AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ: ಕಿಡ್ನಾಪ್; ಬೇಡಿಕೆ ಇಟ್ಟಷ್ಟು ಹಣ ಕೊಟ್ಟಿಲ್ಲವೆಂದು ಚಿನ್ನದಂಗಡಿ ವರ್ತಕನ ಹತ್ಯೆ

ಕಿಡ್ನಾಪ್​​ ಮಾಡಿ ಬೇಡಿಕೆ ಇಟ್ಟಷ್ಟು ಹಣ ಕೊಟ್ಟಿಲ್ಲವೆಂದು ಕಿಡ್ನಾಪರ್ಸ್ ಚಿನ್ನದಂಗಡಿ ವರ್ತಕನ ಹತ್ಯೆ ಮಾಡಿರುವಂತಹ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಈ ಘಟನೆಯಿಂದ ಇಡೀ ಬಳ್ಳಾರಿ ಜನರು ಬೆಚ್ಚಿಬಿದ್ದಿದ್ದಾರೆ. ಸದ್ಯ ಹೀರೆಹಡಗಲಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮನೆಗೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಕುಟುಂಬ ಅನಾಥವಾಗಿದೆ.

ಬಳ್ಳಾರಿ: ಕಿಡ್ನಾಪ್; ಬೇಡಿಕೆ ಇಟ್ಟಷ್ಟು ಹಣ ಕೊಟ್ಟಿಲ್ಲವೆಂದು ಚಿನ್ನದಂಗಡಿ ವರ್ತಕನ ಹತ್ಯೆ
ಕೊಲೆಯಾದ ಮಂಜುನಾಥ ಶೇಜವಾಡಕರ್
ವಿನಾಯಕ ಬಡಿಗೇರ್​
| Updated By: ಗಂಗಾಧರ​ ಬ. ಸಾಬೋಜಿ|

Updated on:Oct 26, 2025 | 7:20 PM

Share

ಬಳ್ಳಾರಿ, ಅಕ್ಟೋಬರ್​ 26: ಆತ ಚಿನ್ನದ ವ್ಯಾಪಾರಿ. ಎಂದಿನಂತೆ ಇಂದು ಬೆಳಿಗ್ಗೆ ಸಹ ವಾಕಿಂಗ್​​ಗೆ ಹೋಗಿದ್ದರು. ಇದೇ ಸಮಯದಲ್ಲಿ ಮೂವರು ಮುಸುಕುದಾರಿಗಳು ವ್ಯಾಪಾರಿಯನ್ನು ಅಪಹರಣ (Kidnap)  ಮಾಡಿದ್ದಾರೆ. ಅಷ್ಟೇ ಅಲ್ಲದೆ ಐದು ಕೋಟಿ ರೂ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಹಣ ಕೊಡಲಿಲ್ಲ ಅಂದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದರು. ಆದರೆ ಬೇಡಿಕೆ ಇಟ್ಟಷ್ಟು ಹಣ ಕೊಟ್ಟಿಲ್ಲವೆಂದು ಚಿನ್ನದಂಗಡಿ ವರ್ತಕನ ಹತ್ಯೆ (kill) ಮಾಡಲಾಗಿದೆ. ಸದ್ಯ ಹೀರೆಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃತ್ಯಕ್ಕೆ ಪ್ರೇರಣೆಯಾದ ಯೂಟ್ಯೂಬ್

ಮಂಜುನಾಥ ಶೆಜವಾಡಕರ್ (57) ಕೊಲೆಯಾದ ಚಿನ್ನದಂಗಡಿ ವರ್ತಕ. ಮಲ್ಲಿಕಾರ್ಜುನ ಉಜ್ಜಮ್ಮನವರ (27) ಯೋಗೇಶ ಅಂಗಡಿ (25) ಬಂಧಿತರು. ಆರೋಪಿಗಳಿಗೆ ಹೀಗೆ ಮಾಡಲು ಪ್ರೇರಣೆಯಾದುದು ಯೂಟ್ಯೂಬ್ ಎಂಬುದನ್ನು ಸ್ವತಃ ಒಪ್ಪಿಕೊಂಡಿದ್ದಾರೆ. ಇದರ ಜೊತೆಯಲ್ಲಿ ಮೊಬೈಲ್ ಲೊಕೇಶನ್ ಸಿಗದ ರೀತಿಯಲ್ಲಿ ಸಂಪರ್ಕ ಸಾಧಿಸಿ ಚಾಲಕಿತನ ಮೆರೆದಿದ್ದಿ, ಹಣಕ್ಕಾಗಿಯೇ ಈ ಕಿಡ್ನಾಪ್​​ ಮಾಡಿರುವುದಾಗಿ ಕೂಡ ಒಪ್ಪಿಕೊಂಡಿದ್ದಾರೆ.

ನಡೆದದ್ದೇನು?

ಅಕ್ಟೋಬರ್ 10 ರಂದು ಬೆಳಿಗ್ಗೆ 5:30 ರ ಸುಮಾರಿಗೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಮೈಲಾರ ರಸ್ತೆಯಲ್ಲಿ ವಾಕಿಂಗ್​​ಗೆ ತೆರಳಿದ್ದ ಚಿನ್ನದಂಗಡಿ ವರ್ತಕ ಮಂಜುನಾಥ 8 ಗಂಟೆ ಆದರೂ ಮನೆಗೆ ಮರಳಲಿಲ್ಲ. ಹೀಗಾಗಿ ಕೊಂಚ ಮನೆ ಮಂದಿ ಗಾಬರಿಯಾಗಿದ್ದರು. ಇದೇ ವೇಳೆ ವರ್ತಕ ಮಂಜುನಾಥ ಅವರ ಮೊಬೈಲ್‌ನಿಂದ ದಾವಣಗೆರೆಯಲ್ಲಿ ವೈದ್ಯೆಯಾಗಿರುವ ಅವರ ಅಕ್ಕ ಮಂಜುಳಾ ಶೇಜವಾಡಕ‌ರ್ ಅವರಿಗೆ ವಾಟ್ಸ್‌ಆ್ಯಪ್ ಕರೆ ಬರುತ್ತೆ ವಾಕಿಂಗ್ ಹೋಗಿದ್ದ ನನ್ನನ್ನು ಕಾರಿನಲ್ಲಿ ಬಂದವರು ಅಪಹರಿಸಿ ಕಟ್ಟಿ ಹಾಕಿದ್ದಾರೆ. 5 ಕೋಟಿ ರೂ. ಕೊಡುವಂತೆ ಹೇಳುತ್ತಿದ್ದಾರೆ ಅಂತಾ ಗಾಬರಿ ಧ್ವನಿಯಲ್ಲಿ ಮಂಜುನಾಥ ಮಾತನಾಡಿದ್ದರು.

ಇದನ್ನೂ ಓದಿ: ಪ್ರೀತಿಸುವಂತೆ ಫ್ಯಾಷನ್​ ಡಿಸೈನರ್​ಗೆ ಟಾರ್ಚರ್​: ಪರಿಚಯಸ್ಥನ ವಿರುದ್ಧವೇ ಮಹಿಳೆ ದೂರು

ಹೀಗೆ ಮಾತನಾಡುತ್ತಿದ್ದಾಗಲೇ ಅಪಹರಣಕಾರನೊಬ್ಬ ಫೋನ್​​ ಕಿತ್ತುಕೊಂಡು ನಾವು ಕೇಳಿದಷ್ಟು ಹಣ ಬೇಗನೇ ನೀಡಬೇಕು. ನಮಗೂ, ಇವರಿಗೂ ಯಾವುದೇ ದ್ವೇಷ ಇಲ್ಲ. ನಮಗೆ ಹಣ ಬೇಕು ಎಂದಿದ್ದಾನೆ. ಇದಕ್ಕೆ ಡಾ.ಮಂಜುಳಾ ಪ್ರತಿಕ್ರಿಯಿಸಿ, ಅಷ್ಟೊಂದು ಹಣ ನೀಡಲು ಆಗುವುದಿಲ್ಲ, ಒಂದು ಲಕ್ಷ ರೂ ನೀಡಲು ಸಾಧ್ಯವಾಗಬಹುದು ಎಂದಿದ್ದಾರೆ. ಆಗ ಅಪಹರಣಕಾರ ನಾವು ಕೇಳಿದಷ್ಟು ಹಣ ಕೊಡಬೇಕು ಇಲ್ಲವಾದರೆ ಇತನನ್ನ ಜೀವ ಸಹಿತ ಉಳಿಸಲ್ಲ ಅಂತಾ ಬೆದರಿಕೆ ಹಾಕಿದ್ದಾರೆ. ಜೀವದ ಜೊತೆಗೆ ಚೌಕಾಸಿ ಮಾಡಬೇಡಿ ನಾವು ಕೇಳಿದಷ್ಟು ಹಣ ಕೊಡಿ ಎಂದಿದ್ದಾರೆ.

ಅಂದ್ಹಾಗೆ ಮಂಜುನಾಥ ಶೆಜವಾಡಕರ್ (57) ಒಬ್ಬ ಸಣ್ಣ ಚಿನ್ನದಂಗಡಿ ವ್ಯಾಪಾರಿ. ತಾನ್ನ ದುಡಿಮೆಯಲ್ಲೇ ಕುಟುಂಬವನ್ನ ಸಲುಹುತ್ತಿದ್ದರು. ಇತ್ತೀಚಿಗೆ ಚಿನ್ನಾಭರಣ ವ್ಯಾಪಾರ ಕೈಬಿಟ್ಟು, ಸ್ಥಳೀಯ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಶಾಖೆಗೆ ಚಿನ್ನಾಭರಣ ಮೌಲ್ಯಮಾಪಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಆರ್ಥಿಕವಾಗಿ ಮಂಜುನಾಥ ಕುಟುಂಬ ಚೆನ್ನಾಗಿಯೇ ಇತ್ತು. ಮಂಜುನಾಥ ದಂಪತಿಗೆ ಇಬ್ಬರು ಪುತ್ರರು. ಒಬ್ಬರು 9ನೇ ತರಗತಿ ಮತ್ತು ಇನ್ನೊಬ್ಬರು 4ನೇ ತರಗತಿಯಲ್ಲಿ ಓದುತ್ತಿದ್ದಾನೆ.

ನಾಲ್ಕು ದಿನಗಳ‌ ಕಾಲ ಹುಡುಕಾಟ

ಆತನ ತಂಗಿ ಮಂಜುನಾಳ ದಾವಣಗೆರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜುನಾಥನ ಮೇಲೆ ಆ ಕಿರಾತಕರು ಕಣ್ಣು ಬಿದ್ದಿತ್ತು. ಬೆಳಿಗ್ಗೆ ವಾಕಿಂಗ್​​ಗೆ ಹೋದವನನ್ನ ಅಪಹರಿಸಿ ಅದೇ ಊರಿನ ಮೂವರು ಕಿರಾತಕರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇತ್ತ ಕಿಡ್ನಾಪ್​​ ಕಿರಾತಕರು ಮಾತನಾಡಿದ ಆಡಿಯೋ ವೈರಲ್ ಆಯಿತು. ಈ ಕುರಿತಂತೆ ಹೀರೆಹಡಗಲಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಕಿಡ್ನಾಪ್​​ ಕೇಸ್‌ನ್ನ ಸಿರಿಯಸ್ ಆಗಿ ತೆಗೆದುಕೊಂಡ ಎಸ್​​ಪಿ ಜಾಹ್ನವಿ ಹೊಳಲು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದರು. ಸತತ ನಾಲ್ಕು ದಿನಗಳ‌ ಕಾಲ ಹುಡುಕಾಟ ಜೋರಾಗಿಯೇ ಇತ್ತು.

ಇನ್ನು ಮಂಜುನಾಥರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ನಾಲ್ಕು ವಿಶೇಷ ಪೊಲೀಸ್‌ ತನಿಖಾ ತಂಡಗಳನ್ನು ರಚನೆ ಮಾಡಲಾಗಿತ್ತು. ತಂಡಗಳು ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದವು, ಅಪಹರಣಕಾರರು ಮಾಡಿದ್ದ ವಾಟ್ಸ್‌ಆ್ಯಪ್ ಕರೆ ಆಧರಿಸಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯ ಕಾರ್ಯಾಚರಣೆ ಆರಂಭಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಎಎಸ್‌ಪಿ ಜಿ.ಮಂಜುನಾಥ ಗ್ರಾಮದಲ್ಲೇ ಮೊಕ್ಕಾಂ ಹೂಡಿ, ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡುತ್ತಿದ್ದರು. ಆರೋಪಿಗಳ ಮೊಬೈಲ್ ನೆಟ್ವರ್ಕ್, ಲೋಕಷನ್ ಆಧರಿಸಿ ಪತ್ತೆಗೆ ಮುಂದಾಗಿದ್ದರು. ಜೊತೆಗೆ ಕಿಡ್ನಾಪ್​​ ಆಗಿದ್ದ ಮಂಜುನಾಥನ ಮೊಬೈಲ್‌ಗೆ ಕರೆ ಮಾಡಿ ಒಂದು ಕೋಟಿ ರೂ. ಹಣ ಕೊಡುವುದಕ್ಕೆ ಆಗಲ್ಲ 5 ಲಕ್ಷ ರೂ. ಹಣಕೊಡುತ್ತೇವೆ ಅಂತಾ ಮತ್ತೊಮ್ಮೆ ಸಂಭಾಷಣೆ ಮಾಡಿದ್ದಾರೆ. ಅದು ಚಾಲಕಿ ಕಿಡ್ನಾಪರ್ಸ್​​ ಪೋಲಿಸರಿಗೆ ಮಾಹಿತಿ ಗೊತ್ತಾಗಿದೆ ಎಂಬುದನ್ನು ಅರಿತು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಇತ್ತ ಕಿಡ್ನಾಪರ್ಸ್ ಪೋಲಿಸರಿಗೆ ಮಾಹಿತಿ ತಿಳಿದಿದೆ ಅಂತಾ ಗೊತ್ತಾಗುತ್ತಿದ್ದಂತೆ ಹೊಳಲು ಗ್ರಾಮದಿಂದ ಎಸ್ಕೇಪ್ ಆಗಿ ಅಲ್ಲಿಂದ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಗರದ ಸುತ್ತ ಕಾರಿನಲ್ಲಿ ಸುತ್ತಿಸಿದ್ದಾರೆ. ಕಿಡ್ನಾಪ್​​ ಆಗಿದ್ದ ಮಂಜುನಾಥ ಬಾಯಿಗೆ, ಕಣ್ಣಿಗೆ ಪ್ಲಾಸ್ಟಿಕ್ ಸುತ್ತಿ, ಕೈ ಕಾಲುಗಳಿಗೆ ಹಗ್ಗ ಕಟ್ಟಿ ಕಾರಿನ ಡಿಕ್ಕಿಯಲ್ಲಿ ಹಾಕಿದ್ದರು. ಸಂಜೆವರಿಗೆ ಊರೂರು ಸುತ್ತಿ ಬಳಿಕ ಕಾರು ಡಿಕ್ಕಿ ಓಪನ್ ಮಾಡಿದ್ದಾರೆ. ಡಿಕ್ಕಿ ಓಪನ್ ಮಾಡಿದ್ದಾಗ ಉಸಿರುಕಟ್ಟಿ ಮಂಜುನಾಥ ಸಾವನ್ನಪ್ಪಿದ್ದ. ಹೀಗಾಗಿ ಕಿರಾತಕರು ರಾಣೆಬೆನ್ನೂರಿನಿಂದ ವಾಪಸ್ ಹೊಳಲು ಬಳಿಯ ಹರವಿ ಗ್ರಾಮಕ್ಕೆ ಬಂದು ತುಂಗಭದ್ರಾ ನದಿಗೆ ಬ್ರಿಡ್ಜ್ ಮೇಲಿಂದ ಶವ ಎತ್ತಿ ಬಿಸಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ಇನ್ನು ಇತ್ತ ಕಿಡ್ನಾಪರ್ಸ್ ಹುಡುಕಾಟದಲ್ಲಿ ತಲೆಕೆಡಿಸಿಕೊಂಡಿದ್ದ ಪೋಲಿಸರಿಗೆ ಸಣ್ಣ ಸುಳಿವು ಸಿಕ್ಕಿದ್ದು, ಮಹಾರಾಷ್ಟ್ರ ಪುಣೆಗೆ ಹೋಗಿ ಆರೋಪಿಗಳನ್ನ ಪತ್ತೆ ಹಚ್ಚಿ ಕರೆದುಕೊಂಡು ಬರುತ್ತಾರೆ.

ಚಿನ್ನದ ವ್ಯಾಪರಿಯೇ ಟಾರ್ಗೆಟ್

ಇನ್ನು ಕಿಡ್ನಾಪಸ್೯ಗಳನ್ನ ಪತ್ತೆ ಹಚ್ಚಿದ ಪೋಲಿರುವ ಹಿರೇಹಡಗಲಿ ಠಾಣೆಗೆ ಕರೆತಂದು ಪೋಲಿಸ ಶೈಲಿಯಲ್ಲಿ ತನಿಖೆ ಆರಂಭಿಸಿದಾಗ ಇರುವ ವಿಷಯವನ್ನ ಬಾಯಿಬಿಟ್ಟಿದ್ದಾರೆ. ಆರೋಪಿಗಳು ಜೂಜು ಮೋಜು ಮಸ್ತಿಯ ಗೀಳು ಅಂಟಿಸಿಕೊಂಡಿದ್ದರು ಎನ್ನಲಾಗಿದೆ. ಹನಿ ನೀರಾವರಿ ಸಾಮಗ್ರಿಯ ಏಜೆನ್ಸಿಯಲ್ಲಿ ನಷ್ಟ ಅನುಭವಿಸಿದ್ದ ಮಲ್ಲಿಕಾರ್ಜುನ ಇಸ್ಪೀಟ್ ಜೂಜಾಟದಲ್ಲೂ ಲಕ್ಷಾಂತರ ರೂ ಹಣ ಕಳೆದುಕೊಂಡಿದ್ದ, ಹೀಗಾಗಿ ಹೇಗಾದರೂ ಹಣ ಮಾಡಬೇಕು ಅಂತಾ ಚಿನ್ನದ ವ್ಯಾಪರಿಯನ್ನ ಟಾರ್ಗೆಟ್ ಮಾಡಿ ಆತನನ್ನ ಕಿಡ್ನಾಪ್​​ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಆಪರೇಷನ್ ಸಕ್ಸಸ್, ಪೇಷಂಟ್ ಡೆತ್

ಆರೋಪಿಗಳ ಹೇಳಿಕೆ ಆಧರಿಸಿ ಹರವಿ ಬಿಳಿ ನದಿಯಲ್ಲಿ ಬೋಟ್, ಈಜು ತಜ್ಞರು, ಅಗ್ನಿಶಾಮಕದಳ ಸಿಬ್ಬಂದಿಯೊಂದಿಗೆ ಮೃತದೇಹಕ್ಕಾಗಿ ಹುಡುಕಾಟ ಮಾಡಲಾಗಿದ್ದು, ನದಿ ಪಕ್ಕದಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಜುನಾಥ ಮೃತ ದೇಹ ಪತ್ತೆಯಾಗಿದೆ. ಅಂದರೆ ಕಿಡ್ನಾಪ್​​ ಮಾಡಿದ ದಿನವೇ ಮಂಜುನಾಥ ಉಸಿರುಗಟ್ಟಿ ಮೃತಪಟ್ಟಿದ್ದ. ಮೃತ ದೇಹವನ್ನ ನದಿಯಲ್ಲಿ ಬಿಸಾಕಿ ಅಲ್ಲಿಂದ ಕಿಡ್ನಾಪರ್ಸ್​ ಎಸ್ಕೇಪ್ ಆಗುದ್ದರು. ಕಿಡ್ನಾಪ್​​ ಪ್ರಕರಣ ನಡೆದು ನಾಲ್ಕು ದಿನಗಳ ಬಳಿಕ ಆರೋಪಿಗಳು ಪತ್ತೆಯಾದ ಬಳಿಕ ಮಂಜುನಾಥ ಸಾವನ್ನಪ್ಪಿದ ಬಗ್ಗೆ ಮಾಹಿತಿ ಪೋಲಿಸರಿಗೆ ಗೊತ್ತಾಗಿತ್ತು. ಇನ್ನು ಐದು ತನಿಖಾ ತಂಡ ಮಾಡಿ ಎಸ್​ಪಿ ಹೊಳಲು ಗ್ರಾಮದಲ್ಲಿ ಮೊಕ್ಕಾಂ ಹೂಡಿ ನಿರಂತರ ಪರಿಶ್ರಮ ಮಾಡಿ ಕಿಡ್ನಾಪರ್ಸ್​​ ಅಂತು ಪತ್ತೆ ಹಚ್ಚಿದ್ದರು. ಆದರೆ ಮಂಜುನಾಥ ಸಾವನ್ನಪ್ಪಿದ್ದ. ಅಂದರೆ ಆಪರೇಷನ್ ಸಕ್ಸಸ್, ಪೇಷಂಟ್ ಡೆತ್ ಅನ್ನೊ ರೀತಿ ಪೋಲಿಸರ ಕಾರ್ಯಾಚರಣೆ ಆಗಿತ್ತು.

ಇದನ್ನೂ ಓದಿ: 4 ಮಕ್ಕಳ ತಾಯಿ ಸಲ್ಮಾ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದುಷ್ಕರ್ಮಿಗಳ ಕೊಲೆ ಸಂಚು ಹೇಗಿತ್ತು ಗೊತ್ತಾ?

ಕಿಡ್ನಾಪ್​​ ಆಗಿದ್ದ ಮಂಜುನಾಥ ಕುಟುಂಬ ಈಗ ಬರುತ್ತಾನೆ ಆಗ ಬರುತ್ತಾನೆ ಅಂತಾ ಕಾಯುತ್ತಿದ್ದರು. ಕಂಡು ಕಂಡ ದೇವರಿಗೆ ಹರಿಕೆ ಕಟ್ಟಿಕೊಂಡಿದ್ದರು. ಆದರೆ ಕೀಚಕರು ಮಾಡಿದ ಕೃತ್ಯಕ್ಕೆ ಆತ ಕಾರಿನ ಡಿಕ್ಕಿಯಲ್ಲೇ ಉಸಿರು ಚೆಲ್ಲಿದ್ದ. ಮಂಜುನಾಥನನ್ನ ಕಳೆದುಕೊಂಡ ಇಡೀ ಕುಟುಂಬ ಅನಾಥವಾಗಿದೆ‌. ಮನೆಗೆ ಆಸರೆಯಾಗಿದ್ದ ತಂದೆಯನ್ನ, ಗಂಡನನ್ನ ಕಳೆದು ಕೊಂಡು ಪತ್ನಿಗೆ ದಿಕ್ಕು ತೋಚದಂತಾಗಿದೆ.

ಇನ್ನು ಕಿಡ್ನಾಪರ್ಸ್​ಗೆ ಸಹಕಾರ ನೀಡದ ಆರೋಪದಡಿ ರಾಣೆಬೆನ್ನೂರ ತಾಲೂಕಿನ ಕೊಟ್ಟಿಹಾಳ ಗ್ರಾಮದ ರುದ್ರಗೌಡ (29) ನನ್ನ ಪೋಲಿಸರು ಅರೆಸ್ಟ್ ಮಾಡಿದ್ದಾರೆ. ಕಿಡ್ನಾಪರ್ಸ್​ ತಪ್ಪಿಸಿಕೊಳ್ಳುವಂತೆ ಸಹಕಾರ ನೀಡಿದ್ದ‌. ಜೊತೆಗೆ ಎಲ್ಲ ಮಾಹಿತಿ ಗೊತ್ತಿದ್ದರು ಸುಮ್ಮನಿದ್ದ ಎಂಬ ಆರೋಪದಡಿ ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:16 pm, Sun, 26 October 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ