AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕನ್ನಡವೇ ಮಾಯ! ಕೆಎಂಎಫ್ ವಿರುದ್ಧ ಕನ್ನಡಾಭಿಮಾನಿಗಳು ಆಕ್ರೋಶ

ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಈ ಕೆಎಂಎಫ್​ನ ನಂದಿನಿ ಹಾಲು ಇಡೀ ರಾಜ್ಯಾದ್ಯಂತ ಸಪ್ಲೈ ಆಗುತ್ತೆ. ಅರ್ಧ ಲೀಟರ್, ಒಂದು ಲೀಟರ್ ಪ್ಯಾಕೆಟ್​ಗಳಾಗಿ ಹಾಲು ಹಳ್ಳಿ ಹಳ್ಳಿಗೂ ತಲುಪುತ್ತೆ. ಈವರೆಗೂ ಅಚ್ಚ ಕನ್ನಡದಲ್ಲಿ ಪ್ಯಾಕೆಟ್ ಮೇಲೆ ನಂದಿನಿ ಹಾಲು ಅಂತಾ ಬರೆದಿದ್ದು ಸಿಗುತಿತ್ತು.

ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕನ್ನಡವೇ ಮಾಯ! ಕೆಎಂಎಫ್ ವಿರುದ್ಧ ಕನ್ನಡಾಭಿಮಾನಿಗಳು ಆಕ್ರೋಶ
ನಂದಿನಿ ಹಾಲಿನ ಪ್ಯಾಕೆಟ್​ ಮೇಲೆ ಕನ್ನಡ ಭಾಷೆಯಿಲ್ಲ ಅಂತ ಕನ್ನಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ
TV9 Web
| Edited By: |

Updated on:Apr 09, 2022 | 8:42 PM

Share

ಬೆಳಗಾವಿ: ಹಾಲು ಅಂದರೆ ಅದು ಕೆಎಂಎಫ್​ನ (KMF) ನಂದಿನಿ ಹಾಲು (Nandini Milk). ರಾಜ್ಯದಲ್ಲಿ ಅಷ್ಟೇ ಅಲ್ಲದೇ ಹೊರ ರಾಜ್ಯದಲ್ಲೂ ಈ ಹಾಲಿಗೆ ಡಿಮ್ಯಾಂಡ್ ಇದೆ. ನಿತ್ಯವೂ ಲಕ್ಷಾಂತರ ಲೀಟರ್​ನಷ್ಟು ಮಾರಾಟವಾಗುವ ಈ ಹಾಲಿಗೆ ಎಲ್ಲಿಲ್ಲದ ಬೇಡಿಕೆ. ಕರ್ನಾಟಕದಲ್ಲೇ ಅತೀ ಹೆಚ್ಚು ಮಾರಾಟವಾಗುವ ಏಕೈಕ ಹಾಲು ಅಂದರೆ ಅದು ಕೆಎಂಎಫ್​ನ ನಂದಿನಿ ಹಾಲು. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತದಿಂದ ಹಾಲು ಉತ್ಪಾದನೆಯಾಗಿ ರಾಜ್ಯಾದ್ಯಂತ ಸಪ್ಲೈ ಮಾಡಲಾಗುತ್ತದೆ. ಆದರೆ ಇದೇ ನಂದಿನಿ ಹಾಲು ಇದೀಗ ಸುದ್ದಿಯಲ್ಲಿದ್ದು, ಕನ್ನಡಿಗರು ಇದರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಹಾಲಿನ ಪ್ಯಾಕೆಟ್ ಮೇಲೆ ಕನ್ನಡ ಮಾಯ: ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಈ ಕೆಎಂಎಫ್​ನ ನಂದಿನಿ ಹಾಲು ಇಡೀ ರಾಜ್ಯಾದ್ಯಂತ ಸಪ್ಲೈ ಆಗುತ್ತೆ. ಅರ್ಧ ಲೀಟರ್, ಒಂದು ಲೀಟರ್ ಪ್ಯಾಕೆಟ್​ಗಳಾಗಿ ಹಾಲು ಹಳ್ಳಿ ಹಳ್ಳಿಗೂ ತಲುಪುತ್ತೆ. ಈವರೆಗೂ ಅಚ್ಚ ಕನ್ನಡದಲ್ಲಿ ಪ್ಯಾಕೆಟ್ ಮೇಲೆ ನಂದಿನಿ ಹಾಲು ಅಂತಾ ಬರೆದಿದ್ದು ಸಿಗುತಿತ್ತು. ಆದರೆ ಈಗ ಕನ್ನಡವೇ ಮಾಯವಾಗಿ ಹಿಂದಿ ಮತ್ತು ಇಂಗ್ಲೀಷ್​ನಲ್ಲಿ ಬರೆದ ಪ್ಯಾಕೆಟ್​ಗಳು ಸಿಗುತ್ತಿವೆ. ನಮ್ಮದೇ ರಾಜ್ಯದಲ್ಲಿ ಉತ್ಪಾದನೆಯಾಗುವ ನಂದಿನ ಹಾಲಿನ ಪ್ಯಾಕೆಟ್ ಮೇಲೆ ಕನ್ನಡ ಬಿಟ್ಟಿರುವುದು ಸದ್ಯ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಎಂಎಫ್‌ಗೆ ಕನ್ನಡಿಗರ ಪ್ರಶ್ನೆ: ನಂದಿನ ಹಾಲಿನ ಪ್ಯಾಕೆಟ್ ಮೇಲೆ ಹಿಂದಿ ಮತ್ತು ಇಂಗ್ಲಿಷ್ ಮುದ್ರಣಗೊಳ್ಳುತ್ತಿರುವುದನ್ನ ಗಮನಿಸಿದ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಭಿಯಾನ ಆರಂಭಿಸಿದ್ದಾರೆ. ಕೆಎಂಎಫ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕುವುದರ ಜತೆಗೆ ಸಾಕಷ್ಟು ಪ್ರಶ್ನೆಗಳನ್ನ ಕನ್ನಡಿಗರು ಮಾಡುತ್ತಿದ್ದಾರೆ. ನಂದಿನಿ ಪ್ರಾಡಕ್ಟ್ ಕರ್ನಾಟಕದ್ದೋ ಅಲ್ವೋ? ಕನ್ನಡದ ಒಂದು ಅಕ್ಷರವೂ ಅದರಲ್ಲಿ ಕಾಣಸಿಗದು. ಸಂಬಂಧಿಸಿದವರು ಕೂಡಲೇ ಅವರಿಗೆ ಎಚ್ಚರಿಕೆ ಕೊಡಬೇಕು ಅಂತಾ ಅಭಿಯಾನ ಆರಂಭಿಸಿದ್ದಾರೆ. ನಂದಿನಿ ಹಾಲು ಅಂತಾ ಈ ಹಿಂದೆ ಕನ್ನಡದಲ್ಲಿ ಪ್ಯಾಕೆಟ್ ಮೇಲೆ ಬರೆದಿದ್ದ ಪೋಟೋ ಹಾಗೂ ಈಗ ಹಿಂದಿ, ಇಂಗ್ಲಿಷ್ ನಲ್ಲಿ ಬರೆದ ಪೋಟೋ ಎರಡನ್ನೂ ಟ್ಯಾಗ್ ಮಾಡಿ ಈ ಅಭಿಯಾನವನ್ನ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿದ್ದಾರೆ.

ಬೆಳಗಾವಿ ಹಾಲು ಉತ್ಪಾದನಾ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ ಸಮರ್ಥನೆ: ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಕೆಎಂಎಫ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಇದಕ್ಕೆ ಸಮರ್ಥನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಉತ್ಪಾದನೆ ಆಗುತ್ತಿದ್ದ ಪ್ಯಾಕೆಟ್​ನ ಯಂತ್ರ ಸುಟ್ಟು ಹೋಗಿದ್ದು ಈ ಕಾರಣಕ್ಕೆ ಗುಜರಾತ್​ನಲ್ಲಿ ಪ್ಯಾಕೆಟ್ ಮೇಲೆ ಪ್ರಿಂಟ್ ಹಾಕಿಸಲಾಗುತ್ತಿದೆ. ಅಲ್ಲಿ ಕನ್ನಡ ಇರದ ಕಾರಣ ಈ ಸಮಸ್ಯೆ ಆಗಿದೆ. ಬೆಂಗಳೂರಿನಲ್ಲಿ ಹೊಸ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ. ಆದಷ್ಟು ಬೇಗ ಎಲ್ಲವೂ ಸರಿ ಆಗುತ್ತೆ ಅಂತಾ ಟಿವಿ9ಗೆ ಬೆಳಗಾವಿ ಹಾಲು ಉತ್ಪಾದನಾ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ ಡಿಎನ್ ಹೆಗಡೆ ತಿಳಿಸಿದ್ದಾರೆ.

ವರದಿ: ಸಹದೇವ ಮಾನೆ

ಇದನ್ನೂ ಓದಿ

Health Tips: ಆಯುರ್ವೇದದ ಪ್ರಕಾರ ಬೇಸಿಗೆಯ ಧಗೆ ತಣಿಸುವ 10 ನೈಸರ್ಗಿಕ ಜ್ಯೂಸ್​ಗಳಿವು

Viral Video: ಲೋಕಲ್ ರೈಲಿನಲ್ಲಿ ಜನರೊಂದಿಗೆ ಕುದುರೆ ಪ್ರಯಾಣಿಸುತ್ತಿರುವ ವಿಡಿಯೋ ವೈರಲ್

Published On - 3:20 pm, Sat, 9 April 22

Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!