ತಮ್ಮ ಪತಿ ಹೇಮಂತ್ ಖಾಕಿ ಕಳಚುವುದಿಲ್ಲ; ಖಾದಿ ತೊಡುವುದಿಲ್ಲ ಎಂದ ಪತ್ನಿ ಅಂಜಲಿ ನಿಂಬಾಳ್ಕರ್
IPS Hemant Nimbalkar: ಕಾನೂನು ಪದವಿ ಪೂರೈಸಿದ ಬಳಿಕ ಮತ್ತೆ ಐಪಿಎಸ್ ಅಧಿಕಾರಿಯಾಗಿ ಭಾರತೀಯ ಆಡಳಿತ ಸೇವೆ ಮುಂದುವರಿಸಲಿದ್ದಾರೆ. ಯಾವುದೇ ಕಾರಣಕ್ಕೂ ಅವರು ರಾಜಕೀಯಕ್ಕೆ ಬರುವುದಿಲ್ಲ ಎಂದು ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ತಿಳಿಸಿದ್ದಾರೆ.
ಬೆಳಗಾವಿ: ತಮ್ಮ ಪತಿ ಹೇಮಂತ್ ನಿಂಬಾಳ್ಕರ್ ಐಪಿಎಸ್ ಹುದ್ದೆಗೆ (IPS Hemant Nimbalkar) ರಾಜೀನಾಮೆ ನೀಡುವುದಿಲ್ಲ; ಅವರು ರಾಜಕಾರಣಕ್ಕೆ ಬರಲ್ಲ. ಸದ್ಯಕ್ಕೆ ಅವರು ಕಾನೂನು ಪದವಿ ಪಡೆಯುತ್ತಿದ್ದಾರೆ. ಹಾಗಾಗಿ ಅವರೀಗ ಬೆಂಗಳೂರಿನಲ್ಲಿದ್ದು, ಕಾನೂನು ಪದವಿ ಪಡೆಯುತ್ತಿದ್ದಾರೆ. ಈಗ ವಿದ್ಯಾಭ್ಯಾಸಕ್ಕಾಗಿ ಎರಡು ವರ್ಷ ರಜೆ ಪಡೆದಿದ್ದಾರೆ. ಕಾನೂನು ಪದವಿ ಪೂರೈಸಿದ ಬಳಿಕ ಮತ್ತೆ ಐಪಿಎಸ್ ಅಧಿಕಾರಿಯಾಗಿ ಭಾರತೀಯ ಆಡಳಿತ ಸೇವೆ ಮುಂದುವರಿಸಲಿದ್ದಾರೆ. ಯಾವುದೇ ಕಾರಣಕ್ಕೂ ಅವರು ರಾಜಕೀಯಕ್ಕೆ ಬರುವುದಿಲ್ಲ ಎಂದು ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ತಿಳಿಸಿದ್ದಾರೆ (Anjali Nimbalkar).
ಪತಿ ಹೇಮಂತ್ ನಿಂಬಾಳ್ಕರ್ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಬೆಳಗಾವಿಯಲ್ಲಿ ಹೇಳಿರುವ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಬೆಂಗಳೂರಿನಲ್ಲಿ ಕಾನೂನು ಪದವಿ ವಿದ್ಯಾಭ್ಯಾಸಕ್ಕಾಗಿ ಎರಡು ವರ್ಷ ರಜೆ ಪಡೆದಿದ್ದಾರೆ. ನಾನೂ ನಿತ್ಯ ಮೂರು ಸಲ ಪತಿ ಜೊತೆ ಫೋನ್ ನಲ್ಲಿ ಮಾತನಾಡುತ್ತೇನೆ. ರಾಜಕೀಯ ಸೇರುವ ವಿಷಯವನ್ನು ಅವರು ನನ್ನ ಜೊತೆಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ದಾರುಣ: ದಾವಣಗೆರೆ ಜಿಲ್ಲೆಯ ಗ್ರಾಮದಲ್ಲಿ ಆಂಬುಲೆನ್ಸ್ನಲ್ಲಿ ಆಕ್ಸಿಜನ್ ಕೊರತೆ, ಕೊನೆಯುಸಿರೆಳೆದ ನವಜಾತ ಶಿಶು ರಾಜ್ಯದ ಗ್ರಾಮೀಣ ಭಾಗದಲ್ಲಿ ನಿನ್ನೆ ತಡರಾತ್ರಿ 2 ಗಂಟೆಗೆ ಮಹಿಳೆಯೊಬ್ಬರಿಗೆ ಹೆರಿಗೆಯಾಗಿದ್ದು, ನವಜಾತ ಶಿಶುವಿನಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ, ಆ ಮಗುವನ್ನು ಮತ್ತೊಮದು ಆಸ್ಪತ್ರೆ ಸಾಗಿಸುವಾಗ ಆಂಬುಲೆನ್ಸ್ನಲ್ಲಿ ಆಕ್ಸಿಜನ್ ಕೊರತೆಯುಂಟಾಗಿದ್ದು, ಆ ನವಜಾತ ಶಿಶು ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ಈ ಘಟನೆ ನಡೆದಿದೆ. ಶೃಂಗಾರಬಾಬು ತಾಂಡಾದ ಹಾಲೇಶ್-ಸ್ವಾತಿ ದಂಪತಿಯ ಮೊದಲ ಮಗು ಆಂಬುಲೆನ್ಸ್ನಲ್ಲಿಆಕ್ಸಿಜನ್ ಕೊರತೆಯಿಂದಾಗಿ ಕೊನೆಯುಸಿರೆಳೆದಿದೆ.
ನಿನ್ನೆ ತಡರಾತ್ರಿ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಗರ್ಭಿಣಿ ಸ್ವಾತಿಯನ್ನು ಬಸವಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಕರು ದಾಖಲಿಸಿದರು. ಇಂದು ಬೆಳಗ್ಗೆ 7 ಗಂಟೆಗೆ ಹೆರಿಗೆಯಾಗಿದ್ದು, ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾಳಿಗೆ ಕರೆದೊಯ್ಯಲು ಪೋಷಕರು ಮುಂದಾದರು. ಆದರೆ ಅಂಬುಲೆನ್ಸ್ ನಲ್ಲಿ ಅಕ್ಸಿಜನ್ ಇಲ್ಲ, ಬೇರೊಂದು ಅಂಬುಲೆನ್ಸ್ ದಾರಿ ಮಧ್ಯೆ ಬರುತ್ತದೆ ಎಂದು ಚಾಲಕ ಕರೆದೊಯ್ದಿದ್ದಾನೆ. ಆದರೆ ಹೊನ್ನಾಳಿಗೆ ಹೋಗುವುದರೊಳಗೆ ಉಸಿರಾಟದ ತೊಂದರೆ ಬಿಗಡಾಯಿಸಿ, ಮಗು ಸಾವನ್ನಪ್ಪಿದೆ. ಇದರಿಂದ ರೊಚ್ಚಿಗೆದ್ದ ಪೋಷಕರು ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಬಸವಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಇದೂ ಓದಿ: ಕಿರುತೆರೆ ಪ್ರೇಕ್ಷಕರ ಮನ ಗೆದ್ದ ಪುಟಾಣಿ ವಂಶಿಕಾ
Published On - 4:30 pm, Sat, 9 April 22