ಅಥಣಿ: ಶೆಡ್​ನಲ್ಲಿ ಬಾಲಕನ ಮೇಲೆ ಹಲ್ಲೆ ಮಾಡಿ ಚರಂಡಿಗೆ ಎಸೆದ ಆರೋಪಿಗಳು ಅರೆಸ್ಟ್​

ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಳಿಯ ಪಟ್ಟಣಗೇರಿ ಶೆಡ್​ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಆರೋಪಿ ದರ್ನಶನ್ ಮತ್ತು ಸಹಚರರು ಸೇರಿಕೊಂಡು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ. ಇದೇ ರೀತಿ ಬೆಳಗಾವಿಯ ಅಥಣಿ ಪಟ್ಟಣದಲ್ಲೊಂದು ಘಟನೆ ನಡೆದಿದೆ. ಆದರೆ ಇಲ್ಲಿ ಕೊಲೆಯಾಗಿದ್ದ ಬಾಲಕ.

ಅಥಣಿ: ಶೆಡ್​ನಲ್ಲಿ ಬಾಲಕನ ಮೇಲೆ ಹಲ್ಲೆ ಮಾಡಿ ಚರಂಡಿಗೆ ಎಸೆದ ಆರೋಪಿಗಳು ಅರೆಸ್ಟ್​
ಕೊಲೆಯಾದ ವಿಕಾಸ್​
Edited By:

Updated on: May 14, 2025 | 6:51 PM

ಬೆಳಗಾವಿ, ಮೇ 14: ಅಥಣಿ (Athani) ಪಟ್ಟಣದ ಹೊರವಲಯದ ಖಾಲಿ ನಿವೇಶನದಲ್ಲಿ ಮೇ 01 ರಂದು ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಬಾಲಕನ ಶವ ಸಿಕ್ಕಿತ್ತು. ಅನಾಥ ಶವ ಎಂದು ಪೊಲೀಸರು ಶವ ಸಂಸ್ಕಾರ ಮಾಡಿದ್ದರು. ಶವ ಸಂಸ್ಕಾರ ನಡೆದ ಎರಡು ದಿನಗಳ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಬಾಲಕನ ಗುರುತು ಪತ್ತೆಯಾಗಿದೆ. ಅಥಣಿ ತಾಲೂಕಿನ ಅರಳಿಹಟ್ಟಿ ಗ್ರಾಮದ ವಿಕಾಸ ಶಿವದಾಸ ಕೋಷ್ಠಿ (16) ಮೃತ ಬಾಲಕ.

ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಬಾಲಕನದ್ದು ಸಹಜ ಸಾವಲ್ಲ, ಕೊಲೆ ಎಂದು ತಿಳಿದಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಅಬ್ದುಲ್ ಬಾರಿ ಮುಲ್ಲಾ (36), ಜೂಬೇರ ಅಹಮದ್ ಮೌಲ್ವಿ(34), ಬಿಲಾಲ್ ಅಹಮದ್ ಮೌಲ್ವಿ (25), ಹಜರತ್ ಬಿಲಾಲ್ ನಾಲಬಂದ್(27), ಮಹೇಶ ಕಾಳೆ (36) ​ಬಂಧಿತರು.

ಅಥಣಿ ಪಟ್ಟಣದ ಹೊರವಲಯದಲ್ಲಿರುವ ಕಾಳೆ ಫರ್ನಿಚರ್ಸ್​​​ನಲ್ಲಿ ವಿಕಾಸ ಕಳ್ಳತನ ಮಾಡಲು ಬಂದಿದ್ದಾನೆಂದು ತಿಳಿದು, ಆತನನ್ನು ರಾತ್ರಿ ಶೇಡ್​ನಲ್ಲಿ ಕಟ್ಟಿ ಹಾಕಿ ಹಲ್ಲೆ ಮಾಡಿ ಹತ್ಯೆಗೈಯಲಾಗಿದೆ. ಕೃತ್ಯ ಮುಚ್ಚಿಹಾಕಲು ವಿಕಾಸ ಶವದ ಮೇಲೆ ಆ್ಯಸಿಡ್​ ಹಾಕಿ ಚರಂಡಿಗೆ ಬಿಸಾಕಿ ಹಾಕಿದ್ದರು. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ
ಸೋಫಿಯಾ ಪತಿ ಮನೆ ಮೇಲೆ RSS ದಾಳಿ: ಸುಳ್ಳು ಸುದ್ದಿ ಹರಿಬಿಟ್ಟ ಕಿಡಿಗೇಡಿ
ಬೆಳಗಾವಿ: ಅಂಚೆ ಕಚೇರಿಯಲ್ಲಿ ಹಣಕೊಡುತ್ತಿದ್ದಾರೆ ಅಂತ ಹೇಳಿ ಅಜ್ಜಿಗೆ ವಂಚನೆ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಬೆಳಗಾವಿ ಒಳಚರಂಡಿ ಕಾಮಗಾರಿ: ಮಣ್ಣಿನಡಿ ಸಿಲುಕಿ ಕಾರ್ಮಿಕರಿಬ್ಬರ ದುರ್ಮರಣ

ಅಳಿಯನನ್ನೇ ಕೊಚ್ಚಿ ಕೊಲೆ ಮಾಡಿದ ಮಾವ

ಯಾದಗಿರಿ: ಸಾಲದ ವಿಚಾರಕ್ಕೆ ಮಾವ ಅಳಿಯನನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಣಸಗಿ ತಾಲೂಕಿನ ಶಾಖಾಪುರ(ಎಸ್.ಕೆ) ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಣ ಚಿಗರಿಹಾಳ (28) ಮೃತ ದುರ್ದೈವಿ. ಸೋದರ ಮಾವ ಮಾನಪ್ಪ ಕೊಲೆ ಮಾಡಿದ ಆರೋಪಿ.

ಕೊಟ್ಟ ಸಾಲ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಲಕ್ಷ್ಮಣ ಚಿಗರಿಹಾಳ ಮಾವ ಮಾನಪ್ಪಗೆ ಕೇಳಿದ್ದರು. ಇಷ್ಟಕ್ಕೆ ಬಹಿರ್ದೆಸೆಗೆ ತೆರಳುತ್ತಿದ್ದ ಅಳಿಯ ಲಕ್ಷ್ಮಣ ಚಿಗರಿಹಾಳನನ್ನು ಕೊಡಲಿಯಿಂದ ಕೊಚ್ಚಿ ಮಾವ ಮಾನಪ್ಪ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಎಸ್​​ಪಿ ಪೃಥ್ವಿಕ್ ಶಂಕರ್, ಡಿವೈಎಸ್​ಪಿ ಜಾವೀದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಾನಪ್ಪನನ್ನು ಪೋಲಿಸರು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ