ಪೇಪರ್ ಖಾತಾ ಆಧಾರದಲ್ಲಿ ನೋಂದಣಿ ಮಾಡುವುದು ರದ್ದು: ಇನ್ಮುಂದೆ ನೋಂದಣಿಗೆ ಇ-ಆಸ್ತಿ ಕಡ್ಡಾಯ

ಪೇಪರ್ ಖಾತೆ ಆಧಾರದಲ್ಲಿ ನೋಂದಣಿ ನಡೆಯುತ್ತಿರುವುದರಿಂದ ಸರ್ಕಾರಕ್ಕೆ ನಷ್ಟ ಆಗುತ್ತಿರುವ ಬಗ್ಗೆ ಹಣಕಾಸು ಇಲಾಖೆ ಆಕ್ಷೇಪ ಹಿನ್ನೆಲೆ ಇಂದಿನ ವಿಧಾನಸಭೆಯಲ್ಲಿ ಬಜೆಟ್​​ನಲ್ಲಿ ಘೋಷಣೆಯಂತೆ ನೋಂದಣಿ(ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಗಿದೆ. ಆ ಮೂಲಕ ಈಗ ಪೇಪರ್ ಖಾತಾ ಆಧಾರದಲ್ಲಿ ನೋಂದಣಿ ಮಾಡುವುದು ರದ್ದಾಗಿದ್ದು, ಇನ್ನು ಮುಂದೆ ನೋಂದಣಿಗೆ ಇ-ಆಸ್ತಿ ಕಡ್ಡಾಯ ಮಾಡಲಾಗಿದೆ. ಪೇಪರ್ ಖಾತೆ ಆಧಾರದಲ್ಲಿ ನೋಂದಣಿ ಆಗುವುದಿಲ್ಲ.

ಪೇಪರ್ ಖಾತಾ ಆಧಾರದಲ್ಲಿ ನೋಂದಣಿ ಮಾಡುವುದು ರದ್ದು: ಇನ್ಮುಂದೆ ನೋಂದಣಿಗೆ ಇ-ಆಸ್ತಿ ಕಡ್ಡಾಯ
ಪ್ರಾತಿನಿಧಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Feb 21, 2024 | 6:41 PM

ಬೆಂಗಳೂರು, ಫೆಬ್ರವರಿ 21: ವಿಧಾನಸಭೆಯಲ್ಲಿ ಇಂದು ನೋಂದಣಿ (ತಿದ್ದುಪಡಿ) ವಿಧೇಯಕ ಅಂಗೀಕಾರ ಮಾಡಲಾಗಿದೆ. ಆ ಮೂಲಕ ಈಗ ಪೇಪರ್ ಖಾತಾ ಆಧಾರದಲ್ಲಿ ನೋಂದಣಿ ಮಾಡುವುದು ರದ್ದಾಗಿದ್ದು, ಇನ್ನು ಮುಂದೆ ನೋಂದಣಿಗೆ ಇ-ಆಸ್ತಿ (property registration) ಕಡ್ಡಾಯ ಮಾಡಲಾಗಿದೆ. ಕಾವೇರಿ ತಂತ್ರಾಂಶದಲ್ಲಿ ಅಟೋಮ್ಯಾಟಿಕ್ ಆಗಿ ನಗರ ಸಭೆ ವ್ಯಾಪ್ತಿಯ ಡೇಟಾ ಬೇಸ್ ಚೆಕ್‌ ಪರಿಶೀಲನೆಯಾಗಿ ಖಾತೆ ಆಗಿದ್ದರೆ ಮಾತ್ರ ನೋಂದಣಿ ಆಗಲಿದೆ. ಇನ್ನು ಮುಂದೆ ಪೇಪರ್ ಖಾತೆ ಆಧಾರದಲ್ಲಿ ನೋಂದಣಿ ಆಗುವುದಿಲ್ಲ. ಕಾನೂನು ಬಾಹಿರ ನೋಂದಣಿಗೆ ಕಡಿವಾಣ ಹಾಕಲು ಕಾನೂನು ತಿದ್ದುಪಡಿ ಮಾಡಲಾಗಿದೆ. ಬಜೆಟ್ ಘೋಷಣೆಯಂತೆ ತಿದ್ದುಪಡಿ ವಿಧೇಯಕ ಅಂಗೀಕರಿಸಲಾಗಿದೆ.

ಕಡ್ಡಾಯವಾಗಿ ನೋಂದಾಯಿಸಲಾಗುವ ಆಯ್ದ ದಾಖಲೆಗಳ ಇ- ನೋಂದಣಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಎರಡು ಪಕ್ಷಗಳು ಇಲ್ಲದೇ ನೋಂದಾವಣೆ ಮಾಡಲಾಗುವುದು. ಪೇಪರ್ ಖಾತೆ ಆಧಾರದಲ್ಲಿ ನೋಂದಣಿ ನಡೆಯುತ್ತಿರುವುದರಿಂದ ಸರ್ಕಾರಕ್ಕೆ ನಷ್ಟ ಆಗುತ್ತಿರುವ ಬಗ್ಗೆ ಹಣಕಾಸು ಇಲಾಖೆ ಆಕ್ಷೇಪಿಸಿತ್ತು.

ಇದನ್ನೂ ಓದಿ: 2023ನೇ ಸಾಲಿನ ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕ ಅಂಗೀಕಾರ, ಮುದ್ರಾಂಕ, ನೋಂದಣಿ ಶುಲ್ಕ ಹೆಚ್ಚಳ

ಖಾತಾ ಮಾಡುವ ವೇಳೆ ಗ್ರಾಮೀಣ ಪ್ರದೇಶಕ್ಕೆ ನೀಡಲಾಗಿದ್ದ ಇ-ಸ್ವತ್ತು, ನಗರ ಪ್ರದೇಶಗಳಿಗೆ ನೀಡಲಾಗಿದ್ದ ಇ- ಆಸ್ತಿ ನೋಂದಣಿ ಮಾಡುವಾಗ ಪಂಚಾಯತಿ ವ್ಯಾಪ್ತಿಯಲ್ಲಿ ಇ- ಖಾತೆ ಇದೆಯಾ ಎಂದು ಆಟೋಮ್ಯಾಟಿಕ್ ಆಗಿ ಪರಿಶೀಲನೆ ಮಾಡಲಾಗುವುದು. ನಗರ ಪ್ರದೇಶಗಳಲ್ಲಿ ನೋಂದಣಿಗೆ ಪೇಪರ್ ಖಾತಾದ ಮೇಲೆ ನೋಂದಣಿ ನಡೆಯುತ್ತಿತ್ತು.

ಸರ್ಕಾರವು ಇ-ಆಸ್ತಿ ನೋಂದಣಿಗೆ ಕಾವೇರಿ ತಂತ್ರಾಂಶದೊಂದಿಗೆ ಇತ್ತೀಚೆಗೆ ಜೋಡಣೆ ಮಾಡಲಾಗಿದೆ. ಆ ಮೂಲಕ ಆಸ್ತಿಗಳ ನೋಂದಣಿ ವೇಳೆ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲಾಗುತ್ತಿದೆ.  ಸಾರ್ವಜನಿಕರು ವಿಳಂಬವಿಲ್ಲದೆ ತಮ್ಮ ದಾಸ್ತಾವೇಜುಗಳನ್ನು ನೋಂದಾಣಿ ಮಾಡಿಕೊಳ್ಳಲು ಇದು ಸಹಕಾರಿಯಾಗಿದೆ. ಉಪನೋಂದಾಣಿ ಕಚೇರಿಯಿಂದ ನೀಡುವ ಸೇವೆಗಳನ್ನು ಸಾರ್ವಜನಿಕರು ಆನ್​ಲೈನ್​ ಮುಖಾಂತರ ಪಡೆಯಬಹುದಾಗಿದೆ.

ಇದನ್ನೂ ಓದಿ: ಶಾಲೆಗಳಿಂದ 100 ಮೀ. ವ್ಯಾಪ್ತಿಯಲ್ಲಿ ಸಿಗರೇಟ್ ನಿಷೇಧ, ದಂಡ ಹೆಚ್ಚಳ: ಮಸೂದೆ ಪಾಸ್

ಸಾರ್ವಜನಿಕರು ತಮ್ಮ ಆಸ್ತಿಯ ವಿವರ, ಮೂಲ ದಾಖಲೆಗಳನ್ನು ಆನ್​ಲೈನ್​ ಮೂಲಕ ನೇರವಾಗಿ ಉಪನೋಂದಾಣಿಧಿಕಾರಿಗೆ ಕಳುಹಿಸಬಹುದಾಗಿದೆ. ಅಧಿಕಾರಿಗಳು ಪರಿಶೀಲಿಸಿದ ನೋಂದಾಣಿಗೆ ತಗಲುವ ವೆಚ್ಚವನ್ನು ಆನ್​ಲೈನ್​ ಮೂಲಕ ಪಾವತಿಸಿ ನಮಗೆ ಬೇಕಾದ ದಿನಾಂಕ, ಸಮಯವನ್ನು ನಿಗದಿಪಡಿಸಿಕೊಳ್ಳಲು ಅವಕಾಶವಿದೆ. ನಿಗದಿತ ದಿನಾಂಕದಂದು ಕೆಲವೇ ನಿಮಿಷದಲ್ಲಿ ಭಾವಚಿತ್ರ, ಸಹಿ, ಹೆಬ್ಬೆಟ್ಟಿನ ಗುರುತು ತೆಗೆದುಕೊಂಡು ನೋಂದಾಣಿ ಮಾಡಿಕೊಡಲಾಗುತ್ತದೆ.

ವಿಧಾನಸಭೆಯಲ್ಲಿ ಕರ್ನಾಟಕ ಸ್ಟ್ಯಾಂಪ್(ತಿದ್ದುಪಡಿ) ವಿಧೇಯಕ ಅಂಗೀಕಾರ

ವಿಧಾನಸಭೆಯಲ್ಲಿ ಕರ್ನಾಟಕ ಸ್ಟ್ಯಾಂಪ್(ತಿದ್ದುಪಡಿ) ವಿಧೇಯಕ ಅಂಗೀಕಾರ ಮಾಡಲಾಗಿದೆ. ಪಾರದರ್ಶಕತೆ ಕಾಯ್ದುಕೊಳ್ಳಲು ಡಿಡಿ ವ್ಯವಸ್ಥೆ ತೆಗೆದುಹಾಕಿ ಡಿಜಿಟಲ್ ಪಾವತಿ ವ್ಯವಸ್ಥೆ ಅನುಷ್ಠಾನ ಮಾಡಲಾಗಿದೆ. ಈ ಮೂಲಕ ಪಾರದರ್ಶಕತೆ ಹಾಗೂ ಸೋರಿಕೆ ತಡೆಗಟ್ಟಲು ಅನುಕೂಲವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.