ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಬಾಲಕಿ ಶವ ಪತ್ತೆ: ತಾಯಿಯ ಅಕ್ರಮ ಸಂಬಂಧಕ್ಕೆ ಬಲಿಯಾದಳಾ?

ಜುಲೈ 3 ರಂದು ಬೆಂಗಳೂರಿನ ಮೆಜೆಸ್ಟಿಕ್​ ರೈಲು ನಿಲ್ದಾಣದ ಟ್ಯಾಕ್ಸಿ ಪಾರ್ಕಿಂಗ್​ನಲ್ಲಿ ಬಾಲಕಿಯ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರೈಲ್ವೆ ಪೊಲೀಸರು ಬಾಲಕಿಯ ಗುರುತು ಪತ್ತೆಹಚ್ಚಿದ್ದಾರೆ. ಮರಿಯಮ್​ ಕೊಲೆಯಾದ 5 ವರ್ಷದ ಬಾಲಕಿ. ಕೊಲೆಯಾದ ಬಾಲಕಿಯ ತಾಯಿ, ಪ್ರಿಯಕನಿಗಾಗಿ ಪೊಲೀಸ್​ ಹುಡುಕಾಟ ನಡೆಸಿದ್ದಾರೆ.

ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಬಾಲಕಿ ಶವ ಪತ್ತೆ: ತಾಯಿಯ ಅಕ್ರಮ ಸಂಬಂಧಕ್ಕೆ ಬಲಿಯಾದಳಾ?
ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಬಾಲಕಿ ಶವ ಪತ್ತೆ: ತಾಯಿಯ ಅಕ್ರಮ ಸಂಬಂಧಕ್ಕೆ ಬಲಿಯಾದಳಾ?
Edited By:

Updated on: Jul 14, 2024 | 3:33 PM

ಬೆಂಗಳೂರು, ಜುಲೈ 14: ನಗರದ ಮೆಜೆಸ್ಟಿಕ್​ ರೈಲು ನಿಲ್ದಾಣದ (Majestic railway station) ಬಳಿಯ ಟ್ಯಾಕ್ಸಿ ಪಾರ್ಕಿಂಗ್​ ಸ್ಥಳದಲ್ಲಿ ಐದು ವರ್ಷದ ಬಾಲಕಿಯ (Girl) ಮೃತದೇಹ ಇತ್ತೀಚೆಗೆ ಪತ್ತೆ ಆಗಿತ್ತು. ಇದೀಗ ರೈಲ್ವೆ ಪೊಲೀಸರು ಕೊಲೆಯಾದ ಬಾಲಕಿಯ ಗುರುತು ಪತ್ತೆ ಹಚ್ಚಿದ್ದಾರೆ. ಮರಿಯಮ್​ ಮೃತ ಐದು ವರ್ಷದ ಬಾಲಕಿ. ಬಾಲಕಿಯ ಪೋಷಕರು ಯಾರೆಂಬುದನ್ನು ಸಹ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೊಲೆಯಾದ ಮರಿಯಮ್ ಶಿವು-ಹೀನಾ ದಂಪತಿಯ ಪುತ್ರಿ. ಬಾಲಕಿಯ ಕೊಲೆಯ ಸುತ್ತ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದವು.

ತಾಯಿಯ ಅಕ್ರಮ ಸಂಬಂಧಕ್ಕೆ ಬಲಿಯಾದ್ಲಾ ಬಾಲಕಿ ಮರಿಯಮ್?

ರಾಜು ಎಂಬಾತನ ಜೊತೆ ಹೀನಾ ಅನೈತಿಕ ಸಂಬಂಧ ಹೊಂದಿದ್ದು, ಪತಿ ಶಿವುನನ್ನು ಬಿಟ್ಟು ರಾಜು ಜೊತೆ ಭಿಕ್ಷಾಟನೆ ಮಾಡುತ್ತಿದ್ದರು. ಇವರಿಬ್ಬರ ಜೊತೆಯೇ ಕೊಲೆಯಾದ ಬಾಲಕಿ ಮರಿಯಮ್ ಇರುತ್ತಿದ್ದಳು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂದು ಪ್ರಿಯಕರ ರಾಜು ಜತೆ ಸೇರಿಕೊಂಡು ಮಗಳನ್ನು ಕೊಲೆಗೈದಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ 6 ವರ್ಷದ ಬಾಲಕಿಯ ಶವ ಪತ್ತೆ, ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಶಂಕೆ

ಶವ ಪತ್ತೆಯಾದ ದಿನದಿಂದಲೂ ಹೀನಾ ಮತ್ತು ರಾಜು ನಾಪತ್ತೆಯಾಗಿದ್ದಾರೆ. ಹೀಗಾಗಿ ಪೊಲೀಸರಿಗೆ ಹೀನಾ ಹಾಗೂ ರಾಜು ಮೇಲೆ ಸಾಕಷ್ಟು ಅನುಮಾನ ಮೂಡಿದೆ. ಹೀಗಾಗಿ ಇವರಿಬ್ಬರಿಗಾಗಿ ರೈಲ್ವೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ: ನಾಲ್ವರು ಯುವಕರು ಸಾವು

ಮೃತ ಬಾಲಕಿಯ ಮೈಮೇಲೆ ಪರಚಿದ ಗಾಯಗಳು ಮತ್ತು ರಕ್ತದ ಕಲೆಗಳು ಕಂಡುಬಂದಿದ್ದು ಅತ್ಯಾಚಾರವೆಸಗಲಾಗಿ ಕೊಲೆ ಮಾಡಿದ್ದಾರೆ ಎಂದು ಕೂಡ ಶಂಕಿಸಲಾಗಿತ್ತು. ಮೃತದೇಹವನ್ನು ಕಂಡ ಟ್ಯಾಕ್ಸಿ ಪಾರ್ಕಿಂಗ್​ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಾರು ಡಿಕ್ಕಿ: ಇಬ್ಬರು ಯುವಕರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಕಾರು ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಹೊಸದುರ್ಗ ತಾಲೂಕಿನ ಬೋಕಿಕೆರೆ ಗ್ರಾಮದ ಬಳಿ ನಡೆದಿದೆ. ಹೊಸದುರ್ಗ ತಾಲೂಕಿನ ಕಡಿವಾಣಕಟ್ಟೆಯ ಯೋಗೇಶ್(27) ಹಾಗೂ ಚಿಕ್ಕಮಗಳೂರು ಜಿಲ್ಲೆ‌ಯ ಸಿದ್ದಾಪುರ ಗ್ರಾಮದ ಪ್ರವೀಣ್(26) ಮೃತ ಸವಾರರು. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us