AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಎರಡು ದಶಕದಿಂದ ಬಿಲ್ ಕಟ್ಟದ ಶಿರೋಳ ಗ್ರಾಮ! ಬಾಕಿ ಬಿಲ್ ಮೊತ್ತ ಎಷ್ಟು ಗೊತ್ತಾ?

ಸರ್ಕಾರ ಈಗ ಉಚಿತವಾಗಿ 200 ಯುನಿಟ್ ವಿದ್ಯುತ್ ಘೋಷಣೆ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯ ಶಿರೋಳ ಗ್ರಾಮದ ಜನರು ಕಳೆದ 2 ದಶಕದಿಂದ ಬಿಲ್ ಕಟ್ಟದೇ ಇರುವ ಸಂಗತಿ ಬೆಳಕಿಗೆ ಬಂದಿದೆ.

ಬಾಗಲಕೋಟೆ: ಎರಡು ದಶಕದಿಂದ ಬಿಲ್ ಕಟ್ಟದ ಶಿರೋಳ ಗ್ರಾಮ! ಬಾಕಿ ಬಿಲ್ ಮೊತ್ತ ಎಷ್ಟು ಗೊತ್ತಾ?
ಎರಡು ದಶಕದಿಂದ ಬಿಲ್ ಕಟ್ಟದ ಶಿರೋಳ ಗ್ರಾಮದ ಜನರುImage Credit source: Anda Chu, Bay Area News Group
Rakesh Nayak Manchi
|

Updated on:Jun 04, 2023 | 9:24 AM

Share

ಬಾಗಲಕೋಟೆ: ನಮಗೆಲ್ಲರಿಗೂ ಜುಲೈ 1 ರಿಂದ 200 ಯುನಿಟ್ ವರೆಗೆ ವಿದ್ಯುತ್ (200 Unit Free Electricity) ಅನ್ನು ಉಚಿತವಾಗಿ ಬಳಕೆ ಮಾಡಬಹುದು. ಆದರೆ ಈ ಗ್ರಾಮದಲ್ಲಿ ಕಳೆದ 2 ದಶಕದಿಂದ ಕರೆಂಟ್ ಬಿಲ್ಲನ್ನೇ ಕಟ್ಟಿಲ್ಲವಂತೆ ಮಾರಾಯ್ರೆ! ಹೌದು, ಸರ್ಕಾರ ಈಗ ಉಚಿತವಾಗಿ 200 ಯುನಿಟ್ ವಿದ್ಯುತ್ ಘೋಷಣೆ ಬೆನ್ನಲ್ಲೇ ಬಾಗಲಕೋಟೆ (Bagalkot) ಜಿಲ್ಲೆಯ ಶಿರೋಳ ಗ್ರಾಮದ ಜನರು ಕಳೆದ 2 ದಶಕದಿಂದ ಬಿಲ್ ಕಟ್ಟದೇ ಇರುವ ಸಂಗತಿ ಬೆಳಕಿಗೆ ಬಂದಿದೆ.

ರೈತ ಸಂಘ ಬಲಾಡ್ಯ ಹಾಗೂ ಪ್ರಭಾವ ಹೊಂದಿರುವ ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ಹೆಸ್ಕಾಂ ಲೆಕ್ಕಕ್ಕೆ ಇರುವುದು 1142 ಮನೆಗಳು, 69 ಅಂಗಡಿಗಳು ಹಾಗೂ 121 ಕೈಗಾರಿಕೆ ವಲಯಗಳು. ಇದು ಲೆಕ್ಕಕ್ಕೆ ಇರುವ ಮೀಟರ್ ಹೊಂದಿರುವ ಗ್ರಾಹಕರ ಲಕ್ಕೆವಾದರೆ, ಮೀಟರ್ ಇಲ್ಲದೇ ವಿದ್ಯುತ್ ಸಂಪರ್ಕ ಮಾಡಿಸಿಕೊಂಡಿರುವ ಸಾವಿರಾರು ಮನೆಗಳೂ ಇವೆ.

ಆದರೆ ಸರ್ಕಾರ ನಮ್ಮದು, ನಾವು ವಿದ್ಯುತ್ ಬಿಲ್ ಕಟ್ಟಲ್ಲ. ನಿಯಮದಂತೆ ಸೌಲಭ್ಯ ಒದಗಿಸಲ್ಲ ಎನ್ನುವ ಕಾರಣಕ್ಕೆ ಈ ಗ್ರಾಮದ ಜನರು ಕಳೆದ 2 ದಶಕಗಳಿಂದ ಬಿಲ್ ಕಟ್ಟುವುದನ್ನೇ ನಿಲ್ಲಿಸಿದ್ದಾರೆ. ಇದರ ಹಿಂದೆ ಪ್ರೊ. ನಂಜುಂಡಸ್ವಾಮಿ ಪ್ರಭಾವ, ಸ್ಥಳೀಯ ರೈತ ಮುಖಂಡ ದಿ. ರಮೇಶ್ ಗಡದನ್ನವರ ಪ್ರೇರಣೆಯಿಂದ ಅನ್ನದಾತರು ಬಿಲ್ ಕಟ್ಟದೆ 2 ದಶಕದಿಂದ ಸೆಡ್ಡು ಹೊಡೆದು ನಿಂತಿದ್ದಾರೆ.

ಇದನ್ನೂ ಓದಿ: Electricity Price Hike: ಗೃಹಜ್ಯೋತಿ ಘೋಷಣೆ ಬೆನ್ನಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್: ಜೂನ್ 1ರಿಂದಲೇ ವಿದ್ಯುತ್ ದರ ಏರಿಕೆ

ಕರ್ನಾಟಕ ರಾಜ್ಯ ರೈತ ಸಂಘ ಬಲಾಡ್ಯವಾಗಿರುವ ಈ ಗ್ರಾಮಕ್ಕೆ ವಿದ್ಯುತ್ ಬಿಲ್ ಕೇಳಲು ಹೋದರೆ ಹೆಸ್ಕಾಂ ಸಿಬ್ಬಂದಿಗೆ ಊರಿನೊಳಗೇ ಬಿಡುವುದಿಲ್ಲ, ಟಿಸಿ ದುರಸ್ತಿ ಇದ್ದರಷ್ಟೇ ಸಿಬ್ಬಂದಿಗೆ ಊರಿಗೆ ಬಂದು ರಿಪೇರಿ ಮಾಡಿ ಹೋಗಬೇಕು.

ಶಿರೋಳ ಗ್ರಾಮದಲ್ಲಿ ಬಾಕಿ ವಿದ್ಯುತ್ ಮೊತ್ತ ಎಷ್ಟು?

ಕಳೆದ 2 ದಶಕಗಳಿಂದ 1.26 ಕೋಟಿ ರೂ. ಮನೆ ಬಿಲ್ ಬಾಕಿ ಇದ್ದು, 9.68 ಲಕ್ಷ ರೂ. ಕೈಗಾರಿಕೆ ವಲಯದ ಬಿಲ್ ಬಾಕಿ ಇದೆ. ಅದೇ ರೀತಿ, 2.50 ಲಕ್ಷ ಅಂಗಡಿ (ಕಮರ್ಷಿಯಲ್) ಬಿಲ್ ಬಾಕಿ ಇದೆ. ಒಟ್ಟಾರೆಯಾಗಿ ಇಡೀ ಗ್ರಾಮದಲ್ಲಿ 140 ರಿಂದ 150 ಜನರು ಮಾತ್ರ ವಿದ್ಯುತ್ ಬಿಲ್ ಪಾವತಿ ಮಾಡುತ್ತಿದ್ದಾರೆ ಅಷ್ಟೆ. ಉಳಿದವರು ಬಿಲ್ ಕಟ್ಟುವುದೇ ಇಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:15 am, Sun, 4 June 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ