Karnataka Budget 2025 Live TV: ಕರ್ನಾಟಕ ಬಜೆಟ್ ಲೈವ್ ಇಲ್ಲಿ ವೀಕ್ಷಿಸಿ
ಕರ್ನಾಟಕ ಬಜೆಟ್ 2025 ಟಿವಿ ನೇರಪ್ರಸಾರ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 16 ನೇ ಬಜೆಟ್ ಅನ್ನು ಮಂಡಿಸುತ್ತಿದ್ದು, ಈ ಬಜೆಟ್ ಬಗ್ಗೆ ತೀವ್ರ ನಿರೀಕ್ಷೆಗಳಿವೆ. ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯ ನಡುವೆ ಸಮತೋಲನವನ್ನು ಹೇಗೆ ಸಾಧಿಸುತ್ತದೆ ಎಂಬ ಕುತೂಹಲವೂ ಜನರಲ್ಲಿದೆ. ಬಜೆಟ್ ಮಂಡನೆಯ ನೇರ ಪ್ರಸಾರ ‘ಟಿವಿ9’ ಲೈವ್ ಟಿವಿಯಲ್ಲಿ ನೋಡಿ.

ಬೆಂಗಳೂರು, ಮಾರ್ಚ್ 7: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು 2025-26ನೇ ಸಾಲಿನ ಕರ್ನಾಟಕದ ಬಜೆಟ್ (Karnataka Budget 2025) ಅನ್ನು ಇಂದು ಮಂಡಿಸುತ್ತಿದ್ದಾರೆ. ಇದು ಸಿದ್ದರಾಮಯ್ಯ ಮಂಡಿಸುತ್ತಿರುವ ದಾಖಲೆಯ 16 ನೇ ಬಜೆಟ್ ಆಗಿದೆ. ಇದರೊಂದಿಗೆ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಅತ್ಯಧಿಕ ಬಜೆಟ್ ಮಂಡಿಸಿದ ಹೆಗ್ಗಳಿಕೆ ಅವರದ್ದಾಗುತ್ತಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿನ ಮೂರನೇ ಬಜೆಟ್ ಇದಾಗಿದೆ. ಐದು ಗ್ಯಾರಂಟಿ ಯೋಜನೆಗಳಿಗೆ ಈ ಹಿಂದೆಯೇ ಸುಮಾರು 52,000 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಈ ಮುಂಗಡ ಪತ್ರದಲ್ಲಿ ಹೊಸ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಗಳಿವೆ. ಬಜೆಟ್ ಮಂಡನೆಯ ನೇರ ಪ್ರಸಾರ ಇಲ್ಲಿ ನೋಡಬಹುದಾಗಿದೆ.
ಕರ್ನಾಟಕ ಬಜೆಟ್ ಲೈವ್ ಇಲ್ಲಿ ನೋಡಿ
ಕರ್ನಾಟಕದ ರಾಜಧಾನಿಯಾಗಿ, ಬೆಂಗಳೂರು ತಕ್ಷಣದ ಮತ್ತು ಸುಸ್ಥಿರ ಪರಿಹಾರಗಳನ್ನು ಬೇಡುವ ಹಲವಾರು ನಾಗರಿಕ ಸವಾಲುಗಳೊಂದಿಗೆ ಹೋರಾಡುತ್ತಲೇ ಇದೆ. ಮಾರ್ಚ್ 3 ರಂದು ಪ್ರಾರಂಭವಾದ ಬಜೆಟ್ ಅಧಿವೇಶನವು ಈಗಾಗಲೇ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯನ್ನು ಮಂಡಿಸುವುದು ಸೇರಿದಂತೆ ಮಹತ್ವದ ಚರ್ಚೆಗಳನ್ನು ಕಂಡಿದೆ. ವಿಧಾನಸಭೆಯಲ್ಲಿ ಜಂಟಿ ಸಮಿತಿಯು ಮಂಡಿಸಿದ ಈ ಮಸೂದೆಯು ಬೆಂಗಳೂರನ್ನು ಏಳು ನಿಗಮಗಳಾಗಿ ವಿಭಜಿಸುವ ಪ್ರಸ್ತಾಪವನ್ನು ಹೊಂದಿದೆ. ಬಿಜೆಪಿ ಮತ್ತು ಜೆಡಿಎಸ್ ಈ ಕ್ರಮವನ್ನು ವಿರೋಧಿಸಿದ್ದರೂ, ಮುಖ್ಯಮಂತ್ರಿಗಳು ಬಜೆಟ್‌ನ ಗಣನೀಯ ಭಾಗವನ್ನು ನಗರಕ್ಕೆ ಮೀಸಲಿಡುವ ನಿರೀಕ್ಷೆಯಿದೆ.
ಬೆಂಗಳೂರಿಗೆ ಹೆಚ್ಚಿನ ಅನುದಾನ ನಿರೀಕ್ಷೆ
ಹೆಚ್ಚುವರಿಯಾಗಿ, ಪ್ರಸ್ತಾವಿತ ಸುರಂಗ ಮಾರ್ಗಗಳು ಮತ್ತು ಬೆಂಗಳೂರಿಗೆ ಸ್ಕೈಡೆಕ್‌ನಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಬಜೆಟ್ನಲ್ಲಿ ಅನುದಾನ ಘೋಷಿಸುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಕ್ವಿನ್ ಸಿಟಿ ಮತ್ತು ಸ್ವಿಫ್ಟ್ ಸಿಟಿಯಂತಹ ಸಮಾನಾಂತರ ನಗರಗಳ ಅಭಿವೃದ್ಧಿಯನ್ನು ಸರ್ಕಾರ ಈಗಾಗಲೇ ಘೋಷಿಸಿದೆ. ಈ ಯೋಜನೆಗಳಿಗೆ ಗಮನಾರ್ಹ ಅನುದಾನ ನೀಡುವ ನಿರೀಕ್ಷೆಗಳು ಗರಿಗೆದರಿವೆ.
ಏತನ್ಮಧ್ಯೆ, ಬಜೆಟ್‌ಗೂ ಕೆಲವೇ ದಿನಗಳ ಮುನ್ನ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಹೆಚ್ಚಿಸುವಂತೆ ಕೋರಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ರಸ್ತೆಗಳಂತಹ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಗಾಗಿ ಪ್ರತಿ ಕ್ಷೇತ್ರಕ್ಕೆ 50 ಕೋಟಿ ರೂ.ಗಳ ಅನುದಾನಕ್ಕಾಗಿ ಅವರು ಒತ್ತಾಯಿಸಿದ್ದರು.
ಕರ್ನಾಟಕ ಬಜೆಟ್ ಲೈವ್ ಅಪ್ಡೇಟ್ಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಕಳೆದ ಹಣಕಾಸು ವರ್ಷದಲ್ಲಿ ಕೊರತೆ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ, ಮುಂದಿನ ಬಾರಿ ಆದಾಯ ಹೆಚ್ಚುವರಿ ಬಜೆಟ್ ಘೋಷಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ, ಹೆಚ್ಚಿದ ಆದಾಯ ವೆಚ್ಚವು ಸರ್ಕಾರವನ್ನು ಹೆಚ್ಚಿನ ಸಾಲಕ್ಕೆ ಆಶ್ರಯಿಸುವಂತೆ ಮಾಡಿದೆ ಎಂದು ಅವರು ಹೇಳಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:40 am, Fri, 7 March 25