ಪೇದೆಗೆ ಕೊರೊನಾ! ಆತಂಕದಲ್ಲಿ ಬೆಂಗಳೂರು ಪೊಲೀಸರು
ಬೆಂಗಳೂರು: ಅಕ್ಷರಶಃ ಕೊರೊನಾ ವಾರಿಯರ್ಸ್ ಆಗಿ ಹಗಲಿರುಳು ದುಡಿಯುತ್ತಿದ್ದ ರಾಜ್ಯ ಪೊಲೀಸ್ ಇಲಾಖೆಯ ಪೇದೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ರಾಜಧಾನಿಯ ಹಾಟ್ ಸ್ಪಾಟ್ ಆಗಿ ಕಾಡುತ್ತಿರುವ ಹೊಂಗಸಂದ್ರದಿಂದಲೇ ಈ ಕೊರೊನಾ ಸುದ್ದಿ ಕೇಳಿಬಂದಿದೆ. 650ನೇ ಸೋಂಕಿತ ಬೆಂಗಳೂರಿನ 40 ವರ್ಷದ ಪೊಲೀಸ್ ಪೇದೆ. ಮೂಲತಃ ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯ ಪೇದೆಯಾಗಿರುವ ಈ ಸೋಂಕಿತ ಕೊರೊನಾ ವಾರಿಯರ್, ಹೊಂಗಸಂದ್ರದಲ್ಲಿ ಕೊರೊನಾ ಸೋಂಕಿತರ ಉಪಟಳ ಜಾಸ್ತಿಯಾಗಿದ್ದಾಗ ಪೊಲೀಸ್ ಬಂದೋಬಸ್ತ್ಗೆ ತೆರಳಿದ್ದರು. ಆ ವೇಳೆ ಬೇಗೂರು ಠಾಣೆಯ ಪೇದೆಗೆ ಕೊರೊನಾ […]
ಬೆಂಗಳೂರು: ಅಕ್ಷರಶಃ ಕೊರೊನಾ ವಾರಿಯರ್ಸ್ ಆಗಿ ಹಗಲಿರುಳು ದುಡಿಯುತ್ತಿದ್ದ ರಾಜ್ಯ ಪೊಲೀಸ್ ಇಲಾಖೆಯ ಪೇದೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ರಾಜಧಾನಿಯ ಹಾಟ್ ಸ್ಪಾಟ್ ಆಗಿ ಕಾಡುತ್ತಿರುವ ಹೊಂಗಸಂದ್ರದಿಂದಲೇ ಈ ಕೊರೊನಾ ಸುದ್ದಿ ಕೇಳಿಬಂದಿದೆ. 650ನೇ ಸೋಂಕಿತ ಬೆಂಗಳೂರಿನ 40 ವರ್ಷದ ಪೊಲೀಸ್ ಪೇದೆ.
ಮೂಲತಃ ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯ ಪೇದೆಯಾಗಿರುವ ಈ ಸೋಂಕಿತ ಕೊರೊನಾ ವಾರಿಯರ್, ಹೊಂಗಸಂದ್ರದಲ್ಲಿ ಕೊರೊನಾ ಸೋಂಕಿತರ ಉಪಟಳ ಜಾಸ್ತಿಯಾಗಿದ್ದಾಗ ಪೊಲೀಸ್ ಬಂದೋಬಸ್ತ್ಗೆ ತೆರಳಿದ್ದರು. ಆ ವೇಳೆ ಬೇಗೂರು ಠಾಣೆಯ ಪೇದೆಗೆ ಕೊರೊನಾ ಸೋಂಕು ಅಂಟಿಕೊಂಡಿದೆ ಎಂಬ ಆಘಾತಕಾರಿ ಸಂಗತಿ ತಿಳಿದುಬಂದಿದೆ.
ಠಾಣೆಯ ಇತರೆ ಪೇದೆಗಳಿಗೂ ಆತಂಕ! ಬೇಗೂರು ಪೊಲೀಸ್ ಠಾಣೆಯ ಪೇದೆಗೆ ಕೊರೊನಾ ಅಟ್ಯಾಕ್ ಆಗಿರುವ ಕಾರಣ ಠಾಣೆಯ ಉಳಿದ ಪೊಲೀಸರಿಗೂ ಆತಂಕ ಶುರುವಾಗಿದೆ. ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಕಾರಣದಿಂದ ಉಳಿದ ಪೇದೆಗಳಿಗೂ ಕೊರೊನಾ ಭಯ ಕಾಡುತ್ತಿದೆ.
ಪೊಲೀಸ್ ಪೇದೆ ಠಾಣೆಗೆ ಬಂದಿರಲಿಲ್ಲ: 650ನೇ ಕೊರೊನಾ ಸೋಂಕಿತ ಬೆಂಗಳೂರಿನ ಪೊಲೀಸ್ ಪೇದೆ ಠಾಣೆಗೆ ಬಂದಿರಲಿಲ್ಲ. ಹೀಗಾಗಿ ಇಡೀ ಪೊಲೀಸ್ ಠಾಣೆ ಕ್ವಾರಂಟೈನ್ ಮಾಡುವಂತಿಲ್ಲ. ಪೇದೆಯ ಜತೆ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುವುದು ಎಂದು ಟಿವಿ9ಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.
Published On - 5:32 pm, Mon, 4 May 20