ಬೆಂಗಳೂರಿನ ಮಹದೇವಪುರ ವಲಯದಲ್ಲಿ ಗುಂಡಿ ಮುಚ್ಚಿದ ಪಾಲಿಕೆ: ಡೆಡ್ ಲೈನ್​ಗೆ ಇನ್ನೆರಡು ದಿನ ಬಾಕಿ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 13, 2024 | 8:50 PM

ಕಳೆದ ನಾಲ್ಕು ದಿನಗಳಿಂದ ನಿತ್ಯ ಒಂದೊಂದು ವಲಯದಲ್ಲಿ ರಸ್ತೆಗುಂಡಿ ಮುಚ್ಚುತ್ತಿರುವ ಬಿಬಿಎಂಪಿ, ಇಂದು ಮಹದೇವಪುರ ವಲಯದ ಐಟಿಪಿಎಲ್​ ಮುಖ್ಯರಸ್ತೆಯಲ್ಲಿ ರಸ್ತೆಗುಂಡಿ ಮುಚ್ಚುವ ಕೆಲಸ ಮಾಡಿದೆ. ಜಂಕ್ಷನ್ ಬಳಿ ಗುಂಡಿ ಬಿದ್ದ ಜಾಗಕ್ಕೆ ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಬಳಸಿ ತೇಪೆ ಹಚ್ಚಿರುವ ಪಾಲಿಕೆ, ಡೆಡ್ ಲೈನ್ ಮುಗಿಯೋದರೊಳಗೆ ರಾಜಧಾನಿಯ ಗುಂಡಿಗಳನ್ನ ಮುಚುವುದಕ್ಕೆ ಫೀಲ್ಡಿಗಿಳಿದಿದೆ.

ಬೆಂಗಳೂರಿನ ಮಹದೇವಪುರ ವಲಯದಲ್ಲಿ ಗುಂಡಿ ಮುಚ್ಚಿದ ಪಾಲಿಕೆ: ಡೆಡ್ ಲೈನ್​ಗೆ ಇನ್ನೆರಡು ದಿನ ಬಾಕಿ
ಬೆಂಗಳೂರಿನ ಮಹದೇವಪುರ ವಲಯದಲ್ಲಿ ಗುಂಡಿ ಮುಚ್ಚಿದ ಪಾಲಿಕೆ: ಡೆಡ್ ಲೈನ್​ಗೆ ಇನ್ನೆರಡು ದಿನ ಬಾಕಿ
Follow us on

ಬೆಂಗಳೂರು, ಸೆಪ್ಟೆಂಬರ್​ 13: ರಾಜಧಾನಿಯ ರಸ್ತೆಗುಂಡಿಗಳನ್ನ (potholes) ಮುಚ್ಚೋಕೆ ಡಿಸಿಎಂ ಡಿಕೆ ಶಿವಕುಮಾರ್​ ಕೊಟ್ಟಿದ್ದ ಡೆಡ್ ಲೈನ್ ಮುಗಿಯುವುದಕ್ಕೆ ಇನ್ನೆರಡು ದಿನ ಬಾಕಿ ಉಳಿದಿದೆ. ಟಿವಿ9 ನಿರಂತರ ಅಭಿಯಾನದ ಬಳಿಕ ಬೆಂಗಳೂರಿನ ರಸ್ತೆಗುಂಡಿಗಳನ್ನ ಮುಚ್ಚುವುದಕ್ಕೆ 15 ದಿನಗಳ ಡೆಡ್ ಲೈನ್ ಕೊಟ್ಟಿದ್ದ ಡಿಕೆ ಶಿವಕುಮಾರ್​, ಡೆಡ್ ಲೈನ್ ಒಳಗೆ ಗುಂಡಿ ಮುಚ್ಚದಿದ್ದರೆ ಸಸ್ಪೆಂಡ್ ಎಚ್ಚರಿಕೆ ಕೊಟ್ಟಿದ್ದರು. ಇದೀಗ ನಾಲ್ಕು ದಿನದಿಂದ ಗುಂಡಿ ಮುಚ್ಚುವ ಕೆಲಸಕ್ಕೆ ವೇಗ ನೀಡಿರುವ ಪಾಲಿಕೆ ಇಂದು ಮಹದೇವಪುರ ವಲಯದಲ್ಲಿ ಗುಂಡಿ ಮುಚ್ಚಿದೆ. ಅತ್ತ ಪೀಕ್ ಅವರ್​ನಲ್ಲಿ ಗುಂಡಿ ಮುಚ್ಚಲು ರಸ್ತೆ ಬಂದ್ ಮಾಡಿದ್ದಕ್ಕೆ ಟ್ರಾಫಿಕ್ ಕಿರಿಕಿರಿಯಿಂದ ಸುಸ್ತಾದ ಸಿಟಿಮಂದಿ ಪಾಲಿಕೆ ನಡೆಗೆ ಕಿಡಿಕಾರಿದ್ದಾರೆ.

ಮಹದೇವಪುರ ವಲಯದಲ್ಲಿ ರಸ್ತೆಗುಂಡಿ ಮುಚ್ಚುವ ಕೆಲಸ

ಕಳೆದ ನಾಲ್ಕು ದಿನಗಳಿಂದ ನಿತ್ಯ ಒಂದೊಂದು ವಲಯದಲ್ಲಿ ರಸ್ತೆಗುಂಡಿ ಮುಚ್ಚುತ್ತಿರುವ ಬಿಬಿಎಂಪಿ, ಇಂದು ಮಹದೇವಪುರ ವಲಯದ ಐಟಿಪಿಎಲ್​ (ITPL) ಮುಖ್ಯರಸ್ತೆಯಲ್ಲಿ ರಸ್ತೆಗುಂಡಿ ಮುಚ್ಚುವ ಕೆಲಸ ಮಾಡಿದೆ. ಜಂಕ್ಷನ್ ಬಳಿ ಗುಂಡಿ ಬಿದ್ದ ಜಾಗಕ್ಕೆ ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಬಳಸಿ ತೇಪೆ ಹಚ್ಚಿರುವ ಪಾಲಿಕೆ, ಡೆಡ್ ಲೈನ್ ಮುಗಿಯೋದರೊಳಗೆ ರಾಜಧಾನಿಯ ಗುಂಡಿಗಳನ್ನ ಮುಚುವುದಕ್ಕೆ ಫೀಲ್ಡಿಗಿಳಿದಿದೆ.

ಇದನ್ನೂ ಓದಿ: ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಡಿಕೆಶಿ ಡೆಡ್​​ಲೈನ್: ಇಲ್ಲದಿದ್ದರೆ ಸಸ್ಪೆಂಡ್​ ಫಿಕ್ಸ್​ ಎಂದ ಡಿಸಿಎಂ

ಇನ್ನು ಎಂದಿನಂತೆ ಇಂದು ಕೂಡ ಮಹದೇವಪುರ ವಲಯದ ವಲಯ ಆಯುಕ್ತರು, ವಲಯದ ಜಂಟಿ ಆಯುಕ್ತರು ಸ್ಥಳದಲ್ಲಿ ಪರಿಶೀಲನೆ ನಡೆಸುವ ಮೂಲಕ ರಸ್ತೆಗುಂಡಿ ಮುಚ್ಚಿಸಿದರು. ಈ ವೇಳೆ ರಸ್ತೆಗುಂಡಿಗಳನ್ನ ಮುಚ್ಚುವ ಕಾರ್ಯದ ಬಗ್ಗೆ ಮಾತನಾಡಿದ ವಲಯ ಆಯುಕ್ತ ರಮೇಶ್, ಅತಿ ದೊಡ್ಡ ವಲಯವಾಗಿರುವ ಮಹದೇವ ವಲಯದಲ್ಲಿ ಬಂದಿರುವ ಎಲ್ಲಾ ದೂರುಗಳ ಪ್ರಕಾರ ಗುಂಡಿ ಮುಚ್ಚುವ ಕೆಲಸ ಆಗುತ್ತಿದೆ. ಮಹದೇವಪುರ ವ್ಯಾಪ್ತಿಯಲ್ಲಿ ಬರುವ 42 ಹಳ್ಳಿಗಳ ರಸ್ತೆ ಅಭಿವೃದ್ಧಿ ಕೂಡ ಬಹುತೇಕ ಆಗಿದೆ. ಡೆಡ್ ಲೈನ್ ಒಳಗೆ ಎಲ್ಲಾ ಗುಂಡಿ ಮುಚ್ಚುತ್ತೇವೆ ಎಂದಿದ್ದಾರೆ.

ಇನ್ನು ಗುಂಡಿ ಮುಚ್ಚುವ ವೇಳೆ ಪೀಕ್ ಅವರ್ ನಲ್ಲೇ ರಸ್ತೆ ಬಂದ್ ಮಾಡಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದ್ರು, ಗುಂಡಿ ಮುಚ್ಚುವ ಕೆಲಸ ಮುಗಿಯೋ ತನಕ ವಾಹನಗಳನ್ನ ನಿಲ್ಲಿಸಿದ್ದರಿಂದ ವಾಹನ ಸವಾರರು ರಾತ್ರಿ ವೇಳೆ ಕೆಲಸ ಮಾಡಿ ಬೆಳಗ್ಗೆ ತೊಂದರೆ ಕೊಡಬೇಡಿ ಅಂತಾ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಟಿವಿ9 ವರದಿ ಬಳಿಕ ಎಚ್ಚೆತ್ತ ಬಿಬಿಎಂಪಿ: ರಸ್ತೆಗುಂಡಿ ಮುಚ್ಚಲು ಡೆಡ್‌ಲೈನ್‌, ಟಾಸ್ಕ್​ ಪೋರ್ಸ್ ರಚನೆ

ಒಟ್ಟಿನಲ್ಲಿ ಡೆಡ್ ಲೈನ್ ಜೊತೆಗೆ ಸಸ್ಪೆಂಡ್ ಎಚ್ಚರಿಕೆ ನೀಡಿರೋ ಬೆನ್ನಲ್ಲೆ ಸದ್ಯ ಬೆಂಗಳೂರಿನ ರಸ್ತೆಗುಂಡಿಗಳಿಗೆ ಟಾರ್ ಭಾಗ್ಯ ಸಿಕ್ಕಿದೆ. ಸದ್ಯ ರಾಜಧಾನಿಯ ಹಲವೆಡೆ ಗುಂಡಿ ಮುಚ್ಚುವ ಕೆಲಸ ವೇಗ ಪಡೆದಿದ್ದು, ಡೆಡ್ ಲೈನ್ ಮುಗಿದ ಬಳಿಕವೂ ಬಿಬಿಎಂಪಿಯ ಅಧಿಕಾರಿಗಳು ಇದೇ ರೀತಿ ಕೆಲಸ ಮಾಡ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.