ್ಣ ಮುಸಲ್ಮಾನರ ಬಜೆಟ್ ಅಂತ ಹೇಳುತ್ತೇನೆ ಎಂದರು.

ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ