Crime News: ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಹೊಸಪೇಟೆ ಪತ್ರಕರ್ತನ ವಿರುದ್ಧ ದೂರು ದಾಖಲು
ಗಣೇಶ ವಿಸರ್ಜನೆ ವೇಳೆ ಚಾಕು ಇರಿದು ಯುವಕ ಸಾವನ್ನಪ್ಪಿರುವಂತಹ ಘಟನೆ ಗದಗ ತೋಂಟದಾರ್ಯ ಮಠದ ಬಳಿ ತಡರಾತ್ರಿ ನಡೆದಿದೆ.
ವಿಜಯನಗರ: ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪತ್ರಕರ್ತನ ವಿರುದ್ಧ ಜಿಲ್ಲೆಯ ಹೊಸಪೇಟೆ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ಹೊಸಪೇಟೆ ಪತ್ರಕರ್ತ ಮೊಹಮ್ಮದ್ ಗೌಸ್ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಆತ್ಮಹತ್ಯೆಗೆ ಪೋಲಪ್ಪ ಕುಟುಂಬಕ್ಕೆ ಪೆಟ್ರೋಲ್ ಸುರಿದುಕೊಳ್ಳಿ ಎಂದು ಕೈಸನ್ನೆ ಮಾಡಿ, ಪ್ರಚೋದನೆ ನೀಡಿದ ಆರೋಪ ಮಾಡಲಾಗಿದೆ. ಸಚಿವ ಆನಂದಸಿಂಗ್ ವಿರುದ್ಧ ದಬ್ಬಾಳಿಕೆ, ಜೀವಬೆದರಿಕೆ ಆರೋಪ ಮಾಡಲಾಗಿದೆ. ವಿಜಯನಗರ ಎಸ್‌ಪಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದು, ಹೊಸಪೇಟೆಯಲ್ಲಿ ಸೆ.30ರಂದು ಆತ್ಮಹತ್ಯೆ ಯತ್ನ ಕೇಸ್ ದಾಖಲಾಗಿದೆ.
ಗಣೇಶ ವಿಸರ್ಜನೆ ವೇಳೆ ಚಾಕು ಇರಿತ: ಯುವಕ ಸಾವು
ಗದಗ: ಗಣೇಶ ವಿಸರ್ಜನೆ ವೇಳೆ ಚಾಕು ಇರಿದು ಯುವಕ ಸಾವನ್ನಪ್ಪಿರುವಂತಹ ಘಟನೆ ಗದಗ ತೋಂಟದಾರ್ಯ ಮಠದ ಬಳಿ ತಡರಾತ್ರಿ ನಡೆದಿದೆ. ಸುದೀಪ್ ಮುಂಡೆವಾಡಿ(22) ಕೊಲೆಯಾದ ಯುವಕ. ಸ್ನೇಹಿತರೇ ಹಲ್ಲೆ ಮಾಡಿ ಚಾಕು ಇರಿದಿರುವ ಆರೋಪ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಸುದೀಪ್ ಸಾವನ್ನಪ್ಪಿದ್ದಾನೆ. ಸುದೀಪ್ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಈ ವೇಳೆ ಗದಗ ಟಾಂಗಾಕೂಟ ಸರ್ಕಲ್ನಲ್ಲಿ ತಡರಾತ್ರಿ ಹೈಡ್ರಾಮಾ ನಡೆದಿದ್ದು, ಘಟನೆ ಬಳಿಕ ಡಿಜೆ ಬಂದ್ಗೆ ಪೊಲೀಸ್ ಇಲಾಖೆ ಸೂಚನೆ ನೀಡಿದ್ದು, ಡಿಜೆಗೆ ಅನುಮತಿ ನೀಡುವಂತೆ ಕಾರ್ಯಕರ್ತರು SP ಹಾಗೂ ಹಿಂದೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ರಾತ್ರಿ 1 ಗಂಟೆಯಾಗಿದೆ ಡಿಜೆ ಬಂದ್ ಮಾಡಿ ಎಂದು SP ಹೇಳಿದ್ದು, ಡಿಜೆಗೆ ಅನುಮತಿ ನೀಡಬೇಕು ಎಂದು SP ಜತೆ ವಾಗ್ವಾದ ಮಾಡಿದ್ದಾರೆ. ಬಳಿಕ ಡಿಜೆ ಹಾಕಿ ಕಾರ್ಯಕರ್ತರು ಮೆರವಣಿಗೆ ಮಾಡಿದರು.
ದನ ಮೇಯಿಸಲು ಹೋಗಿದ್ದ ಮಹಿಳೆಯ ಬರ್ಬರ ಹತ್ಯೆ
ರಾಮನಗರ: ದನ ಮೇಯಿಸಲು ಹೋಗಿದ್ದ ಮಹಿಳೆಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ರಾಮನಗರ ತಾಲೂಕಿನ ಅಚ್ಚಲು ಕಾಲೋನಿ ಬಳಿ ನಡೆದಿದೆ. ಅದೇ ಕಾಲೋನಿ ನಿವಾಸಿ ಕೆಂಪಮ್ಮ(50) ಮೃತ ದುರ್ದೈವಿ. ಕೊಲೆಗೈದು ಮೂಟೆಯಲ್ಲಿ ಕಟ್ಟಿ ದುಷ್ಕರ್ಮಿಗಳು ಆರ್ಕಾವತಿ ನದಿಗೆ ಎಸೆದಿದ್ದಾರೆ. ಕಿವಿಯ ಓಲೆ, ಮೂಗುತಿ ಕಿತ್ತುಕೊಂಡು, ಕತ್ತುಹಿಸುಕಿ ಕೊಲೆ ಮಾಡಲಾಗಿದೆ. ಮೇಯಿಸಲು ಬಿಟ್ಟಿದ್ದ ದನಗಳನ್ನ ಹೊಡಿದುಕೊಂಡು ಬರಲು ಹೋದಾಗ ಕೊಲೆ ಮಾಡಲಾಗಿದೆ. ನೆನ್ನೆ ಸಂಜೆ ಎಷ್ಟು ಹೊತ್ತು ಆದರೂ ಮನೆಗೆ ಬಾರದ ಹಿನ್ನೆಲೆ ಆರ್ಕಾವತಿ ನದಿ ಬಳಿ ಹೋಗಿ ಹುಡುಕಾಟ ನಡೆಸಿದಾಗ ಚೀಲದಲ್ಲಿ ಶವ ಪತ್ತೆಯಾಗಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.