Health Tips: ಆಯುರ್ವೇದದ ಪ್ರಕಾರ ಬೇಸಿಗೆಯ ಧಗೆ ತಣಿಸುವ 10 ನೈಸರ್ಗಿಕ ಜ್ಯೂಸ್ಗಳಿವು
Beat the Heat: ಪ್ರಿಸರ್ವೇಟಿವ್ಗಳನ್ನು ಹಾಕಿರುವ ಜ್ಯೂಸ್ ನಮಗೆ ತೊಂದರೆಯನ್ನು ಉಂಟುಮಾಡುತ್ತವೆ ಮತ್ತು ಬೊಜ್ಜು, ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಬೇಸಿಗೆಯ ಧಗೆಯನ್ನು 10 ನೈಸರ್ಗಿಕ ಕೂಲಿಂಗ್ ಪಾನೀಯಗಳಿಂದ ಕಾಪಾಡಿಕೊಳ್ಳಬಹುದು.
ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ನೀರಿನ ಅಂಶ ಬಹಳ ಕಡಿಮೆಯಾಗಿರುತ್ತದೆ. ಹೀಗಾಗಿ, ಆಹಾರದ ಜೊತೆಗೆ ಹೆಚ್ಚೆಚ್ಚು ಪಾನೀಯ ಸೇವಿಸುವುದು ಕೂಡ ಮುಖ್ಯ. ದಿನವೂ ಹೆಚ್ಚಿನ ಕ್ಯಾಲೋರಿ ಇರುವ ತಿಂಡಿಗಳು ಮತ್ತು ಎಣ್ಣೆಯುಕ್ತ ಆಹಾರಕ್ಕಿಂತ ಹೆಚ್ಚು ಪಾನೀಯಗಳನ್ನು ಸೇವಿಸಿದರೆ ಬೇಸಿಗೆಯಲ್ಲಿ ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಬಹುದು. ಹಾಗಂತ ಪಾನೀಯವನ್ನು ಕುಡಿಯಬೇಕೆಂಬ ಕಾರಣಕ್ಕೆ ಸಕ್ಕರೆ ಅಂಶವಿರುವ ರೆಡಿಮೇಡ್ ಜ್ಯೂಸ್, ಪ್ರಿಸರ್ವೇಟಿವ್ಗಳನ್ನು ಹಾಕಿರುವ ಜ್ಯೂಸ್ ಮತ್ತು ಐಸ್‌ಕ್ರೀಮ್‌ಗಳನ್ನು ಸೇವಿಸುವ ಬದಲು ನೈಸರ್ಗಿಕವಾದ ಜ್ಯೂಸ್ಗಳನ್ನು ಮನೆಯಲ್ಲೇ ತಯಾರಿಸಿಕೊಂಡು ಸೇವಿಸಿ.
ಪ್ರಿಸರ್ವೇಟಿವ್ಗಳನ್ನು ಹಾಕಿರುವ ಜ್ಯೂಸ್ ನಮಗೆ ತೊಂದರೆಯನ್ನು ಉಂಟುಮಾಡುತ್ತವೆ ಮತ್ತು ಬೊಜ್ಜು, ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಹೆಚ್ಚು ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದು ನಿಮ್ಮ ಬಾಯಿಯ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಮತ್ತು ಹಲ್ಲು ಕೊಳೆಯಲು ಕಾರಣವಾಗಬಹುದು. ಹಾಗೇ, ತಂಪು ಪಾನೀಯಗಳು ಮೂತ್ರಪಿಂಡವನ್ನು ಹಾನಿಗೊಳಿಸುತ್ತವೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತವೆ. ಹೀಗಾಗಿ, ನೈಸರ್ಗಿಕ ಮತ್ತು ಮನೆಯಲ್ಲಿ ತಯಾರಿಸಿದ ಪಾನೀಯಗಳನ್ನು ಆಯ್ಕೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಆಯಾ ಸೀಸನ್ನಲ್ಲಿ ಸಿಗುವ ಹಣ್ಣುಗಳು, ಗಿಡಮೂಲಿಕೆಗಳು ಮತ್ತು ಮಸಾಲೆಗಳಿಂದ ದೇಹವನ್ನು ತಂಪಾಗಿಸುವ ಜ್ಯೂಸ್ ತಯಾರಿಸಿಕೊಳ್ಳಬಹುದು. ಸತ್ತು ಶರಬತ್, ಬೇಲ್ ಶರಬತ್, ಪುದಿನಾ ಶರಬತ್ ಮತ್ತು ಲಿಂಬು ಶರಬತ್ ಮುಂತಾದ ರಿಫ್ರೆಶ್ ಪಾನೀಯಗಳನ್ನು ತಯಾರಿಸಲು ಬಳಸಬಹುದು. ಈ ಬಗ್ಗೆ ಆಯುರ್ವೇದ ತಜ್ಞೆ ಡಾ. ದೀಕ್ಷಾ ಭಾವ್ಸರ್ ತಮ್ಮ ಇತ್ತೀಚಿನ ಪೋಸ್ಟ್‌ನಲ್ಲಿ ಬೇಸಿಗೆಯ ಧಗೆಯನ್ನು 10 ನೈಸರ್ಗಿಕ ಕೂಲಿಂಗ್ ಪಾನೀಯಗಳಿಂದ ಕಾಪಾಡಿಕೊಳ್ಳಬಹುದು.
1. ಫೆನ್ನೆಲ್ ಶರಬತ್ ಒಂದು ಬೌಲ್ ತೆಗೆದುಕೊಳ್ಳಿ, 2 ಟೀಸ್ಪೂನ್ ಫೆನ್ನೆಲ್ ಪುಡಿ ಸೇರಿಸಿ. ರುಚಿಗೆ ತಕ್ಕಂತೆ ಕಲ್ಲು ಸಕ್ಕರೆಯನ್ನು ಸೇರಿಸಿ. ಅದಕ್ಕೆ 2 ಗ್ಲಾಸ್ ನೀರು ಸೇರಿಸಿ ಮತ್ತು ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ನಿಮ್ಮ ರುಚಿಕರವಾದ ಕೂಲಿಂಗ್ ಫೆನ್ನೆಲ್ ಪಾನೀಯವು ಕುಡಿಯಲು ಸಿದ್ಧವಾಗುತ್ತದೆ.
2. ಸಟ್ಟು ಎನರ್ಜಿ ಡ್ರಿಂಕ್ ಸಟ್ಟು ಬೇಸಿಗೆಯಲ್ಲಿ ದೇಹವನ್ನು ಅತ್ಯಂತ ತಂಪಾಗಿಸುವ ಮತ್ತು ಸುಲಭವಾಗಿ ಜೀರ್ಣವಾಗುವ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಸತ್ತು ಶರಬತ್ ಫಿಟ್‌ನೆಸ್ ಉತ್ಸಾಹಿಗಳ ಜನಪ್ರಿಯ ಆಯ್ಕೆಯಾಗಿದೆ. ಒಂದು ಲೋಟ ನೀರಿಗೆ 1 ಚಮಚ ಸಟ್ಟು ಪುಡಿಯನ್ನು ಬೆರೆಸಿ. ಒಂದು ಚಿಟಿಕೆ ಹುರಿದ ಜೀರಿಗೆ ಮತ್ತು ಉಪ್ಪನ್ನು ಸೇರಿಸಿ. ಅದರಲ್ಲಿ ಸ್ವಲ್ಪ ಬೆಲ್ಲವನ್ನು ಸೇರಿಸಿದರೆ ಸಟ್ಟು ಶರಬತ್ ಕುಡಿಯಲು ಸಿದ್ಧ.
3. ಪುದಿನಾ ಶರಬತ್ 2-3 ಲೋಟ ನೀರು ತೆಗೆದುಕೊಂಡು, ಅದರಲ್ಲಿ ಪುದೀನ ಸೊಪ್ಪು ಮತ್ತು ಕಲ್ಲುಸಕ್ಕರೆಯ ಸಣ್ಣ ತುಂಡುಗಳನ್ನು (ರುಚಿಗೆ ತಕ್ಕಂತೆ) ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅರ್ಧ ನಿಂಬೆ ಮತ್ತು ಕಲ್ಲು ಉಪ್ಪು ಸೇರಿಸಿ (ರುಚಿಗೆ ತಕ್ಕಂತೆ).
4. ಗುಲ್ಕಂಡ್ ಶಾಟ್ಸ್ 1 ಲೋಟ ಹಾಲು ತೆಗೆದುಕೊಂಡು ಅದರಲ್ಲಿ 1 ಚಮಚ ಗುಲ್ಕಂಡ್ ಸೇರಿಸಿ ಮತ್ತು ಹ್ಯಾಂಡ್ ಬ್ಲೆಂಡರ್ನೊಂದಿಗೆ ಮಿಶ್ರಣ ಮಾಡಿ. ನಂತರ ನಿಮ್ಮ ಕುಟುಂಬದೊಂದಿಗೆ ಗುಲ್ಕಂಡ್ ಹಾಲಿನ ಮಿಶ್ರಣವನ್ನು ಸೇವಿಸಿ.
5. ಪಾನ್ ಶಾಟ್ಸ್ ಸಣ್ಣ ತುಂಡುಗಳಾಗಿ ಪೀಸ್ ಮಾಡಿಕೊಂಡ 4 ಪಾನ್ (ವೀಳ್ಯದೆಲೆಗಳು), 4 ಟೀಸ್ಪೂನ್ ಗುಲ್ಕಂಡ್, 1 ಟೀಸ್ಪೂನ್ ಫೆನ್ನೆಲ್ ಬೀಜಗಳು, 1 ಟೀಸ್ಪೂನ್ ತುರಿದ ತೆಂಗಿನಕಾಯಿ, 1 ಟೀಸ್ಪೂನ್ ಕಲ್ಲು ಸಕ್ಕರೆ / ಮಿಸ್ರಿ (ನಿಮಗೆ ಬೇಕಿದ್ದರೆ ಮಾತ್ರ) ಮತ್ತು 1/4 ಕಪ್ ನೀರು ತೆಗೆದುಕೊಳ್ಳಿ. ಮೊದಲು ಪಾನ್ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ. ನಂತರ ನೀರನ್ನು ಹೊರತುಪಡಿಸಿ ಎಲ್ಲಾ ಇತರ ಪದಾರ್ಥಗಳನ್ನು ಸೇರಿಸಿ ಮತ್ತು ಕೆಲವು ಸೆಕೆಂಡುಗಳ ಕಾಲ ಅವುಗಳನ್ನು ಮಿಶ್ರಣ ಮಾಡಿ. ನೀರು ಸೇರಿಸಿ ಮತ್ತು ನಯವಾದ ತನಕ ಮಿಶ್ರಣ ಮಾಡಿ.
6. ಬಿಲ್ವ ಅಥವಾ ಬೇಲ್ ಶರಬತ್ ಬಿಲ್ವ ಹಣ್ಣನ್ನು ತೆಗೆದುಕೊಳ್ಳಿ. ಅದನ್ನು ಮಧ್ಯದಿಂದ ಕತ್ತರಿಸಿ ಒಳಗಿನ ಮೃದುವಾದ ತಿರುಳನ್ನು ಹೊರತೆಗೆಯಿರಿ. ಆ ತಿರುಳನ್ನು 1 ಗ್ಲಾಸ್ ನೀರಿನಲ್ಲಿ 20 ನಿಮಿಷಗಳ ಕಾಲ ನೆನೆಸಿಡಿ. ನಂತರ ಬೇಲದ ಹಣ್ಣನ್ನು ಚೆನ್ನಾಗಿ ಹಿಸುಕಿ. ನಂತರ ಅದನ್ನು ಸೋಸಿಕೊಂಡು, ಅದಕ್ಕೆ 1 ಚಮಚ ಬೆಲ್ಲ, ಹುರಿದ ಜೀರಿಗೆ, ಏಲಕ್ಕಿ ಮತ್ತು ಚಿಟಿಕೆ ಕಪ್ಪು ಉಪ್ಪು ಸೇರಿಸಿ. ನಿಮ್ಮ ಬಿಲ್ವ ಶರಬತ್ ಸಿದ್ಧವಾಗುತ್ತದೆ.
7. ಖಾಸ್ ಶರಬತ್ ಖಾಸ್ (ವೆಟಿವರ್) ಅನ್ನು 8-10 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಸೋಸಿಕೊಳ್ಳಿ, ಅದರಲ್ಲಿ ಕಲ್ಲು ಸಕ್ಕರೆ ಸೇರಿಸಿ (ರುಚಿಗೆ ತಕ್ಕಂತೆ) ಕುಡಿಯಿರಿ.
8. ಕೋಕಂ ಶರಬತ್ ಎರಡು ತಾಜಾ ಕೋಕಂ ಹಣ್ಣುಗಳನ್ನು ತೆಗೆದುಕೊಂಡು, ಅವುಗಳನ್ನು ಅರ್ಧ ಭಾಗವಾಗಿ ಕತ್ತರಿಸಿ. ಬೀಜಗಳನ್ನು ತೆಗೆದುಹಾಕಿ. ನಂತರ ಕೋಕಂ ಹಣ್ಣುಗಳನ್ನು ನುಣ್ಣಗೆ ಪೇಸ್ಟ್ ಆಗಿ ಮಾಡಿಕೊಳ್ಳಿ. ನಂತರ ಕಲ್ಲು ಸಕ್ಕರೆ ಪಾಕವನ್ನು ತಯಾರಿಸಿ ಕೋಕಂ ಪೇಸ್ಟ್‌ಗೆ ಸುರಿಯಿರಿ, ರುಚಿಗೆ ತಕ್ಕಂತೆ ಜೀರಿಗೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಈ ಪೇಸ್ಟ್‌ನ 2-3 ಚಮಚವನ್ನು ಒಂದು ಲೋಟದಲ್ಲಿ ಸೇರಿಸಿ. ಅದಕ್ಕೆ ಬೇಕಾದಷ್ಟು ನೀರು ಸೇರಿಸಿಕೊಂಡು ಜ್ಯೂಸ್ ಕುಡಿಯಿರಿ.
9. ಕಬ್ಬಿನ ಹಾಲು ಬೇಸಿಗೆಯಲ್ಲಿ ತಾಜಾ ಕಬ್ಬಿನ ರಸವನ್ನು ಕುಡಿಯಿರಿ. ಇದು ನಿಮ್ಮ ದೇಹಕ್ಕೆ ಅತ್ಯುತ್ತಮ ಶಕ್ತಿ ನೀಡುತ್ತದೆ. ಬಾಯಾರಿಕೆಯನ್ನು ಕೂಡ ನಿವಾರಿಸುತ್ತದೆ.
10. ಎಳನೀರು ಬೇಸಿಗೆಯಲ್ಲಿ ದಿನವೂ ಬೆಳಿಗ್ಗೆ ಅಥವಾ ಮಧ್ಯಾಹ್ನದ ಊಟದ ನಂತರ ಎರಡು ಗಂಟೆ ಬಿಟ್ಟು (ಸಂಜೆ ಸುಮಾರು 4 ಗಂಟೆಗೆ) ಎಳನೀರು ಸೇವಿಸಿ.
ಇದನ್ನೂ ಓದಿ: Health Tips: ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸಬಾರದಾ..!