ವಿದ್ಯಾರ್ಥಿನಿ ಜತೆ ಅಸಭ್ಯ ವರ್ತನೆ: ಪ್ರಿನ್ಸಿಪಾಲ್ಗೆ ಬಿತ್ತು ಧರ್ಮದೇಟು; 2 ದಿನ ಬಳಿಕ ಕೇಸ್ ಬುಕ್
ಬೆಳಗಾವಿಯ ಬೆಳಗುಂದಿ ಗ್ರಾಮದ ಗರ್ಲ್ಸ್ ಹೈಸ್ಕೂಲ್‌ನ ಪ್ರಿನ್ಸಿಪಾಲ್ ವಿದ್ಯಾರ್ಥಿಯರ ಜೊತೆಗೆ ಅಸಭ್ಯ ವರ್ತನೆ, ಅಶ್ಲೀಲ ಮೆಸೇಜ್ ಮಾಡಿದ್ದ ವಿಚಾರವಾಗಿ ಘಟನೆ ನಡೆದು ಎರಡು ದಿನಗಳ ಬಳಿಕ ಪೊಲೀಸರು ಪೋಕ್ಸೋ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪ್ರಿನ್ಸಿಪಾಲ್ರಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದರು.

ಬೆಳಗಾವಿ, ಡಿಸೆಂಬರ್ 14: ವಿದ್ಯಾರ್ಥಿನಿ (student) ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದ ವಿಚಾರವಾಗಿ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಗರ್ಲ್ಸ್ ಹೈಸ್ಕೂಲ್‌ನ ಪ್ರಿನ್ಸಿಪಾಲ್ರಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದರು. ಘಟನೆ ಕುರಿತಾಗಿ ಯಾವುದೇ ಕೇಸ್ ದಾಖಲಾಗಿರಲಿಲ್ಲ. ಆದರೆ ಇದೀಗ ಘಟನೆ ನಡೆದು ಎರಡು ದಿನದ ಬಳಿಕ ಪೋಕ್ಸೋ ಕಾಯ್ದೆಯಡಿ (POCSO Act) ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ನಡೆದದ್ದೇನು?
ಬೆಳಗಾವಿಯ ಬೆಳಗುಂದಿ ಗ್ರಾಮದ ಗರ್ಲ್ಸ್ ಹೈಸ್ಕೂಲ್‌ನ ಕಲ್ಲಪ್ಪ ಬೆಳಗಾಂವಕರ್ ಎಂಬ ಪ್ರಿನ್ಸಿಪಾಲ್ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಅಶ್ಲೀಲ ಮೆಸೇಜ್ ಮಾಡಿದ್ದ ಆರೋಪವೂ ಕೇಳಿಬಂದಿತ್ತು. ಇದಕ್ಕೆ ಸಾಕ್ಷಿಗಳು ಸಿಕ್ಕಿದ್ದವು. ಹೀಗಾಗಿ ಎರಡು ದಿನದ ಹಿಂದೆ ಗ್ರಾಮಸ್ಥರು ಶಾಲೆಗೆ ನುಗ್ಗಿ ಪ್ರಿನ್ಸಿಪಾಲ್ರಿಗೆ ಹಿಗ್ಗಾಮುಗ್ಗಾ ಥಳಿಸಿ ಬಳಿಕ ಪೊಲೀಸರಿಗೆ ಹಸ್ತಾಂತರಿಸಿದ್ದರು.
ಇದನ್ನೂ ಓದಿ: ವಿದ್ಯಾರ್ಥಿನಿ ಜತೆ ಅಸಭ್ಯ ವರ್ತನೆ: ಇನ್ನೂ ದೂರು ದಾಖಲಿಸಿಕೊಳ್ಳದ ಪೊಲೀಸರು, ಪ್ರಾಂಶುಪಾಲ ಸಚಿವರ ಆಪ್ತ ಎಂದ ಮಾಜಿ ಶಾಸಕ
ಆದರೆ ಘಟನೆ ಬಗ್ಗೆ ಪೋಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ದೂರು ನೀಡಿದ್ದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದರು. ಸಾಕ್ಷಿಗಳಿದರೂ ಪೊಲೀಸರು ಕೇಸ್ ದಾಖಲಿಸಿಕೊಂಡಿರಲಿಲ್ಲ. ರಾಜಕೀಯ ಒತ್ತಡದಿಂದ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಆರೋಪಿಸಿದ್ದರು.
ಇದನ್ನೂ ಓದಿ: ‘ನನಗೆ ನ್ಯಾಯ ಬೇಕು’: ಮತ್ತೊಂದು ಮದುವೆಗೆ ಸಿದ್ಧನಾಗಿದ್ದ ಶಿಕ್ಷಕನಿಗೆ ಶಾಕ್ ಕೊಟ್ಟ ಯುವತಿ
ಸದ್ಯ ಘಟನೆ ನಡೆದು ಎರಡು ದಿನಗಳ ಬಳಿಕ ಪೊಲೀಸರು ಪೋಕ್ಸೋ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪೊಲೀಸರು, ವಿದ್ಯಾರ್ಥಿನಿ ಕುಟುಂಬಸ್ಥರು ದೂರು ಕೊಡುತ್ತಾರೆಂದು ಕಾಯುತ್ತಿದ್ದೆವು. ಆದರೆ ಯಾರು ದೂರು ನೀಡದ ಹಿನ್ನೆಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಕರಣದ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



