ಬೆಳಗಾವಿ: ಅಂಚೆ ಕಚೇರಿಯಲ್ಲಿ ಹಣಕೊಡುತ್ತಿದ್ದಾರೆ ಅಂತ ಹೇಳಿ ಅಜ್ಜಿಗೆ ವಂಚನೆ
ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ 75 ವರ್ಷದ ಉಮಕ್ಕ ರಾಮು ಕೇದಾರಿ ಅವರಿಗೆ ವ್ಯಕ್ತಿಯೋರ್ವ ವಂಚಿಸಿದ್ದಾನೆ. ರಸ್ತೆ ಬದಿ ಸೌತೆಕಾಯಿ ಮಾರಾಟ ಮಾಡುವ ಉಮಕ್ಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೃತ್ಯವನ್ನು ಎಸಗಿದ್ದಾನೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಳಗಾವಿ, ಮೇ 01: ಅಂಚೆ ಕಚೇರಿಯಲ್ಲಿ (Post Office) ಹಣ ಕೊಡುತ್ತಿದ್ದಾರೆ ಅಂತ ಹೇಳಿ, ಅಜ್ಜಿಯ ಬಳಿ ಇದ್ದ ಒಡವೆಗಳನ್ನು ದೋಚಿ ವ್ಯಕ್ತಿಯೋರ್ವ ಪರಾರಿಯಾಗಿದ್ದಾನೆ. ಬೆಳಗಾವಿ (Belagavi) ತಾಲೂಕಿನ ಮುತಗಾ ಗ್ರಾಮದಲ್ಲಿ ಘಟನೆ ನಡೆದಿದೆ. ಉಮಕ್ಕ ರಾಮು ಕೇದಾರಿ (75) ಮೋಸ ಹೋಗಿರುವ ಅಜ್ಜಿ.
ಉಮಕ್ಕ ಅವರು ರಸ್ತೆ ಬದಿ ಸೌತೆಕಾಯಿ ಮಾರಿ ಜೀವನ ಸಾಗಿಸುತ್ತಿದ್ದಾರೆ. ಅಜ್ಜಿ ಉಮಕ್ಕ ಅವರ ಬಳಿ ವ್ಯಕ್ತಿಯೋರ್ವ ಬಂದು ಪರಿಚಯಸ್ಥನಂತೆ ಮಾತನಾಡಿಸಿದ್ದಾನೆ. ಬಳಿಕ, “ಅಂಚೆ ಕಚೇರಿಯಲ್ಲಿ ವಯಸ್ಸಾದವರಿಗೆ ಆರು ಸಾವಿರ ರೂ. ಹಣ ಕೊಡುತ್ತಾರೆ, ನೀನು ಬಾ” ಎಂದು ಉಮಕ್ಕ ಅವರನ್ನು ಕರೆದುಕೊಂಡು ಹೋಗಿದ್ದಾನೆ. ನಂತರ ಯಾವುದೋ ಕಟ್ಟಡದ ಬಳಿ ಕರೆದುಕೊಂಡು ಹೋಗಿದ್ದಾನೆ.
ಇದನ್ನೂ ಓದಿ: ಆಗಾಗ ಅಜ್ಜಿ ಮನೆಗೆ ಬರುತ್ತಿದ್ದವ ಯುವತಿಯನ್ನೇ ಪಟಾಯಿಸಿ ಮದ್ವೆಯಾದ
ನಂತರ, ವಂಚಕ “ಬಂಗಾರ ಹಾಕಿಕೊಂಡು ಒಳಗೆ ಹೋದರೆ ಹಣ ಕೊಡಲ್ಲ ಎಂದು ವೃದ್ಧೆ ಉಮಕ್ಕ ಅವರಿಗೆ ಹೇಳಿದ್ದಾನೆ. ವಂಚಕನ ಮಾತು ನಂಬಿದ ಉಮಕ್ಕ, ಬಂಗಾರದ ಓಲೆ ಮತ್ತು ಬಳೆಗಳನ್ನು ಬಿಚ್ಚಿ ಆತನ ಕೈಗೆ ಕೊಟ್ಟು ಒಳಗೆ ಹೋಗಿದ್ದಾನೆ. ಒಳ ಹೋಗಿ ಹೊರ ಬರುಷ್ಟರಲ್ಲಿ ವಂಚಕ ಪರಾರಿಯಾಗಿದ್ದಾನೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:57 pm, Thu, 1 May 25







