AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beer Price Hike: ಬಿಯರ್ ದರ ಮತ್ತೆ ಹೆಚ್ಚಳ, ಮದ್ಯ ಪ್ರಿಯರಿಗೆ ಆಘಾತ ನೀಡಿದ ರಾಜ್ಯ ಸರ್ಕಾರ

Excise Duty on Beer: ಕರ್ನಾಟಕದಲ್ಲಿ ಮತ್ತೊಮ್ಮೆ ಬಿಯರ್ ದರ ಹೆಚ್ಚಳವಾಗಿದೆ. ಇದರೊಂದಿಗೆ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಆರೇಳು ಬಾರಿ ಮದ್ಯದ ದರ ಹೆಚ್ಚಾದಂತಾಗಿದೆ. ಇದರಿಂದ ಮಾರಾಟದ ಮೇಲೂ ಪರಿಣಾಮವಾಗಿದೆ ಎಂದಿದ್ದಾರೆ ಮಾರಾಟಗಾರರು. ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳದ ವಿವರ ಇಲ್ಲಿದೆ.

Beer Price Hike: ಬಿಯರ್ ದರ ಮತ್ತೆ ಹೆಚ್ಚಳ, ಮದ್ಯ ಪ್ರಿಯರಿಗೆ ಆಘಾತ ನೀಡಿದ ರಾಜ್ಯ ಸರ್ಕಾರ
ಸಾಂದರ್ಭಿಕ ಚಿತ್ರ
ಕಿರಣ್​ ಸೂರ್ಯ
| Edited By: |

Updated on: Feb 02, 2024 | 7:27 AM

Share

ಬೆಂಗಳೂರು, ಫೆಬ್ರವರಿ 2: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ (Karnataka government) ಮತ್ತೆ ಆಘಾತ ನೀಡಿದೆ. ಪದೇ ಪದೇ ದರ ಏರಿಕೆ ಮಾಡಿ ಜೇಬಿಗೆ ಕತ್ತರಿ ಹಾಕುತ್ತಿದ್ದು, ಕಿಸೆಯಲ್ಲಾ ಖಾಲಿಯಾದರೂ ಕಿಕ್ ಮಾತ್ರ ಏರದಂತಾಗಿದೆ.! ರಾಜ್ಯ ಸರ್ಕಾರ ಬಿಯರ್ (Beer) ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿದೆ. ಅಬಕಾರಿ ಸುಂಕವನ್ನು ಶೇಕಡಾ 185 ರಿಂದ ಶೇಕಡಾ 195 ಕ್ಕೆ ಅಂದ್ರೆ ಶೇ 10 ರಷ್ಟು ಹೆಚ್ಚಿಸಿದೆ. ಇದರಿಂದಾಗಿ, ಬಿಯರ್ ಬಾಟಲ್ ಬೆಲೆ (Beer Price) 10 ರಿಂದ 15 ರೂಪಾಯಿ ಹೆಚ್ಚಾಗಿದೆ. ಗುರುವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ.

7 ತಿಂಗಳಲ್ಲಿ 3ನೇ ಬಾರಿ ಬಿಯರ್ ದರ ಹೆಚ್ಚಳ

ಇದರೊಂದಿಗೆ, ಕಳೆದ 7 ತಿಂಗಳ ಅವಧಿಯಲ್ಲಿ 3ನೇ ಬಾರಿಗೆ ಬಿಯರ್ ಬೆಲೆ ಏರಿಕೆಯಾದಂತಾಗಿದೆ. ಬಿಯರ್ ಬೆಲೆ ಒಟ್ಟು 40 ರೂ. ಜಾಸ್ತಿ ಆಗಿದೆ. ಪದೆಪದೇ ದರ ಏರಿಸಿದರೆ ವ್ಯಾಪಾರಕ್ಕೂ ಹೊಡೆತ ಆಗುತ್ತದೆ ಎಂದು ಮಾರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುಕ್ಕಾಣಿ ಹಿಡಿಯುತ್ತದ್ದಂತೆಯೇ ಬಿಯರ್‌ ಮೇಲೆ ಶೇ 20ರಷ್ಟು ಸುಂಕ ಹೆಚ್ಚಿಸಿತ್ತು. ಉತ್ಪಾದನಾ ವೆಚ್ಚ ಸರಿದೂಗಿಸಿಸಲು ಬಾಟಲ್‌ ಮೇಲೆ 10 ರೂ. ಏರಿಸಿತ್ತು. ಇದೀಗ ಮತ್ತೆ ಬಿಯರ್‌ ದರ ಹೆಚ್ಚಳ ಮಾಡಿದೆ. ಈ ವರ್ಷ ಅಬಕಾರಿ ಇಲಾಖೆಯಿಂದ 36 ಸಾವಿರ ಕೋಟಿ ಆದಾಯ ಸಂಗ್ರಹಕ್ಕೆ ಗುರಿ ನೀಡಿದೆ.

ಈ ವರ್ಷ ರಾಜ್ಯ ಸರ್ಕಾರ ಅಬಾಕಾರಿ ಇಲಾಖೆಗೆ 36 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹದ ಗುರಿ ನೀಡಿದೆ. 10 ತಿಂಗಳಲ್ಲಿ 27 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇನ್ನೆರಡು ತಿಂಗಳಿನಲ್ಲಿ ಗುರಿ ತಲುಪಲು 9 ಸಾವಿರ ಕೋಟಿ ಸಂಗ್ರಹವಾಗಬೇಕಿದೆ. ಇತ್ತ ಬೆಲೆ ಏರಿಕೆಯಿಂದ ಮದ್ಯಪ್ರಿಯರು ಬಿಯರ್ ಸಹವಾಸವೇ ಬೇಡ ಎನ್ನುತ್ತಿದ್ದಾರೆ.

ಬಿಯರ್ ಮಾರಾಟದಿಂದ ಸರ್ಕಾರಕ್ಕೆ ಬರುವ ಆದಾಯ ಬಹಳ ಕಡಿಮೆ‌. ಹೀಗಾಗಿ ದರ ಏರಿಕೆ ಮಾಡಿ ಖಜಾನೆ ತುಂಬಿಸಿಕೊಳ್ಳಲು ಚಿಂತನೆ ಮಾಡಿದೆ. ಈ ಮೂಲಕ ಮದ್ಯ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ: ಮದ್ಯ ಪ್ರಿಯರಿಗೆ ಶಾಕ್; ಬಡವರ ಫೇವರಿಟ್ ಬ್ರ್ಯಾಂಡ್​ಗಳ ದರ ಹೆಚ್ಚಳ

ಬಡವರು ಹೆಚ್ಚಾಗಿ ಕುಡಿಯುವ ಮೂರು ಹಾಟ್ ಫೇವರೆಟ್ ಬ್ರ್ಯಾಂಡ್​ಗಳ ಮದ್ಯದ ದರವನ್ನು ಕಳೆದ ತಿಂಗಳಷ್ಟೇ ಮದ್ಯ ಮಾರಾಟ ಕಂಪನಿಗಳು ಹೆಚ್ಚಳ ಮಾಡಿದ್ದವು. ಆದರೆ, ಇದರಲ್ಲಿ ಸರ್ಕಾರದ ಪಾತ್ರ ಇರಲಿಲ್ಲ. ಮದ್ಯ ಉತ್ಪಾದನಾ ಕಂಪನಿಗಳು ಕ್ವಾಟರ್​ಗೆ 20 ರಿಂದ 30 ರೂಪಾಯಿಯಷ್ಟು ದರ ಹೆಚ್ಚಳ ಮಾಡಿದ್ದವು. ಉತ್ಪಾದನ ವೆಚ್ಚ ಅಧಿಕವಾಗಿದೆ ಎಂಬ ಕಾರಣ ನೀಡಿ ಮದ್ಯ ಉತ್ಪಾದಕ ಕಂಪನಿಗಳು ದರ ಹೆಚ್ಚಳ ಮಾಡಿದ್ದವು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Follow Us
Kiran Surya
Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ