ಬೆಂಗಳೂರು: 4 ಮಕ್ಕಳ ತಾಯಿ ಕೊಂದು ಆಟೋದಲ್ಲಿ ಶವವಿಟ್ಟು ದುಷ್ಕರ್ಮಿ ಪರಾರಿ
ಬೆಂಗಳೂರಿನ ತಿಲಕ್ ನಗರದಲ್ಲಿ ನಾಲ್ವರು ಮಕ್ಕಳ ತಾಯಿಯನ್ನು ಪ್ರಿಯಕರ ಕೊಲೆಗೈದು, ಆಟೋದಲ್ಲಿ ಶವವಿಟ್ಟು ಪರಾರಿ ಆಗಿರುವಂತಹ ಘಟನೆ ನಡೆದಿದೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮಹಿಳೆ ಶವ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಕೇಸ್ ದಾಖಲಿಸಿಕೊಂಡು ತಿಲಕ್ನಗರ ಠಾಣೆ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ.

ಬೆಂಗಳೂರು, ಅಕ್ಟೋಬರ್ 25: 4 ಮಕ್ಕಳ ತಾಯಿಯನ್ನು (mother) ಕೊಂದು ಆಟೋದಲ್ಲಿ ಶವವಿಟ್ಟು ಪ್ರಿಯಕರ ಪರಾರಿ ಆಗಿರುವಂತಹ ಘಟನೆ ಬೆಂಗಳೂರಿನ ತಿಲಕ್ನಗರ ಮುಖ್ಯರಸ್ತೆಯಲ್ಲಿ ನಡೆದಿದೆ. ಸಲ್ಮಾ(35)ರನ್ನು ಪ್ರಿಯಕರ ಸುಬ್ಬುಮಣಿ ಕೊಂದಿದ್ದ (kill). ಆಟೋದಲ್ಲಿ ಮೃತದೇಹ ಇದ್ದುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೇಸ್ ದಾಖಲಿಸಿಕೊಂಡು ತಿಲಕ್ನಗರ ಠಾಣೆ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ.
ನಡೆದದ್ದೇನು?
ತಿಲಕ್ನಗರ ಠಾಣಾ ವ್ಯಾಪ್ತಿಯಲ್ಲಿ ಸುಬ್ಬುಮಣಿ ವಾಸವಿದ್ದ. ಪತಿ ಮೃತಪಟ್ಟ ನಂತರ ಸುಬ್ಬುಮಣಿ ಜೊತೆ ಸಲ್ಮಾ ಸಲುಗೆಯಿಂದ ಇದ್ದರು. ನಿನ್ನೆ ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಸುಬ್ಬುಮಣಿ, ಸಲ್ಮಾ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಸಲ್ಮಾ ಮೃತದೇಹಕ್ಕೆ ಬಟ್ಟೆಸುತ್ತಿ ಕೆಟ್ಟುನಿಂತಿದ್ದ ಆಟೋದಲ್ಲಿಟ್ಟು ಪರಾರಿ ಆಗಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಘೋರ ಕೃತ್ಯ: ಮಲತಂದೆಯಿಂದಲೇ 7 ವರ್ಷದ ಮಗಳ ಹತ್ಯೆ
ಆಟೋದಲ್ಲಿ ಮೃತದೇಹ ಇದ್ದುದನ್ನು ಗಮನಿಸಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ, ತಿಲಕ್ನಗರ ಠಾಣೆ ಪೊಲೀಸರು ಪರಿಶೀಲಿಸಿದ್ದರು. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಸಲ್ಮಾ ಶವ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಅಕ್ರಮ ಸಂಬಂಧ ಶಂಕೆಯಿಂದ ಹಲ್ಲೆಗೊಳಗಾಗಿದ್ದ ಯುವಕ ಸಾವು
ಅಕ್ರಮ ಸಂಬಂಧ ಶಂಕೆಯಿಂದ ಹಲ್ಲೆಗೊಳಗಾಗಿದ್ದ ಯುವಕ ಸಾವನ್ನಪ್ಪಿರುವಂತಹ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗನಪಲ್ಲಿ ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗೌಣಗಾಂವ್ನ ವಿಷ್ಣು(27) ಮೃತ ಯುವಕ.
ಅ.21ರಂದು ವಿಷ್ಣುನನ್ನು ಕಟ್ಟಿಹಾಕಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಸ್ಥಳಕ್ಕೆ ಚಿಂತಾಕಿ ಠಾಣೆ ಪೊಲೀಸರು ಭೇಟಿ ನೀಡಿ ವಿಷ್ಣುನನ್ನು ರಕ್ಷಿಸಿದ್ದರು. ಗಾಯಾಳು ವಿಷ್ಣುನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಬೇರೊಬ್ಬರ ಜತೆ ಬೈಕಿನಲ್ಲಿ ಹೋಗುತ್ತಿದ್ದ ಹೆಂಡ್ತಿಯನ್ನ ನೆಲಕ್ಕೆ ಬೀಳಿಸಿ ಮಚ್ಚಿನಿಂದ ಮನಬಂದಂತೆ ಹೊಡೆದ ಪತಿ
ಮಂಗಳವಾರ ಸ್ನೇಹಿತರಿಬ್ಬರ ಜೊತೆ ವಿವಾಹಿತೆ ಮನೆಗೆ ಬಂದಿದ್ದ ವಿಷ್ಣು, ಈ ವೇಳೆ ವಿಷ್ಣುವನ್ನು ಹಿಡಿದು ಕಟ್ಟಿಹಾಕಿ ಬಡಿಗೆಯಿಂದ ಹಲ್ಲೆಮಾಡಿದ್ದರು. ವಿವಾಹಿತ ಮಹಿಳೆಯ ತಂದೆ, ಸಹೋದರನ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಕೊಲೆ ಮಾಡುವ ಉದ್ದೇಶದಿಂದಲೇ ಥಳಿಸಿರುವುದಾಗಿ ಹತ್ಯೆಯಾದ ವಿಷ್ಣು ತಾಯಿ ಲಕ್ಷ್ಮೀಯಿಂದ ಚಿಂತಾಕಿ ಠಾಣೆಗೆ ದೂರು ನೀಡಲಾಗಿದೆ. ಹಲ್ಲೆ ನಡೆಸಿದ ವಿವಾಹಿತ ಮಹಿಳೆ ಮತ್ತು ಸಂಬಂಧಿಕರಿಂದಲೂ ಪ್ರತಿದೂರು ನೀಡಲಾಗಿದೆ. ಸದ್ಯ ವಿವಾಹಿತ ಮಹಿಳೆಯ ತಂದೆ ಅಶೋಕ್, ಸಹೋದರ ಗಜಾನನ ಬಂಧಿಸಲಾಗಿದೆ. ವಿಷ್ಣು ಮೇಲೆ ಹಲ್ಲೆ ನಡೆಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:13 pm, Sat, 25 October 25




