ಇಂಧನ ಸಚಿವರೇ ಇತ್ತ ಗಮನ ಹರಿಸಿ: ವಿದ್ಯುತ್ ಸಮಸ್ಯೆಯಿಂದ ಹೈರಾಣಾದ ಬಳ್ಳಾರಿ ಜೀನ್ಸ್ ಉದ್ಯಮಿಗಳು
ಬಳ್ಳಾರಿ ಅಂದಾಕ್ಷಣ ನೆನಪಿಗೆ ಬರುವುದೆ ಅಲ್ಲಿನ ಜೀನ್ಸ್ ಉದ್ಯಮಗಳು. ಅಲ್ಲಿಯ ಜೀನ್ಸ್ ಉತ್ಪನ್ನಗಳಿಗೆ ದೇಶಾದ್ಯಂತ ಭರ್ಜರಿ ಮಾರ್ಕೆಟ್ ಇದೆ. ಆ ಉದ್ಯಮಗಳನ್ನೆ ನಂಬಿ ಸಾವಿರಾರು ಜನರು ಬದುಕನ್ನ ಕಟ್ಟಿಕೊಂಡಿದ್ದಾರೆ. ಆದ್ರೆ, ಆ ಉದ್ಯಮಕ್ಕೆ ಆಘಾತ ಎದುರಾಗಿದೆ. ಕಾರ್ಮಿಕರ ಕೊರತೆ, ನೀರಿನ ಸಮಸ್ಯೆ, ಇದರ ಮಧ್ಯೆ ನಿತ್ಯ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಪದೇ ಪದೇ ಕರೆಂಟ್ ಕಟ್ ಆಗುತ್ತಿರುವ ಪರಿಣಾಮ ಲಕ್ಷಾಂತರ ರೂಪಾಯಿ ಹಾನಿಯಾಗುತ್ತಿದೆ. ಇದರ ಬಗ್ಗೆ ಜೆಸ್ಕಾಂ ಇಲಾಖೆಗೆ ತಿಳಿಸಿದರೂ ಡೊಂಟ್ ಕೇರ್ ಅಂತಿದ್ದಾರಂತೆ. ಈ ಕುರಿತು ಒಂದು ವರದಿ ಇಲ್ಲಿದೆ ಓದಿ.
ಬಳ್ಳಾರಿ, ಅ.03: ಗಣಿನಾಡು ಬಳ್ಳಾರಿ ಅಂದರೆ ನೆನಪಿಗೆ ಬರುವುದೆ ಅಲ್ಲಿನ ಜೀನ್ಸ್ ಘಟಕಗಳು(Jeans Industry) ಮತ್ತು ಅದರ ಉತ್ಪನ್ನಗಳು. ಬಳ್ಳಾರಿ ಜೀನ್ಸ್ ಆಂದ್ರೆನೆ ಮಾರುಕಟ್ಟೆಯಲ್ಲಿ ಸಕತ್ ಬೇಡಿಕೆ ಇದೆ. ದೇಶದಾದ್ಯಂತ ಒಳ್ಳೆ ಮಾರ್ಕೆಟ್‌ನ್ನ ಬಳ್ಳಾರಿ ಜೀನ್ಸ್ ಪಡೆದಿದೆ. ಆದ್ರೆ, ಆ ಘಟಕಗಳಿಗೆ ವಿದ್ಯುತ್ ಆಘಾತ ಎದುರಾಗಿದೆ. ಪದೇ ಪದೇ ಕರೆಂಟ್ ಕಟ್ ಆಗುವುದು, ಕೇಬಲ್ ಸುಟ್ಟು ಹೋಗುವುದು, ಟಿಸಿ ಬಂದ್ ಸೇರಿ ಹೀಗೆ ಹಲವು ಸಮಸ್ಯೆಯಿಂದ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಜೀನ್ಸ್ ಘಟಕದ ಮಾಲೀಕರು ಜೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಬಳ್ಳಾರಿಯ ಇಂಡಸ್ಟ್ರಿಯಲ್ ಏರಿಯಾದ 4th ಸ್ಟೇಜ್ ಜೀನ್ಸ್ ಅಪರೆಲ್ ಪಾರ್ಕ್ನಲ್ಲಿ ಪದೆ ಪದೆ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಈ ಕುರಿತು ಸಾಕಷ್ಟು ಬಾರಿ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕನಿಷ್ಠ ಎಂಟು ತಾಸಾದರೂ ವಿದ್ಯುತ್‌ನ್ನ ಜೀನ್ಸ್ ಘಟಕಗಳಿಗೆ ನೀಡಬೇಕು. ಆದ್ರೆ, ಅದನ್ನ ಸಹ ಸರಿಯಾಗಿ ನೀಡಿಲ್ಲ. ವಿದ್ಯುತ್ ಕಟ್ ಮಾಡುವ ಪರಿಣಾಮ ಕೆಮಿಕಲ್ ಹಾಕಿ ಜೀನ್ಸ್ ಪ್ಯಾಂಟ್‌ಗಳನ್ನ ವಾಶ್ ಮಾಡುವ ಮಿಷನ್ ಬಂದ ಆಗುತ್ತೆ. ಹೀಗೆ ಬಂದ್ ಆದ್ರೆ ಅದರಲ್ಲಿರುವ ಎಲ್ಲ ಪ್ರಾಡಕ್ಟ್ಗಳು ಹಾಳಾಗುತ್ತವೆ. ಇದರಿಂದ ಲಕ್ಷಾಂತರ ರೂಪಾಯಿ ಹಾನಿಯಾಗುತ್ತೆ ಎಂದು ಮಾಲೀಕರು ಅಳಲು ತೋಡಿಕೊಂಡರು.
ಇದನ್ನೂ ಓದಿ:ಬಳ್ಳಾರಿ ಜೀನ್ಸ್ ಪಾರ್ಕ್ ನಿರ್ಮಾಣ: ರಾಹುಲ್ ಗಾಂಧಿ ಮಾತಿಗೂ ಬೆಲೆ ಕೊಡದ ಸಿದ್ದರಾಮಯ್ಯ ಸರ್ಕಾರ!
ಇನ್ನು ಇಂಡಸ್ಟ್ರಿಯಲ್ ಏರಿಯಾದಲ್ಲಿ ಸುಮಾರು 60 ಕ್ಕೂ ಹೆಚ್ಚು ಜೀನ್ಸ್ ಘಟಕಗಳಿವೆ. ಆ ಘಟಕಕಗಳಲ್ಲಿಗ ಕಾರ್ಮಿಕರ ಕೊರತೆ, ನೀರಿನ ಪೂರೈಕೆ ಸಮಸ್ಯೆಯಿಂದ ಲಾಭಾಂಶ ಇಲ್ಲದಕ್ಕೆ ಹಾಗೂ ಇತರೆ ಕಾರಣಗಳಿಂದ ಮುಚ್ಚಿ ಹೋಗಿವೆ. ಈಗಿರುವ 40 ಘಟಕಗಳಲ್ಲೂ ಇದೆ ಸಮಸ್ಯೆಯಿದೆ. ವಿದ್ಯುತ್ ದರ ಹೆಚ್ಚಿಗೆಯಾಗಿದೆ. ಒಂದು ತಿಂಗಳಿಗೆ ಒಂದು ಘಟಕದಿಂದ ಕಡಿಮೆ ಆದರೂ ಒಂದು ಲಕ್ಷದ ವರೆಗೆ ವಿದ್ಯುತ್ ಬಿಲ್ ಕಟ್ಟುತ್ತಾರೆ. ಇಷ್ಟಿದ್ದರೂ ಸರಿಯಾದ ರೀತಿ ಸರ್ವಿಸ್ ಕೊಡುತ್ತಿಲ್ಲ.
ಜೊತೆಗೆ ಘಟಕಗಳು ಸ್ಥಾಪನೆಯಾಗಿ 20 ವರ್ಷಗಳು ಕಳೆದರೂ ಹಳೆಯ ವಿದ್ಯುತ್ ಕೇಬಲ್ನ್ನು ಈವರಗೂ ಚೇಂಜ್ ಮಾಡಿಲ್ಲ. ಹೀಗಾಗಿ ಆ ಕೇಬಲ್‌ಗಳ ವ್ಯಾಲಿಡಿಟಿ ಮುಗಿದು ಹೋಗಿದೆ. ಅಲ್ಲಲ್ಲಿ ಶಾರ್ಟ್ ಸರ್ಕ್ಯೂಟ್ ಆಗುವುದರ ಜೊತೆಗೆ ಹಲವು ಸಮಸ್ಯೆಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಸಮಸ್ಯೆ ಕುರಿತು ಜೆಸ್ಕಾಂ ಇಲಾಖೆ ಗಮನಕ್ಕೆ ತಂದರೂ ಇಲಾಖೆಯಲ್ಲಿ ಹಣವಿಲ್ಲ. ನಾವೇನು ಮಾಡೋಣ, ಲೇಬರ್ ಕಳಿಸುತ್ತೆವೆ ಕೆಲಸ ಮಾಡಿಕೊಳ್ಳಿ ಎನ್ನುತ್ತಾರಂತೆ. ಇದೆ ರೀತಿ ಮುಂದುವರೆದರೆ ನಾವು ಬೀದಿಗೆ ಬಂದು ಹೋರಾಟ ಮಾಡುತ್ತೇವೆ ಎಂದು ಮಾಲೀಕರು ಎಚ್ಚರಿಗೆ ನೀಡಿದ್ದಾರೆ.
ಒಟ್ಟಿನಲ್ಲಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸರಿಯಾದ ಕರೆಂಟ್ ವ್ಯವಸ್ಥೆ ಇಲ್ಲದೆ ಕಾರ್ಮಿಕರು ಪರದಾಡುತ್ತಿದ್ದಾರೆ. ರಾತ್ರಿ ಹೊತ್ತು ಆ ಏರಿಯಾದಲ್ಲಿ ಉಳಿದು ಕೊಳ್ಳುವುದಕ್ಕೂ ಜನರು ಭಯಗೊಂಡಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಅವರ ಸಮಸ್ಯೆಗೆ ಸ್ಪಂಧಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:44 pm, Thu, 3 October 24