ವಕ್ಫ್ ಆಸ್ತಿ, ಮುಸ್ಲಿಂ ಸ್ಮಾಶನಗಳ ರಕ್ಷಣೆಗೆ 150 ಕೋಟಿ ರೂ: ಸಿದ್ದರಾಮಯ್ಯ ಘೋಷಣೆ
ಕರ್ನಾಟಕ ಬಜೆಟ್ 2025: ವಕ್ಫ್ ಆಸ್ತಿ ಸಂಬಂಧ ರಾಜ್ಯದಾದ್ಯಂತ ಇತ್ತೀಚೆಗೆ ಬಹಳಷ್ಟು ಚರ್ಚೆಗಳಾಗಿದ್ದವು. ರೈತರ ಜಮೀನು ತನ್ನದೆಂದು ವಕ್ಫ್ ನೋಟಿಸ್ ಕಳುಹಿಸಿದ್ದ ವಿಚಾರ ವವಾದಕ್ಕೀಡಾಗಿತ್ತು. ಇಂಥ ಸಂದರ್ಭದಲ್ಲೇ ವಕ್ಫ್ ಆಸ್ತಿಯ ರಕ್ಷಣೆ ಮತ್ತು ಮುಸ್ಲಿಂ ಸ್ಮಶಾನಗಳ ರಕ್ಷಣೆಗಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ಭರ್ಜರಿ ಅನುದಾನ ಘೋಷಣೆ ಮಾಡಿದ್ದಾರೆ.

ಬೆಂಗಳೂರು, ಮಾರ್ಚ್ 7: ವಕ್ಫ್ ಆಸ್ತಿಗಳ ದುರಸ್ತಿ ಮತ್ತು ನವೀಕರಣ, ಮುಸ್ಲಿಂ ಸ್ಮಶಾನಗಳ ರಕ್ಷಣೆಗಾಗಿ ಮೂಲಸೌಕರ್ಯ ಒದಗಿಸಲು 150 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬಜೆಟ್ನಲ್ಲಿ (Karnataka Budget 2025) ಘೋಷಣೆ ಮಾಡಿದರು. ದೇಶದಾದ್ಯಂತ ವಕ್ಫ್ ಆಸ್ತಿ ವಿಚಾರ ಚರ್ಚೆಯಲ್ಲಿರುವ ಮತ್ತು ರಾಜ್ಯದಲ್ಲಿ ಅನೇಕ ರೈತರ ಜಮೀನಿಗೆ ಸಂಬಂಧಿಸಿ ವಕ್ಫ್ ಆಸ್ತಿ ಎಂಬ ನೋಟಿಸ್ ಬಂದಿರುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲೇ ಸಿದ್ದರಾಮಯ್ಯ ಬಜೆಟ್ನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.
ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಅಭಿವೃದ್ದಿ ಅಡಿ ಆಯ್ದ 100 ಉನ್ನತ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು 400 ಕೋಟಿ ರೂ. ಅನುದಾನ ನೀಡಲಾಗುತ್ತಿದ್ದು, ಈ ವರ್ಷ 100 ಕೋಟಿ ರೂ. ಬಿಡುಗಡೆ ಮಾಡಲಾಗುವುದು.ಮದರಸ ಶಿಕ್ಷಣ ಬಲಪಡಿಸುವ ಯೋಜನೆಯಡಿ ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್ ಮತ್ತಿತರ ಸೌಲಭ್ಯಗಳೊಂದಿಗೆ NIOS ಮುಖಾಂತರ SSLC ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಬಜೆಟ್ನಲ್ಲಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಮೂಲಕ ಉದ್ಯೋಗ ಹಾಗೂ ತರಬೇತಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಉಳ್ಳಾಲದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ವಸತಿ ಸಹಿತ ಕಾಲೇಜು ನಿರ್ಮಾಣ ಘೋಷಣೆ ಮಾಡಲಾಗಿದೆ.
ಮುಸ್ಲಿಮರಿಗೆ ಬಜೆಟ್ನಲ್ಲಿ ಬೇರೆ ಏನೇನು ಕೊಡುಗೆ?
- ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಗೆ 1000 ಕೋಟಿ ಅನುದಾನ.
- ಮದರಸಗಳ ಸೌಕರ್ಯವೃದ್ಧಿ – ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್, SSLC ಪರೀಕ್ಷೆ ಬರೆಯಲು NIOS ಮೂಲಕ ತರಬೇತಿ.
- ಅಲ್ಪಸಂಖ್ಯಾತ ಉದ್ಯಮಶೀಲತೆ – ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮೂಲಕ ಸ್ಟಾರ್ಟ್-ಅಪ್ಗೆ ಬೆಂಬಲ.
- ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ – ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಸತಿ ಆಶ್ರಯದಲ್ಲಿ ಮುಕ್ತ ತರಬೇತಿ.
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಕೇಂದ್ರ ಹಜ್ ಭವನದಲ್ಲಿ ಸ್ಥಾಪನೆ.
- ಹಜ್ ಭವನ ವಿಸ್ತರಣೆ – ಹಜ್ ಯಾತ್ರಿಕರ ಅನುಕೂಲಕ್ಕೆ ಹೊಸ ಕಟ್ಟಡ ನಿರ್ಮಾಣ
- ಸಾಮೂಹಿಕ ಮದುವೆ ನೆರವು – ನಾನ್‌ಗೋಗಳಿಗೆ ₹50,000 ಮದುವೆ ವೆಚ್ಚದ ನೆರವು
- ವೃತ್ತಿಪರ ಕೋರ್ಸುಗಳ ಶುಲ್ಕ ಪರಿಹಾರ – KEA ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 50% (₹5 ಲಕ್ಷದವರೆಗೆ) ಶುಲ್ಕ ಮರಳಿ ಪಾವತಿ.
- ವಿದೇಶಿ ಅಧ್ಯಯನ ವಿದ್ಯಾರ್ಥಿವೇತನ, ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನವನ್ನು ₹20 ಲಕ್ಷದಿಂದ ₹30 ಲಕ್ಷಕ್ಕೆ ಹೆಚ್ಚಿಸಲಾಗಿದೆ.
- ಮಸೀದಿಗಳ ಪೇಶ್-ಇಮಾಮ್, ಮಝಿನ್ ಗೌರವಧನ – ಪೇಶ್-ಇಮಾಮ್‌ಗೆ ₹6,000 ಮತ್ತು ಮಝಿನ್‌ಗೆ ₹5,000 ಮಾಸಿಕ ಗೌರವಧನ
ಇದನ್ನೂ ಓದಿ: ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್: 2 ಕೋಟಿ ರೂ.ವರೆಗಿನ ಕಾಮಗಾರಿಗಳಲ್ಲಿ ಗುತ್ತಿಗೆ ಮೀಸಲಾತಿ
ಕರ್ನಾಟಕ ಬಜೆಟ್ ಲೈವ್ ಅಪ್ಡೇಟ್ಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:06 am, Fri, 7 March 25