ಪಿಎಸ್ಐ ಸಮಯಪ್ರಜ್ಞೆಯಿಂದ ಉಳಿಯಿತು ಎರೆಡುವರೆ ವರ್ಷದ ಮಗುವಿನ ಜೀವ
10 ಅಡಿ ಆಳದ ಸಂಪ್ಗೆ ಮಗು ಬಿದಿದ್ದ ಸಮಯ ಪ್ರಜ್ಞೆಯಿಂದಾಗಿ ಎರಡುವರೆ ವರ್ಷದ ಮಗುವಿನ ಜೀವ ಉಳಿದಿರುವಂತಹ ಘಟನೆ ನಡೆದಿದೆ. ಬ್ಯಾಟರಾಯನಪುರ ಸಂಚಾರ ಠಾಣೆ ಪಿಎಸ್ಐ ನಾಗರಾಜ್ ರಕ್ಷಣೆ ಮಾಡಿದ್ದಾರೆ. ಪಿಎಸ್ಐ ನಾಗರಾಜ್ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರೆದಿದ್ದು, ಸದ್ಯ ಪ್ರಾಣಾಪಾಯದಿಂದ ಮಗು ಪಾರಾಗಿದೆ.
ಬೆಂಗಳೂರು, ಮಾರ್ಚ್ 6: ಪಿಎಸ್ಐ ಸಮಯ ಪ್ರಜ್ಞೆಯಿಂದಾಗಿ ಎರಡುವರೆ ವರ್ಷದ ಮಗು (baby) ವಿನ ಜೀವ ಉಳಿದಿರುವಂತಹ ಘಟನೆ ನಡೆದಿದೆ. ಸಂಪ್ ಒಳಗೆ ಬಿದ್ದಿದ್ದ ಎರಡುವರೆ ವರ್ಷದ ಮಗುವನ್ನು ಬ್ಯಾಟರಾಯನಪುರ ಸಂಚಾರ ಠಾಣೆ ಪಿಎಸ್ಐ ನಾಗರಾಜ್ ರಕ್ಷಣೆ ಮಾಡಿದ್ದಾರೆ. ಪಿಎಸ್ಐ ನಾಗರಾಜ್ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಬಿಇಎಲ್ನ ಬಳಿ 10 ಅಡಿ ಆಳದ ಸಂಪ್ಗೆ ಮಗು ಬಿದಿದ್ದೆ. ಸಹಾಯಕ್ಕಾಗಿ ಮಹಿಳೆಯರು ಕೂಗಿದ್ದಾರೆ. ಕರ್ತವ್ಯಕ್ಕೆ ಠಾಣೆಗೆ ತೆರಳುತ್ತಿದ್ದ ಪಿಎಸ್ಐ ನಾಗರಾಜ್ಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸಂಪ್ಗೆ ಇಳಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವಿನ ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರೆದಿದ್ದು, ಸದ್ಯ ಪ್ರಾಣಾಪಾಯದಿಂದ ಮಗು ಪಾರಾಗಿದೆ.
ಪಾಳುಬಿದ್ದ ದೇವಾಲಯದ ಜಮೀನು ಹೊಡೆಯಲು ಹುನ್ನಾರ: ಗ್ರಾಮಸ್ಥರಿಂದ ದೇವಾಲಯ ಜೀರ್ಣೋದ್ದಾರ
ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ಬಳಿ ಕೆಂಪೇಗೌಡ ಏರ್ಪೋಟ್ ಆದ ನಂತರ ಜಮೀನುಗಳ ಬೆಲೆ ಗಗನಕ್ಕೇರಿದ್ದು ದೇವಾಲಯ ಹಾಗೂ ಸರ್ಕಾರಿ ಜಮೀನು ಕಬಳಿಸುವವರ ಸಂಖ್ಯೆ ಹೆಚ್ಚಾಗಿದ್ದು, ಕಬಳಿಕೆಯಾಗ್ತಿದ್ದ ಗ್ರಾಮದ ಜಮೀನನ್ನ ಗ್ರಾಮಸ್ಥರೆ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ಶೀಘ್ರವೇ ಬೆಂಗಳೂರಿನಲ್ಲಿ ಹಳಿಗಿಳಿಯಲಿದೆ ಮೊದಲ ಚಾಲಕ ರಹಿತ ಮೆಟ್ರೋ: ನಾಳೆ ಟೆಸ್ಟಿಂಗ್
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಭೋವಿಪಾಳ್ಯದ 120 ವರ್ಷದ ಹಳೆಯ ದೊಡ್ಡಮ್ಮ ಮಾರಮ್ಮ ದೇವಾಲಯ ಹಲವು ವರ್ಷಗಳಿಂದ ಪಾಳು ಬಿದ್ದಿತ್ತು. ಹೀಗಾಗಿ ದೇವಾಲಯದ ಒಂದು ಎಕರೆಗೂ ಅಧಿಕ ಜಮೀನು ಕೋಟಿ ಕೋಟಿ ಬೆಲೆ ಬಾಳುತ್ತೆ ಅಂತ ಕೆಲ ಭೂಗಳ್ಳರು ಜಮೀನು ಕಬಳಿಸುವ ಹುನ್ನಾರ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರು: ಮರಕ್ಕೆ ಆ್ಯಸಿಡ್ ಸುರಿದ ಅಂಗಡಿಯವ, 2024ರಲ್ಲಿ ಇದು ಮೂರನೇ ಘಟನೆ
ಜಮೀನು ಕಬಳಿಕೆಯಾಗ್ತಿದ್ದನ್ನ ಕಂಡ ಗ್ರಾಮಸ್ಥರು ದೇವಾಲಯದ ಜಮೀನನ್ನ ಉಳಿಸಲು ಸ್ವಂತ ಹಣವನ್ನ ಹಾಕಿ ದೇವಾಲಯವನ್ನ ಜೀರ್ಣೊದ್ದಾರ ಮಾಡಿದ್ದಾರೆ. ಅಲ್ಲದೆ ದೇವಾಲಯ ಜೀರ್ಣೋದ್ದಾರಕ್ಕೆ ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಕುಟುಂಬಸ್ಥರು ಸಹ ಸಾಥ್ ನೀಡಿದ್ದು ಈ ವೇಳೆ ಗ್ರಾಮಸ್ಥರೆಲ್ಲ ಒಟ್ಟಾಗಿ ಕಳಶಗಳನ್ನ ಹೊತ್ತು ಮೆರವಣಿಗೆ ಮೂಲಕ ಸಾಗಿ ಬಂದು ಕುಂಭಾಭಿಷೇಕ ಮಾಡಿ ಭಕ್ತಿ ಭಾವವನ್ನ ಮೆರೆದಿದ್ದಾರೆ. ಜೀರ್ಣೋದ್ದಾರದ ನಂತರ ಗ್ರಾಮಸ್ಥರಿಗೆಲ್ಲ ಹೋಳಿಗೆ ಊಟ ಬಡಿಸಿ ದೇವಸ್ಥಾನದ ಜೊತೆಗೆ ದೇವಾಲಯದ ಕೋಟಿ ಕೋಟಿ ರೂ. ಬೆಲೆ ಬಾಳುವ ಜಮೀನನ್ನ ಉಳಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.