AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂಟಿಯಾಗಿ ಹೋಗ್ತಿರುವವರೇ ಇವರ ಟಾರ್ಗೆಟ್; 74 ರಾಬರಿ ಮಾಡಿದ ಖತಾರ್ನಾಕ್ ಗ್ಯಾಂಗ್ ಅರೆಸ್ಟ್

ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರನ್ನು ಗುರಿಯಾಗಿಸಿಕೊಂಡು ರಾಬರಿ ಮಾಡುತ್ತಿದ್ದ ಖತಾರ್ನಾಕ್ ತಂಡವೊಂದನ್ನು ಬೆಂಗಳೂರು ನಗರದ ಕಬ್ಬನ್ ಪಾರ್ಕ್ ಠಾಣಾ ಪೊಲೀಸ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಂಟಿಯಾಗಿ ಹೋಗ್ತಿರುವವರೇ ಇವರ ಟಾರ್ಗೆಟ್; 74 ರಾಬರಿ ಮಾಡಿದ ಖತಾರ್ನಾಕ್ ಗ್ಯಾಂಗ್ ಅರೆಸ್ಟ್
ಆಭರಣ ಕಳ್ಳರು
TV9 Web
| Edited By: |

Updated on:Aug 09, 2022 | 1:43 PM

Share

ಬೆಂಗಳೂರು: ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರನ್ನು ಗುರಿಯಾಗಿಸಿಕೊಂಡು ರಾಬರಿ ಮಾಡುತ್ತಿದ್ದ ಖತಾರ್ನಾಕ್ ತಂಡವೊಂದನ್ನು ನಗರದ ಕಬ್ಬನ್ ಪಾರ್ಕ್ ಠಾಣಾ ಪೊಲೀಸ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ವಿವಿಧೆಡೆ ಬರೊಬ್ಬರಿ 74 ರಾಬರಿ ನಡೆಸಿದ ಮಹಮ್ಮದ್ ಉಸ್ಮಾನ್, ಮಹಮ್ಮದ್ ಹುಸೇನ್, ತಬ್ರೇಜ್ ಖಾನ್, ಜುನೈದ್ ಮತ್ತು ಇರ್ಫಾನ್ ಪಾಷ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುತ್ತಿದ್ದವನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಆರೋಪಿಗಳು ಮೊಬೈಲ್​ಗಳನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದರು. ಕಬ್ಬನ್ ಪಾರ್ಕ್, ಅಶೋಕನಗರ, ಮಾಗಡಿ ರೋಡ್, ಸುದ್ದಗುಂಟೆ ಪಾಳ್ಯ, ಹೈಗ್ರೌಂಡ್ಸ್, ಶ್ರೀರಾಮಪುರ ಸೇರಿದಂತೆ ನಗರದ ಹಲವು ಭಾಗದಲ್ಲಿ ಆರೋಪಿಗಳು ರಾಬರಿ ಮಾಡಿದ್ದರು.

ಲಾಡ್ಜ್​ನಲ್ಲಿ ಉಳಿದುಕೊಂಡು ಆರೋಪಿಗಳು ಸ್ಕೆಚ್ ಹಾಕುತ್ತಾ ಈ ಕೃತ್ಯ ಎಸಗುತ್ತಿದ್ದರು. ಪ್ರತಿ ಬಾರಿ ಕೃತ್ಯಕ್ಕೆ ಬರುವಾಗ ಇಬ್ಬರು ಹೊಸ ಹುಡುಗರನ್ನು ಕಡೆದುಕೊಂಡು ಹೋಗುತ್ತಿದ್ದರು. ಒಂದು ಮೊಬೈಲ್ ರಾಬರಿ ಮಾಡಿದರೆ 500 ರೂಪಾಯಿ ಕೊಡುತ್ತಿದ್ದರು. ಅದರಂತೆ ಒಂದೇ ದಿನದಲ್ಲಿ ಐದು ಆರು ಮೊಬೈಲ್ ರಾಬರಿ ಮಾಡುತ್ತಿದ್ದರು. ಹೀಗೆ ರಾಬರಿ ಮಾಡಿದ ಮೊಬೈಲ್​ಗಳನ್ನು ಜೆ.ಜೆ.ನಗರಕ್ಕೆ ಸಾಗಿಸಿ ಅಲ್ಲಿಂದ ಬೇರೆ ರಾಜ್ಯಗಳಿಗೆ ಸಾಗಿಸಲಾಗುತ್ತಿತ್ತು.

ಬೆಂಗಳೂರಿನಲ್ಲಿ ರಾಬರಿ ಮಾಡಿದ ಮೊಬೈಲ್​ಗಳನ್ನು ಹೈದರಾಬಾದ್ ಮತ್ತು ಚೆನ್ನೈನಲ್ಲಿ ಸ್ಪೇರದ ಪಾರ್ಟ್ಸ್ ಆಗಿ ಮಾರಾಟ ಮಾಡಲಾಗುತ್ತಿತ್ತು. ಆರೋಪಿಗಳು ಪ್ರತಿ ಮೊಬೈಲ್​ಗೆ ನಾಲ್ಕು ಸಾವಿರ ರೂಪಾಯಿವರೆಗೆ  ಹಣ ಪಡೆದು ಮಾರಾಟ ಮಾಡುತ್ತಿದ್ದರು. ಈ ರಾಬರಿ ಗ್ಯಾಂಗ್​ ಹಿಂದೆ ಓರ್ವ ಕಿಂಗ್​ಪಿನ್ ಇರುವ ಮಾಹಿತಿ ತಿಳಿದುಬಂದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜ್ಯುವೆಲರಿ ಶಾಪ್ ಕೊಳ್ಳೆ ಹೊಡೆಯುತಿದ್ದ ಗ್ಯಾಂಗ್ ಬಂಧನ

ಬೆಂಗಳೂರು: ಮಾಲೀಕನ ಗಮನಕ್ಕೆ ಬಾರದಂತೆ ಜ್ಯುವೆಲರಿ ಶಾಪ್ ಕೊಳ್ಳೆ ಹೊಡೆಯುತಿದ್ದ ಮತ್ತು ನಕಲಿ ಕೀ ಬಳಸಿ ಬೆಳ್ಳಿ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಪ್ರತ್ಯೇಕ ಎರಡು ಗ್ಯಾಂಗ್​ಗಳನ್ನು ಬಂಧಿಸುವಲ್ಲಿ ನಗರದ ಹಲಸೂರು ಗೇಟ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಲಸೂರು ಗೇಟ್​ನ ಬಿಎಸ್ ಜ್ಯುವೆಲರ್ಸ್​​ನಲ್ಲಿ ಕೆಲಸಕ್ಕಿದ್ದ ನಾಗರಾಜು, ರವಿ, ಮಹದೇವ್ ಎಂಬ ಆರೋಪಿಗಳು, ಮಾಲೀಕನ ಗಮನಕ್ಕೆ ಬಾರದಂತೆ ಹಂತಹಂತವಾಗಿ ಬೆಳ್ಳಿ ಕದಿಯುತ್ತಿದ್ದರು. ಒಂದೂವರೆ ವರ್ಷದಲ್ಲಿ ಆರೋಪಿಗಳು ಸುಮಾರು 41 ಕೆಜಿ ಬೆಳ್ಳೆಯನ್ನು ಎಗರಿಸಿದ್ದರು. ಇದರ ಜೊತೆಗೆ ಚಿನ್ನ ಹಾಗೂ ನಗದು ಕೂಡ ದೋಚುತ್ತಿದ್ದರು. ಒಂದು ದಿನ ಅಂಗಡಿಯಲ್ಲಿ ಚಿನ್ನದ ಬಿಸ್ಕೆಟ್ ಕಾಣೆಯಾದ ಹಿನ್ನೆಲೆ ಮಾಲೀಕರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೆಲಸಕ್ಕಿದ್ದವರು ಕೃತ್ಯ ಎಸಗಿರುವುದು ಬೆಳಕಿಗೆ ಬರುತ್ತದೆ. ಅದರಂತೆ ಅಂಗಡಿ ಮಾಲೀಕರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ಮೂವರನ್ನು ಬಂಧಿಸಿ 7.5 ಲಕ್ಷ ಮೌಲ್ಯದ 41 ಕೆಜಿ ಬೆಳ್ಳಿ, 150 ಗ್ರಾಂ ಚಿನ್ನ, 4 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.

ಹಲಸೂರು ಗೇಟ್ ಠಾಣಾ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ನಕಲಿ ಕೀ ಬಳಸಿ ಅಂಗಡಿಯಿಂದ ಬೆಳ್ಳಿ ಆಭರಣ ಕದಿಯುತ್ತಿದ್ದ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಬೆಳ್ಳಿ ಪಾಲೀಷಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಭಾರಕ್ ಪಾಷ, ಸೈಯಾದ್ ಮೋಯಿನ್ ಬಂಧಿತ ಆರೋಪಿಗಳು. ಮಾಲೀಕನ ಗಮನಕ್ಕೆ ಬಾರದಂತೆ ಅಂಗಡಿಯ ಕೀ ಕದ್ದ ಆರೋಪಿಗಳು ನಕಲಿ ಕೀ ತಯಾರಿಸಿದ್ದಾರೆ. ಬಳಿಕ ಆ ನಕಲಿ ಕೀ ಬಳಸಿ ಅಂಗಡಿ ಬಾಗಿಲು ತೆರೆದು ಬೆಳ್ಳಿ ಕದ್ದು ಪರಾರಿಯಾಗಿದ್ದರು. ಸದ್ಯ ಬಂಧಿತ ಆರೋಪಿಗಳಿಂದ 14 ಕೆಜಿ ಬೆಳ್ಳಿ ಆಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Published On - 1:43 pm, Tue, 9 August 22