AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆ ಬಾಂಬರ್ ಬಳ್ಳಾರಿಯಲ್ಲಿ ಓಡಾಟ: ಆಟೋ ಚಾಲಕ ವಶಕ್ಕೆ, ತೀವ್ರಗೊಂಡ ತನಿಖೆ

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಹೊಸ ಬಸ್ ನಿಲ್ದಾಣದಲ್ಲೇ ಮಾರ್ಚ 1 ರ ರಾತ್ರಿ 9 ಗಂಟೆ ಸುಮಾರಿಗೆ ಶಂಕಿತ ಓಡಾಡಿದ್ದಾನೆ. ಬಸ್ ನಿಲ್ದಾಣದಲ್ಲಿ ಕೆಲ ಕಾಲ ಓಡಾಡಿರುವ ಶಂಕಿತ ಬಳಿಕ ಆಟೋ ಹತ್ತಿ ಹೋಗಿದ್ದಾನೆ. ಹೀಗಾಗಿ ಆಟೋ ಚಾಲಕನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬರ್ ಬಳ್ಳಾರಿಯಲ್ಲಿ ಓಡಾಟ: ಆಟೋ ಚಾಲಕ ವಶಕ್ಕೆ, ತೀವ್ರಗೊಂಡ ತನಿಖೆ
ಬಾಂಬರ್
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಗಂಗಾಧರ​ ಬ. ಸಾಬೋಜಿ

Updated on: Mar 08, 2024 | 8:21 PM

ಬಳ್ಳಾರಿ, ಮಾರ್ಚ್​ 08: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ (Rameshwaram Cafe) ಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಹೊಸ ಬಸ್ ನಿಲ್ದಾಣದಲ್ಲೇ ಮಾರ್ಚ 1 ರ ರಾತ್ರಿ 9 ಗಂಟೆ ಸುಮಾರಿಗೆ ಶಂಕಿತ ಓಡಾಡಿದ್ದಾನೆ. ಬಸ್ ನಿಲ್ದಾಣದಲ್ಲಿ ಕೆಲ ಕಾಲ ಓಡಾಡಿರುವ ಶಂಕಿತ ಬಳಿಕ ಆಟೋ ಹತ್ತಿ ಹೋಗಿದ್ದಾನೆ. ಹೀಗಾಗಿ ಆಟೋ ಚಾಲಕನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಳ್ಳಾರಿ ನಗರದ ರಾಯಲ್ ಸರ್ಕಲ್ ಮುಖಾಂತರ ಕೌಲ ಬಜಾರ್‌ಗೆ ಬಾಂಬರ್ ಹೋಗಿದ್ದಾನೆ. ಲೈಟ್ ಬ್ಲೂ ಕಲರ್ ಟಿ ಶಟ್೯, ಬ್ಲಾಕ್ ಪ್ಯಾಂಟ್, ಬ್ಲಾಕ್ ಬ್ಯಾಗ್, ಮುಖಕ್ಕೆ ಮಾಸ್ಕ, ಕೈಯಲ್ಲಿ ವಾಚ್, ನೀಲಿ ಮತ್ತು ಬಿಳಿ ಮಿಶ್ರಿತ ಶ್ಯೂವನ್ನು  ಬಾಂಬರ್ ಹಾಕಿದ್ದಾನೆ.

ಬಳ್ಳಾರಿ ಮೂಲದ ಮಿನಾಜ್ ಅಲಿಯಾಸ್ ಸುಲೇಮಾನ್, ಬಳ್ಳಾರಿಯ ಸೈಯದ್ ಸಮೀರ್, ಮುಂಬೈನ ಅನಾಸ್ ಇಕ್ಬಾಲ್ ಶೇಕ್ ಹಾಗೂ ದೆಹಲಿಯ ಶ್ಯಾನ್ ರೆಹಮಾನ್ ಅಲಿಯಾಸ್ ಹುಸೇನ್ ಎಂಬ ನಾಲ್ವರನ್ನು ವಶಕ್ಕೆ ಪಡೆದ ಎನ್​ಐಎ ರಾಮೇಶ್ವರಂ ಕೆಫೆಯ ಸ್ಫೊಟದಲ್ಲಿ ಇವರ ಪಾತ್ರ ಇತ್ತಾ ಎಂಬ ವಿಚಾರಣೆ ಆರಂಭಿಸಿದೆ.

ಇದನ್ನೂ ಓದಿ: ಬಾಂಬ್ ಬ್ಲಾಸ್ಟ್​​ ಬಳಿಕ ರಾಮೇಶ್ವರಂ ಕೆಫೆ ರೀಓಪನ್, ಭಾರತೀಯರ ಆತ್ಮಸ್ಥೈರ್ಯವನ್ನು ಈ ಘಟನೆ ಕುಗ್ಗಿಸಿಲ್ಲ ಎಂದ ಮಾಲೀಕರು

ಸದ್ಯ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಬಳಸಿದ ವಸ್ತುಗಳು ಹಾಗೂ ಈ ಹಿಂದೆ ದಾಳಿ ವೇಳೆ ವಶಕ್ಕೆ ಪಡೆದಿದ್ದ ಸ್ಫೋಟಕ ವಸ್ತುಗಳ ಸಾಮ್ಯತೆ ಇದ್ದು, ಬಳ್ಳಾರಿ ಮಾಡ್ಯೂಲ್​ನ ಸದಸ್ಯನೇ ಈ ಕೃತ್ಯ ಎಸಗಿದ್ದಾನಾ ಎಂಬ ಅನುಮಾನದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಬಾಂಬರ್​ ಓಡಾಟದ ಮತ್ತೆರಡು ವಿಡಿಯೋ ರಿಲೀಸ್​ ಮಾಡಿದ ಎನ್​ಐಎ

ಸೈಯದ್‌ ಸಮೀರ್‌, ಮಿನಾಜ್ ಅಲಿಯಾಸ್‌ ಸುಲೇಮಾನ್‌ನ ಸಹಚರ ಆಗಿದ್ದ. ಕಳೆದ ಅಕ್ಟೋಬರ್‌ನಲ್ಲಿ ರಸಗೊಬ್ಬರ ಅಂಗಡಿಯೊಂದರಲ್ಲಿ ಒಂದು ಕೆಜಿ ಅಮೋನಿಯಂ ನೈಟ್ರೇಟ್‌ ಖರೀಸಿದ್ದರು. ಸ್ಫೋಟಕ್ಕೆ ಈ ವಸ್ತುವನ್ನ ಬಳಸಲಾಗುತ್ತೆ. ಬಳ್ಳಾರಿಯ ಕೌಲ್‌ಬಜಾರ್‌ನಲ್ಲಿರುವ ಶಾಪ್‌ನಲ್ಲೇ ಅಮೋನಿಯಂ ನೈಟ್ರೇಟ್ ಖರೀಸಿದ್ದರು. ಹೀಗಾಗಿ ಕೌಲ್‌ಬಜಾರ್‌ನಲ್ಲೇ ಬೀಡು ಬಿಟ್ಟಿರುವ NIA ಹತ್ತಾರು ಶಾಪ್‌ಗಳಲ್ಲಿ ವಿಚಾರಣೆ ಮಾಡುತ್ತಿದೆ. ಸಮೀರ್‌ ಹಾಗೂ ಸುಲೇಮಾನ್‌ ಹಿಸ್ಟರಿ ಭಯಾನಕವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ