AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಟು ದೆಹಲಿಗೆ ಅಕ್ಟೋಬರ್ 1 ರಿಂದ ಪ್ರತಿದಿನ ವಿಮಾನ ಸಂಚಾರ: ಇಲ್ಲಿದೆ ಮಾಹಿತಿ

Belagavi News: ಬೆಳಗಾವಿ ಜಿಲ್ಲೆಯ ಜನರ ಬಹುಬೇಡಿಕೆಯೂ ಇದೀಗ ಪೂರ್ಣಗೊಳ್ಳುತ್ತಿದೆ. ಬೆಳಗಾವಿ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು ಪರಿಗಣಿಸಿ ಇಂಡಿಗೊ ಏರ್ಲೈನ್ಸ್ ಅಕ್ಟೋಬರ್ 1 ರಿಂದ ಬೆಳಗಾವಿಯಿಂದ ದೆಹಲಿ ಮತ್ತು ಸ್ಟಾರ್ ಏರ್ಲೈನ್ಸ್ ಅಕ್ಟೋಬರ್ 29 ರಿಂದ ಬೆಳಗಾವಿಯಿಂದ ಪುಣೆಗೆ ನೇರ ವಿಮಾನ ಸೇವೆಯನ್ನು ಪ್ರಾರಂಭಿಸಲಿವೆ.

ಬೆಳಗಾವಿ ಟು ದೆಹಲಿಗೆ ಅಕ್ಟೋಬರ್ 1 ರಿಂದ ಪ್ರತಿದಿನ ವಿಮಾನ ಸಂಚಾರ: ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Aug 14, 2023 | 4:50 PM

Share

ಬೆಳಗಾವಿ, ಆಗಸ್ಟ್​ 14: ಬೆಳಗಾವಿ ಜಿಲ್ಲೆಯ ಜನರ ಬಹುಬೇಡಿಕೆಯೂ ಇದೀಗ ಪೂರ್ಣಗೊಳ್ಳುತ್ತಿದೆ. ಬೆಳಗಾವಿ ವಿಮಾನ (flights) ನಿಲ್ದಾಣದ ಸಾಮರ್ಥ್ಯವನ್ನು ಪರಿಗಣಿಸಿ ಇಂಡಿಗೊ ಏರ್ಲೈನ್ಸ್ ಅಕ್ಟೋಬರ್ 1 ರಿಂದ ಬೆಳಗಾವಿಯಿಂದ ದೆಹಲಿ ಮತ್ತು ಬೆಳಗಾವಿಯಿಂದ ಪುಣೆಗೆ ನೇರ ವಿಮಾನ ಸೇವೆಯನ್ನು ಪ್ರಾರಂಭಿಸಲಿದೆ. ಇಂಡಿಗೊ ಏರ್ಲೈನ್ಸ್ ಬೆಳಗಾವಿ ಮತ್ತು ದೆಹಲಿ ಮಧ್ಯೆ ದೈನಂದಿನ ವಿಮಾನ ಸೇವೆಗಳನ್ನು ಒಪ್ಪಿಗೆ ಸೂಚಿಸಿದೆ. ಅದೇ ರೀತಿಯಾಗಿ ಸ್ಟಾರ್ ಏರ್ಲೈನ್ಸ್ ಅಕ್ಟೋಬರ್ 29 ಪುಣೆಯಿಂದ ಬೆಳಗಾವಿಗೆ ತಮ್ಮ ದೈನಂದಿನ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದೆ.

ಬೆಳಗಾವಿ ಮತ್ತು ದೆಹಲಿ ಮಧ್ಯೆ ಈ ಹಿಂದೆ ಸ್ಪೈಸ್‌ಜೆಟ್​ ವಿಮಾನ ಸೇವೆ ಒದಗಿಸುತ್ತಿತ್ತು. ಉತ್ತಮ ಸಂಖ್ಯೆಯ ಪ್ರಯಾಣಿಕರನ್ನು ಸಹ ಹೊಂದಿತ್ತು. ಆದರೆ ವಿಮಾನಗಳ ಕೊರತೆಯಿಂದಾಗಿ ಡಿಸೆಂಬರ್ 10, 2022 ರಂದು ಮಾರ್ಗವನ್ನು ರದ್ದುಗೊಳಿಸಿತ್ತು. ತೀರಾ ಅಗತ್ಯವಾಗಿದ್ದ ಸೇವೆಯನ್ನು ರದ್ದುಗೊಳಿಸಿದರಿಂದ ಸ್ಪೈಸ್‌ಜೆಟ್ ಸಂಸ್ಥೆ ಮೇಲೆ ಸಾವಿರಾರು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದರು. ಆದರೆ ಸದ್ಯ ಎಂಟು ತಿಂಗಳದ ನಂತರ ಅದೇ ಮಾರ್ಗವಾಗಿ ಪುನರಾರಂಭಿಸಲು ಇಂಡಿಗೋ ಏರ್ ಲೈನ್ ಮುಂದಾಗಿರುವುದು ಪ್ರಯಾಣಿಕರಿಗೆ ಖುಷಿ ತಂದಿದೆ.

ಇದನ್ನೂ ಓದಿ: ಶಕ್ತಿ ಯೋಜನೆಯಡಿ ಅಂತಾರಾಜ್ಯ ಬಸ್​​​ನಲ್ಲಿ ಉಚಿತ ಪ್ರಯಾಣ, ಮುಂದುವರಿದ ಗೊಂದಲ

ಅಕ್ಟೋಬರ್ 29 ರಿಂದ ಒಂದು ವಾರದಲ್ಲಿ ಮೂರು ದಿನ ಅಂದರೆ, ಮಂಗಳವಾರ, ಗುರುವಾರ ಮತ್ತು ಶನಿವಾರ ಪುಣೆ ಮತ್ತು ಬೆಳಗಾವಿ ನಡುವೆ ಇಂಡಿಗೋ ಏರ್ಲೈನ್ಸ್ ವಿಮಾನ ಸೇವೆಯನ್ನು ಪ್ರಾರಂಭಿಸಲಿದೆ. ಅಲ್ಲದೇ ಸ್ಟಾರ್ ಏರ್ ಅಕ್ಟೋಬರ್ 29 ರಿಂದ ಬೆಳಗಾವಿ ಮತ್ತು ಪುಣೆ ನಡುವೆ ಪ್ರತಿದಿನ ವಿಮಾನ ಸೇವೆಯನ್ನು ನಿಗದಿಪಡಿಸಿದೆ.

ಸ್ಥಳೀಯ ರಾಜಕೀಯ ನಾಯಕರುಗಳು ಮತ್ತು ಕೈಗಾರಿಕಾ ಸಂಸ್ಥೆಗಳು ಈ ವಿಮಾನ ಸೇವೆಗಳ ಆರಂಭ ವಿಚಾರವಾಗಿ ಸಚಿವಾಲಯದೊಂದಿಗೆ ನಿರಂತರವಾಗಿ ಪತ್ರವ್ಯವಹಾರ ಮಾಡಲಾಗಿದೆ. ಅದರಲ್ಲಿಯೂ ಬೆಳಗಾವಿ ಮತ್ತು ದೆಹಲಿ ವಿಮಾನ ಸೇವೆ ಪ್ರಮುಖವಾಗಿತ್ತು ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಸಮಿತಿ ವರದಿ ಬಂದ ನಂತರವೇ ಬಾಕಿ ಬಿಲ್ ಪಾವತಿ: ಸಿಎಂ ಸಿದ್ದರಾಮಯ್ಯ

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಈ ಕುರಿತಾಗಿ ಟ್ವೀಟ್​ ಮಾಡಿದ್ದು, ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಲಿದೆ. ಸತತ ಪ್ರಯತ್ನಗಳ ಫಲವಾಗಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ದೆಹಲಿ ಮತ್ತು ಬೆಳಗಾವಿ ನಡುವೆ ಅಕ್ಟೋಂಬರ್‌ 1 ರಿಂದ ಪ್ರತಿದಿನ ವಿಮಾನಯಾನ ಸಂಚಾರದ ಸೇವೆಯನ್ನು ಪ್ರಾರಂಭಿಸಲು ಸಮ್ಮತಿಸಿದೆ.

ಬೆಳಗಾವಿಯಿಂದ ದೆಹಲಿ ಹಾಗೂ ಪುಣೆ ನಗರಗಳಿಗೆ ವಿಮಾನಯಾನ ಸೇವೆ ಪ್ರಾರಂಭಿಸಿರುವ ಇಂಡಿಗೋ ಮತ್ತು ಸ್ಟಾರ್ ಏರ್‌ಲೈನ್ಸ್ ಸಂಸ್ಥೆಗಳಿಗೆ ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್, ಬೆಳಗಾವಿ ಫೌಂಡ್ರಿ ಕ್ಲಸ್ಟರ್ ಮತ್ತು ಬೆಳಗಾವಿ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘ ಸೇರಿದಂತೆ ನಗರದ ಕೈಗಾರಿಕಾ ಸಂಸ್ಥೆಗಳು ಇಂಡಿಗೋ ಏರ್‌ಲೈನ್ಸ್ ಮತ್ತು ಸ್ಟಾರ್ ಏರ್​​ನ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:48 pm, Mon, 14 August 23

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು