ಪ್ರೀತಿ ಮಾಡುವಂತೆ ಬಾಲಕಿ ಹಿಂದೆ ಬಿದ್ದಿದ್ದ; ಮನೆಗೆ ಹೋಗುತ್ತಿದ್ದಾಗ ಹಿಂಬಾಲಿಸಿ ಕೊಚ್ಚಿ ಕೊಲೆ ಮಾಡಿದ

ಪ್ರೀತಿ ಮಾಡುವಂತೆ ಬಾಲಕಿ ಹಿಂದೆ ಬಿದ್ದಿದ್ದ ಅಮೀರ್ ಜಮಾದಾರ್​ನನ್ನು ಬಾಲಕಿ ತಿರಸ್ಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆರೋಪಿ ಅಮೀರ್ ಜಮಾದಾರ್ ಹಿಂದಿನಿಂದ ಬಂದು ಹತ್ಯೆ ಮಾಡಿದ್ದಾನೆ.

ಪ್ರೀತಿ ಮಾಡುವಂತೆ ಬಾಲಕಿ ಹಿಂದೆ ಬಿದ್ದಿದ್ದ; ಮನೆಗೆ ಹೋಗುತ್ತಿದ್ದಾಗ ಹಿಂಬಾಲಿಸಿ ಕೊಚ್ಚಿ ಕೊಲೆ ಮಾಡಿದ
ಅಮೀರ್ ಜಮಾದಾರ್ (19)

ಬೆಳಗಾವಿ: ಪ್ರೀತಿಸಲು ನಿರಾಕರಿಸಿದ್ದಕ್ಕೆ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ನಡೆದಿದೆ. ಊರಿಗೆ ಹೋಗಿ ಮನೆಗೆ ವಾಪಾಸ್ ಆಗಿತ್ತಿರುವಾಗ ಮಾರ್ಗಮಧ್ಯೆ ಮಾರಕಾಸ್ತ್ರದಿಂದ 16 ವರ್ಷದ ಬಾಲಕಿಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಅಮೀರ್ ಜಮಾದಾರ್ (19) ಎಂಬಾತ ಬಾಲಕಿಯನ್ನು ಕೊಲೆ ಮಾಡಿದ್ದಾನೆ.

ಹಾರೂಗೇರಿ ಪಟ್ಟಣದಲ್ಲಿ ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರೀತಿ ಮಾಡುವಂತೆ ಬಾಲಕಿ ಹಿಂದೆ ಬಿದ್ದಿದ್ದ ಅಮೀರ್ ಜಮಾದಾರ್​ನನ್ನು ಬಾಲಕಿ ತಿರಸ್ಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆರೋಪಿ ಅಮೀರ್ ಜಮಾದಾರ್ ಹಿಂದಿನಿಂದ ಬಂದು ಹತ್ಯೆ ಮಾಡಿದ್ದಾನೆ. ಸದ್ಯ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಮೀರ್ ಜಮಾದಾರ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ಹಾಡಹಗಲೇ ವೃದ್ಧನ ಕತ್ತು ಸೀಳಿ ಬರ್ಬರ ಹತ್ಯೆ
ನಗರದ ವಡಗಾವಿಯ ಯಳ್ಳೂರು ಕ್ರಾಸ್ ಬಳಿ ಭೀಕರ ಹತ್ಯೆ ನಡೆದಿದೆ. ಮೂಲತಃ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದ ನಿವಾಸಿ ಮಹಾದೇವ ಮಾರುತಿ ಜಾಧವ್ ಎಂಬ 55 ವರ್ಷ ವಯಸ್ಸಿನ ವೃದ್ಧನ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಈತ ಬೆಳಗಾವಿ ನಗರದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದ. ಹೆಂಡತಿ ಮಕ್ಕಳನ್ನು ಊರಲ್ಲೇ ಬಿಟ್ಟು ಬೆಳಗಾವಿಯ ಭರತ್ ನಗರದಲ್ಲಿ ತಂಗಿಯ ಮನೆಯ ಪಕ್ಕದಲ್ಲೇ ಇರೋ ಬಾಡಿಗೆ ರೂಮ್ನಲ್ಲಿದ್ದ. ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇದ್ದ ಮಹಾದೇವ ಜಾಧವ್ ನಿನ್ನೆ ಕೆಲಸಕ್ಕೆ ರಜೆ ಇದೆ, ಹೊರಗೆ ಹೋಗಿ ಬರ್ತೀನಿ ಅಂತಾ ತಂಗಿಗೆ ಹೇಳಿ ತೆರಳಿದ್ದ. ಹೀಗೆ ಹೋಗಿದ್ದ ಆತ ಮನೆಯಿಂದ ಸ್ವಲ್ಪ ದೂರದಲ್ಲೇ ಇರುವ ವಡಗಾವಿಯ ಯಳ್ಳೂರು ಕ್ರಾಸ್ ಬಳಿ ಆಟೋ ನಿಲ್ದಾಣದ ಹತ್ತಿರ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದ. ರಕ್ತದ ಮಡುವಿನಲ್ಲಿ ಬಿದ್ದವನನ್ನು ನೋಡಿ ಸಾರ್ವಜನಿಕರೇ ಶಾಕ್ ಆಗಿದ್ರು. ಬರ್ಬರ ಹತ್ಯೆ ಬಗ್ಗೆ ಮಹದೇವ ಜಾಧವ್ ಅಳಿಯ ಪೊಲೀಸರಿಗೆ ಕಂಪ್ಲೆಂಟ್ ಕೊಟ್ಟಿದ್ದು, ಪೊಲೀಸರು ತಕ್ಷಣ ತನಿಖೆ ಕೈಗೆತ್ತಿಕೊಂಡಿದ್ರು.

ಹೀಗೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಹತ್ಯೆ ನಡೆಸಿದ ಆರೋಪಿಯನ್ನು ಪತ್ತೆಹಚ್ಚಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಈ ಕೊಲೆ ನಡೆದಿದ್ದು ಕ್ಷುಲ್ಲಕ ಕಾರಣಕ್ಕೆ ಅನ್ನೋದು ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿದೆ. ಅಸಲಿಗೆ ಮಹಾದೇವ ಜಾಧವ್ ಜೊತೆ ಕೆಲಸ ಮಾಡ್ತಿದ್ದ ಸೂರಜ್ ಎಂಬಾತನ ಬಳಿ ಎರಡು ಸಾವಿರ ರೂಪಾಯಿ ಹಣ ಸಾಲ ಪಡೆದಿದ್ದನಂತೆ. ಎರಡು ಸಾವಿರ ರೂಪಾಯಿ ವಾಪಸ್ ನೀಡುವಂತೆ ಕೇಳಿದರೂ ಕೊಡ್ತಿರಲಿಲ್ವಂತೆ. ಇಂದು ಬೆಳಗ್ಗೆ ಯಳ್ಳೂರು ಕ್ರಾಸ್ ಬಳಿ ತೆರಳುತ್ತಿದ್ದ ಮಹಾದೇವ ಜಾಧವ್ ಬಳಿ ಸೂರಜ್ ತಾನು ನೀಡಿದ ಹಣ ವಾಪಾಸ್ ನೀಡುವಂತೆ ಕೇಳಿದ್ದಾನಂತೆ. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದು ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ಸೂರಜ್ ತನ್ನ ಬಳಿ ಇದ್ದ ರೇಡಿಯಮ್ ಕಟರ್‌ನಿಂದ ಮಹಾದೇವ ಜಾಧವ್ ಕತ್ತು ಸೀಳಿ ಪರಾರಿಯಾಗಿದ್ದಾನೆ. ಈ ವೇಳೆ ಸ್ಥಳದಲ್ಲೇ ಕುಸಿದು ಬಿದ್ದ ಮಹಾದೇವ ಜಾಧವ್ ವಿಲವಿಲ ಒದ್ದಾಡಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ.
ಇದನ್ನೂ ಓದಿ:
2 ಸಾವಿರ ರೂಪಾಯಿ ಸಾಲ ಮರು ಪಾವತಿಸಿಲ್ಲ ಎಂದು ಹಾಡಹಗಲೇ ವೃದ್ಧನ ಕತ್ತು ಸೀಳಿ ಬರ್ಬರ ಹತ್ಯೆ

ಚಿತ್ರದುರ್ಗ: ಅಪ್ರಾಪ್ತೆ ಅತ್ಯಾಚಾರ-ಕೊಲೆ ಪ್ರಕರಣ ಸಂಬಂಧ ಆರೋಪಿ ಬಿಡುಗಡೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಯುವಕ ಅರೆಸ್ಟ್

Click on your DTH Provider to Add TV9 Kannada