ಕಾಂಗ್ರೆಸ್ನವರಿಗೆ ಶ್ರೀರಾಮನ ಶಾಪ ತಟ್ಟುತ್ತೆ: ಪ್ರಮೋದ್ ಮುತಾಲಿಕ್ ವಾಗ್ದಾಳಿ
ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಈಗಾಗಲೇ ರಾಮನ ಶಾಪದಿಂದ ದೇಶದಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಇಂದು ರಜೆ ಕೊಟ್ಟಿದ್ದರೆ ಅವರಪ್ಪನ ಮನೆ ಗಂಟು ಏನು ಹೋಗುತಿತ್ತು ಎಂದು ಕಿಡಿಕಾರಿದ್ದಾರೆ.

ಬೆಳಗಾವಿ, ಜನವರಿ 22: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಇಂದು ರಜೆ ಕೊಟ್ಟಿದ್ದರೆ ಅವರಪ್ಪನ ಮನೆ ಗಂಟು ಏನು ಹೋಗುತಿತ್ತು. ಕೇಂದ್ರ ಸರ್ಕಾರ ಅರ್ಧ ದಿನ ರಜೆ ನೀಡಿ ಹಬ್ಬಕ್ಕೆ ಅವಕಾಶ ಕೊಟ್ಟಿದೆ. ಕಾಂಗ್ರೆಸ್ನವರಿಗೆ ಶ್ರೀರಾಮನ ಶಾಪ ತಟ್ಟುತ್ತೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಹುಕ್ಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಅಧಿಕಾರ ಹಾಗೂ ಮುಸ್ಲಿಮರ ತುಷ್ಟೀಕರಣ ಬೇಕಿದೆ. ಮುಸ್ಲಿಮರಿಂದ ಗೆದ್ದಿದ್ದೇವೆ ಅನ್ನುವ ಸೊಕ್ಕು ರಜೆ ಕೊಡದಿರಲು ಕಾರಣ. ಈಗಾಗಲೇ ರಾಮನ ಶಾಪದಿಂದ ದೇಶದಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ ಎಂದು ಕಿಡಿಕಾರಿದ್ದಾರೆ.
ದೇಶ ಒಂದಾಗಿದೆ ಎನ್ನುವ ಸಂದೇಶ ರವಾನೆ
ಅಯೋಧ್ಯೆಯಲ್ಲಿನ ಸಂಭ್ರಮ ಇಡೀ ದೇಶದಲ್ಲಿ ನಿರ್ಮಾಣವಾಗಿದೆ. ದೇಶ ಒಂದಾಗಿದೆ ಎನ್ನುವ ಸಂದೇಶ ರವಾನೆ ಆಗಿದೆ. ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ಶ್ರೇಷ್ಠ ದಿನ ಇದು. 500 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ರಾಮನ ಮೂರ್ತಿ ಪುನಃ ಪ್ರತಿಷ್ಠಾಪನೆ ಆಗಿದೆ. ಕಟ್ಟಿದೆವು ಕಟ್ಟಿದೇವು ರಾಮ ಮಂದಿರ ಕಟ್ಟಿದೇವು ಎನ್ನುವ ಘೋಷಣೆ ಪ್ರಾರಂಭವಾಗಿದೆ. ಇಡಿ ದೇಶದಲ್ಲಿ ಆನಂದದ ಸುನಾಮಿ ಹರಿಯುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಸಿದ್ದರಾಮಯ್ಯಗೆ ಹೊಸ ಟಾಸ್ಕ್ ಕೊಟ್ಟ ಸಿಟಿ ರವಿ!
ಜಾತಿ, ಪಕ್ಷ, ಬೇಧ ಬಿಟ್ಟು ಜೈ ಶ್ರೀ ರಾಮ ಘೋಷಣೆ ಮೊಳಗುತ್ತಿದೆ. ರಾಮ ನಮ್ಮನ್ನ ಎಲ್ಲರನ್ನ ಒಟ್ಟೂಗೂಡಿಸಿ ಬೇಧ ದೂರ ಮಾಡಿದ್ದಾನೆ ಎಂದು ಹೇಳಿದ್ದಾರೆ.
ನನ್ನ ರಾಮ ಮನೆಗೆ ಬಂದ ಅನ್ನೋ ಸಂಭ್ರಮ ಇದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದು, ನನ್ನ ರಾಮ ಮನೆಗೆ ಬಂದ ಅನ್ನೋ ಸಂಭ್ರಮ ಇದೆ. ಪ್ರಧಾನಿ ಮೋದಿ ರಾಮನ ಆದರ್ಶ ಪಾಲಿಸಿ ದೇಶ ಮುನ್ನಡೆಸುತ್ತಿದ್ದಾರೆ. ರಾಮ ಇಂದು ನನ್ನ ಮನೆಗೆ ಬಂದಿದ್ದಾನೆ ಅನ್ನೋ ಭಾವನೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ವಿರಾಜಮಾನನಾದ ಬಾಲರಾಮ; ಹುಬ್ಬಳ್ಳಿಯ ಮಸೀದಿಗಳಲ್ಲಿ ಶ್ರೀರಾಮನ ಫೋಟೋ ಇಟ್ಟು ಪೂಜೆ
ಮುಂದಿನ 5 ವರ್ಷದಲ್ಲಿ ರಾಮರಾಜ್ಯದತ್ತ ದಾಪುಗಾಲು ಹಾಕುತ್ತೇವೆ. ಕಾಂಗ್ರೆಸ್ ಯಾವಾಗಲು ಹಿಂದೂ ವಿಚಾರ ಬಂದಾಗ ವಿರೋಧಿಸುತ್ತಾರೆ. ರಜೆ ಕೊಡದೆ ಟೀಕೆ ಮಾಡಿದ್ದಾರೆ. ಮೊದಲು ಹೋಗಲ್ಲ ಅಂದ್ದರು. ಇವಾಗ ಹೋಗುತ್ತೇವೆ ಅಂತಾರೆ. ಎಲ್ಲ ವೋಟ್ಗಾಗಿ. ಮುನಿಯಪ್ಪನವರು ರಾಮಜಪ ಮಾಡಿರುವುದು ಖುಷಿ ವಿಚಾರ. ಅವರು ಮುಖ್ಯಮಂತ್ರಿಗಳಿಗೆ ಹೇಳಲಿ ಎಂದು ಹೇಳಿದ್ದಾರೆ.
500 ವರ್ಷಗಳ ಕಾಲ ರಾಮ ಕಾಯ್ದಿದ್ದು, ಶ್ರೇಷ್ಠರೊಬ್ಬರು ಬಂದು ಇದನ್ನು ಮಾಡಲಿ ಅಂತ. ಇವತ್ತು ಶ್ರೇಷ್ಠ ಸಂತ ಮೋದಿ ಬಂದು ಈ ಕೆಲಸ ಮಾಡಿದ್ದಾರೆ. ಒಬ್ಬ ಕಳಂಕ ರಹಿತ, ಸಮಾಜಕ್ಕೆ ಬದುಕನ್ನ ಮುಡಿಪಿಟ್ಟು ಕೆಲಸ ಮಾಡಿದ್ದಾರೆ. ರಾಮನ ಆದರ್ಶ ಪಾಲಿಸುತ್ತ ದೇಶ ಮುನ್ನೆಡೆಸುತ್ತಿದ್ದಾರೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



