ಫೇಸ್​ಲೆಸ್​​, ಆನ್​ಲೈನ್​ ಡಿಜಿಟಲ್​ ಇ-ಖಾತಾ ವ್ಯವಸ್ಥೆ ಜಾರಿ ಮಾಡಿದ ಬಿಬಿಎಂಪಿ

ಡಿಸಿಎಂ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಫೇಸ್​ಲೆಸ್​ ಸಂಪರ್ಕರಹಿತ ಆನ್​ಲೈನ್​ ಡಿಜಿಟಲ್​ ವ್ಯವಸ್ಥೆ ಜಾರಿ ಮಾಡಿದೆ. ಇದರ ಭಾಗವಾಗಿ ಮುಂದಿನ ದಿನಗಳಲ್ಲಿ ಬಿಬಿಎಂಪಿಯ ಸಿಬ್ಬಂದಿಯು ನಿಮ್ಮ ಮನೆಗಳಿಗೆ ಭೇಟಿ ನೀಡಿ ನಿಮ್ಮ ಆಸ್ತಿಯ ಜಿಪಿಎಸ್​ ಮಾಹಿತಿಯನ್ನು ಪಡೆಯಲಿದ್ದಾರೆ ಎಂದು ತಿಳಿಸಲಾಗಿದೆ.

ಫೇಸ್​ಲೆಸ್​​, ಆನ್​ಲೈನ್​ ಡಿಜಿಟಲ್​ ಇ-ಖಾತಾ ವ್ಯವಸ್ಥೆ ಜಾರಿ ಮಾಡಿದ ಬಿಬಿಎಂಪಿ
ಫೇಸ್​ಲೆಸ್​​, ಆನ್​ಲೈನ್​ ಡಿಜಿಟಲ್​ ಇ-ಖಾತಾ ವ್ಯವಸ್ಥೆ ಜಾರಿ ಮಾಡಿದ ಬಿಬಿಎಂಪಿ
Follow us
|

Updated on:Sep 19, 2024 | 7:32 PM

ಬೆಂಗಳೂರು, ಸೆಪ್ಟೆಂಬರ್​ 19: ಲಕ್ಷಾಂತರ ಖಾತಾಗಳನ್ನು ಡಿಜಿಟಲೀಕರಗೊಳಿಸಿರುವ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ಇದೀಗ ಫೇಸ್​ಲೆಸ್​ ಸಂಪರ್ಕರಹಿತ ಆನ್​ಲೈನ್​ ಡಿಜಿಟಲ್​ ವ್ಯವಸ್ಥೆ ಜಾರಿ ಮಾಡಲಾಗಿದೆ. ಡಿಸಿಎಂ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮತ್ತು ನಿರ್ದೇಶನಲ್ಲಿ ಶೀಘ್ರದಲ್ಲೇ ಜಿಪಿಎಸ್​​ ಆಧಾರಿತ ಮಾಹಿತಿಯನ್ನು ಪಡೆದು ಡಿಜಿಟಲೀಕರಣಗೊಳಿಸಲಿದೆ ಎಂದು ತಿಳಿಸಲಾಗಿದೆ.

ಬಿಬಿಎಂಪಿ ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಈ ಬಗ್ಗೆ ಬಿಬಿಎಂಪಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಬಿಬಿಎಂಪಿಯು ರಿಜಿಸ್ಟ್​ರ್​ಗಳಲ್ಲಿನ ಎಲ್ಲಾ 21 ಲಕ್ಷ ಖಾತಾಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಮತ್ತು ರೋಲ್-ಔಟ್ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ಇದರ ಭಾಗವಾಗಿ ಮುಂದಿನ ದಿನಗಳಲ್ಲಿ ಬಿಬಿಎಂಪಿಯ ಸಿಬ್ಬಂದಿಯು ನಿಮ್ಮ ಮನೆಗಳಿಗೆ ಭೇಟಿ ನೀಡಿ ನಿಮ್ಮ ಆಸ್ತಿಯ ಜಿಪಿಎಸ್​ (GPS coordinates) ಮಾಹಿತಿಯನ್ನು ಪಡೆಯಲಿದ್ದಾರೆ.

ಇದನ್ನೂ ಓದಿ: ಪೇಪರ್ ಖಾತಾ ಆಧಾರದಲ್ಲಿ ನೋಂದಣಿ ಮಾಡುವುದು ರದ್ದು: ಇನ್ಮುಂದೆ ನೋಂದಣಿಗೆ ಇ-ಆಸ್ತಿ ಕಡ್ಡಾಯ

ಬಿಬಿಎಂಪಿ ನಿಮ್ಮ ಆಸ್ತಿಯ ಡಿಜಿಟಲ್​ ಖಾತಾ (eKhata) ಪಡೆಯಲು ಪ್ರತಿ ಆಸ್ತಿಯ ಜಿಪಿಎಸ್​ ಕಡ್ಡಾಯಗೊಳಿಸಿದೆ. ಸದರಿ ಪ್ರಾಪರ್ಟಿ ಜಿಪಿಎಸ್​ ನಿಮ್ಮ ಆಸ್ತಿಯ ವಿಶಿಷ್ಟ ಗುರುತು ಆಗಿರುತ್ತದೆ. ಎಲ್ಲಾ ಬಿಬಿಎಂಪಿಯ ಇ-ಖಾತಾ ಸೇವೆಗಳ ಫೇಸ್‌ಲೆಸ್, ಸಂಪರ್ಕರಹಿತ ಮತ್ತು ಆನ್‌ಲೈನ್ ವಿತರಣೆಗೆ ಇದು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ, ನಿಮಗೆ ಉತ್ತಮ ಸೇವೆ ನೀಡಲು ಬಿಬಿಎಂಪಿಯನ್ನು ಬಲಪಡಿಸಲು ನಿಮ್ಮ ಸಂಪೂರ್ಣ ಸಹಕಾರವನ್ನು ನೀಡುವಂತೆ ವಿನಂತಿಸಲಾಗಿದೆ.

ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿವೆ ತೆರಿಗೆ ಕಟ್ಟದ 7 ಲಕ್ಷ ಆಸ್ತಿಗಳು; ಇ-ಖಾತಾ ಮೂಲಕ ಬಾಕಿ ತೆರಿಗೆ ವಸೂಲಿಗೆ ಪ್ಲಾನ್

ಬಿಬಿಎಂಪಿಯು ಸದಾ ನಿಮ್ಮ ಸೇವೆಯಲ್ಲಿ ಹಾಗೂ ನಾವೆಲ್ಲ ಇಷ್ಟಪಡುವ ನಗರವನ್ನು ರಚಿಸಲು ಸಹಕರಿಸುವಂತೆ ತಿಳಿಸಲಾಗಿದೆ.  ಬೆಂಗಳೂರು ಪಾಲಿಕೆ ಜೊತೆಗೆ ವಿಲೀನಗೊಳಿಸುವುದಕ್ಕೂ ಮುಂಚೆ ಗ್ರಾಮ ಪಂಚಾಯಿತಿಯಿಂದ ಇ ಖಾತಾ ನೀಡಲಾಗುತ್ತಿತ್ತು. ಸರ್ಕಾರವು ಇ-ಆಸ್ತಿ ನೋಂದಣಿಗೆ ಕಾವೇರಿ ತಂತ್ರಾಂಶದೊಂದಿಗೆ ಇತ್ತೀಚೆಗೆ ಜೋಡಣೆ ಮಾಡಲಾಗಿದೆ. ಆ ಮೂಲಕ ಆಸ್ತಿಗಳ ನೋಂದಣಿ ವೇಳೆ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:28 pm, Thu, 19 September 24