AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರ ಗಮನಕ್ಕೆ: ಕ್ಯಾಸಲ್ ​ರಾಕ್ ಬಳಿ ಗುಡ್ಡ ಕುಸಿತ, ಕರ್ನಾಟಕ ಗೋವಾ ಮಧ್ಯೆ ಸಂಚರಿಸುವ ರೈಲುಗಳು ರದ್ದು

ಕರ್ನಾಟಕ-ಗೋವಾ ಗಡಿಯ ಕ್ಯಾಸಲ್ ​ರಾಕ್ ರೈಲು ನಿಲ್ದಾಣದ ವ್ಯಾಪ್ತಿಯ ಹಳಿಯ ಮೇಲೆ ಮಂಗಳವಾರ (ಜು.25) ಗುಡ್ಡ ಕುಸಿತವಾಗಿದೆ. ಈ ಹಿನ್ನೆಲೆ ಕರ್ನಾಟಕ-ಗೋವಾ ಮಧ್ಯೆ ರೈಲು ಸಂಚಾರ ಬಂದ್​ ಆಗಿದೆ.

ಪ್ರಯಾಣಿಕರ ಗಮನಕ್ಕೆ: ಕ್ಯಾಸಲ್ ​ರಾಕ್ ಬಳಿ ಗುಡ್ಡ ಕುಸಿತ, ಕರ್ನಾಟಕ ಗೋವಾ ಮಧ್ಯೆ ಸಂಚರಿಸುವ ರೈಲುಗಳು ರದ್ದು
ಕ್ಯಾಸಲ್​ ರಾಕ್​
Sahadev Mane
| Edited By: |

Updated on:Jul 26, 2023 | 2:35 PM

Share

ಬೆಳಗಾವಿ: ಕರ್ನಾಟಕ-ಗೋವಾ (Karnataka-Goa) ಗಡಿಯ ಕ್ಯಾಸಲ್ ​ರಾಕ್ (Castl Erock) ರೈಲು ನಿಲ್ದಾಣದ ವ್ಯಾಪ್ತಿಯ ಹಳಿಯ ಮೇಲೆ ಮಂಗಳವಾರ (ಜು.25) ಗುಡ್ಡ ಕುಸಿತವಾಗಿದೆ. ಈ ಹಿನ್ನೆಲೆ ಕರ್ನಾಟಕ-ಗೋವಾ ಮಧ್ಯೆ ರೈಲು ಸಂಚಾರ ಬಂದ್ (Train Cancel)​ ಆಗಿದೆ. ನೈರುತ್ಯ ರೈಲ್ವೆ ಇಲಾಖೆ ಜು.25 ರಿಂದ ಎರಡು ರೈಲುಗಳ ಸಂಚಾರ ರದ್ದು ಮಾಡಿದೆ. ಯಶವಂತಪುರದಿಂದ ವಾಸ್ಕೋ ಡ ಗಾಮಕ್ಕೆ ಹೊರಡುವ (ರೈಲು ಸಂಖ್ಯೆ 17309) ಡೈಲಿ ಎಕ್ಸ್​​ಪ್ರೆಸ್​​ ರೈಲು ಸಂಚಾರ, ವಾಸ್ಕೋ ಡ ಗಾಮದಿಂದ ಯಶವಂತಪುರಕ್ಕೆ ಹೊರಡುವ (ರೈಲು ಸಂಖ್ಯೆ 17310) ಸಂಚಾರ ರದ್ದಾಗಿದೆ.

ನೈರುತ್ಯ ರೈಲ್ವೆ ಇಲಾಖೆಯಿಂದ ನಾಲ್ಕು ಮಾರ್ಗಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಇನ್ನು ಮಂಗಳವಾರ ಯಶವಂತಪುರದಿಂದ ವಾಸ್ಕೋ ಡ ಗಾಮಕ್ಕೆ ಹೊರಟಿದ್ದ ರೈಲನ್ನು ಹುಬ್ಬಳ್ಳಿಯಲ್ಲಿಯೇ ಕೊನೆಗೊಳಿಸಲಾಗಿದೆ. ಹಾಗೇ ವಾಸ್ಕೋ ಡ ಗಾಮಕ್ಕೆ ತೆರಳಬೇಕಿದ್ದ ದೆಹಲಿ ವಾಸ್ಕೋ ಗೋವಾ ಎಕ್ಸ್​​ಪ್ರೆಸ್​​ ಬೆಳಗಾವಿಯಲ್ಲಿಯೇ ಸಂಚಾರವನ್ನು ಕೊನೆಗೊಳಿಸಿದೆ.

ಇದನ್ನೂ ಓದಿ: ಮಂಗಳೂರು ರೈಲುಗಳಿಗೆ ಕರಾವಳಿಯ ಜನಪ್ರಿಯ ವ್ಯಕ್ತಿಗಳ, ಸ್ಥಳಗಳ ಹೆಸರು ಮರುನಾಮಕರಣ?

ರೈಲು ಸಂಖ್ಯೆ 12779 ವಾಸ್ಕೋ-ಡ-ಗಾಮಾ – ಹಜರತ್ ನಿಜಾಮುದ್ದಿನ್‌ ಗೋವಾ ಎಕ್ಸ್‌ಪ್ರೆಸ್  ಮಾರ್ಗ ಬದಲಾವಣೆಯಾಗಿದೆ. ಈ ರೈಲು ಸಂವರ್ಡಮ್, ಮಡ್ಗಾಂವ್, ಮಜೋರ್ಡಾ, ಮಧುರೆ, ರೋಹಾ, ಪನ್ವೇಲ್, ಕಲ್ಯಾಣ್ ಮತ್ತು ಮನ್ಮಡ್ ಮೂಲಕ ಸಾಗಿದೆ. ಕುಲೆಂ, ಲ್ಹಾಟ್‌ರಾಕ್, ಕ್ಯಾಸ್ಟ್ಲೆರಾಕ್, ಕ್ಯಾಸಲ್‌ರಾಕ್‌ , ಬೆಳಗಾವಿ, ಸತಾರಾ, ಪುಣೆ, ದೌಂಡ್ ಅಹ್ಮದ್‌ನಗರ, ಬೇಲಾಪುರ್ ಮತ್ತು ಕೋಪರ್‌ಗಾಂವ್ ನಿಲ್ದಾಣ ಸಂಚಾರ ರದ್ದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Wed, 26 July 23

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ