AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lok Sabha Elections 2024: ಲಕ್ಷ್ಮಣ ಸವದಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಚಿದಾನಂದ ಸವದಿ‌ಗೆ ಟಿಕೆಟ್ ನೀಡುವ ಸಾಧ್ಯತೆ

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಮಾತ್ರ ಬಾಕಿ ಇವೆ. ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ಚಿಕ್ಕೋಡಿ ಕ್ಷೇತ್ರಕ್ಕೆ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ‌ ಹಾಘೂ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ ಅವರ ಹೆಸರುಗಳು ಕೇಳಿ ಬಂದಿವೆ. ಲಕ್ಷ್ಮಣ ಸವದಿಯನ್ನು ಕಾಂಗ್ರೆಸ್​ನಲ್ಲೇ ಉಳಿಸಿಕೊಳ್ಳಲು ಪುತ್ರನಿಗೆ ಟಿಕೆಟ್ ನೀಡಲಾಗುತ್ತೆ ಎನ್ನಲಾಗುತ್ತಿದೆ.

Lok Sabha Elections 2024: ಲಕ್ಷ್ಮಣ ಸವದಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಚಿದಾನಂದ ಸವದಿ‌ಗೆ ಟಿಕೆಟ್ ನೀಡುವ ಸಾಧ್ಯತೆ
ಚಿದಾನಂದ ಸವದಿ‌, ಲಕ್ಷ್ಮಣ ಸವದಿ
Sahadev Mane
| Updated By: ಆಯೇಷಾ ಬಾನು|

Updated on: Feb 09, 2024 | 9:53 AM

Share

ಬೆಳಗಾವಿ, ಫೆ.09: ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು ತೂಗಿ ಲೋಕಸಭಾ ಟಿಕೆಟ್ ನೀಡಲು ಮುಂದಾಗಿದೆ. ಚಿಕ್ಕೋಡಿ ಕ್ಷೇತ್ರಕ್ಕೆ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ‌ ಹಾಘೂ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ ಅವರ ಹೆಸರುಗಳು ಕೇಳಿ ಬಂದಿವೆ. ಬಿಜೆಪಿ ಪಕ್ಷದತ್ತ ವಾಲುತ್ತಿರುವ ಸವದಿಯನ್ನ ಪಕ್ಷದಲೇ ಉಳಿಸಿಕೊಳ್ಳಲು ಪುತ್ರನಿಗೆ ಟಿಕೆಟ್ ನೀಡಬಹುದು ಎನ್ನಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಈಗಾಗಲೇ ಕಾಂಗ್ರೆಸ್‌ಗೆ ಟಾಟಾ ಮಾಡಿದ್ದಾರೆ. ಆದರೆ ಶೆಟ್ಟರ್ ಬಿಜೆಪಿ ಮರು ಸೇರ್ಪಡೆ ಬೆನ್ನಲ್ಲೇ ಬಿಜೆಪಿಯಿಂದ ಬಂದಿದ್ದ ಲಕ್ಷ್ಮಣ ಸವದಿ ಅವರು ಕೂಡ ಕಾಂಗ್ರೆಸ್‌ನಿಂದ ಮತ್ತೆ ಬಿಜೆಪಿಗೆ ವಾಪಸ್ ಹೋಗುತ್ತಾರೆ ಎಂಬ ವದಂತಿ ಹರಿದಾಡುತ್ತಿದೆ. ಹೀಗಾಗಿ ಲಕ್ಷ್ಮಣ ಸವದಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದ್ದು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ‌ಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಅಲ್ಲದೆ ಲಕ್ಷ್ಮಣ ಸವದಿ ಪುತ್ರ ಸ್ಪರ್ಧೆ ಮಾಡಿದ್ರೇ ಸುಲಭವಾಗಿ ಚಿಕ್ಕೋಡಿ ಗೆಲ್ಲಬಹುದು. ಚಿಕ್ಕೋಡಿ ಲೋಕಸಭಾ ಕ್ಷೇತ್ರ ಸೇರಿದಂತೆ ಅಕ್ಕಪಕ್ಕದ ಕ್ಷೇತ್ರದ ಮೇಲೆಯೂ ಸವದಿ ಪ್ರಭಾವ ಇದೆ. ಮಗನಿಗೆ ಟಿಕೆಟ್ ಕೊಟ್ಟಿದ್ದೆ ಆದ್ರೆ ಸವದಿ ಆ್ಯಕ್ಟೀವ್ ಆಗಿ ಕೆಲಸ ಮಾಡಿ ಇನ್ನಷ್ಟು ಸೀಟ್ ಗೆಲ್ಲಲು ಸಹಕಾರಿಯಾಗಲಿದ್ದಾರೆ. ಚಿದಾನಂದ ಸವದಿಗೆ ಟಿಕೆಟ್ ಕೊಟ್ಟರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತೆ. ಬಿಜೆಪಿ ನಾಯಕರು ಸವದಿ ಸೆಳೆಯುವುದಕ್ಕೆ ಸುಲಭವಾಗಿ ಬ್ರೇಕ್ ಹಾಕಿದಂತಾಗುತ್ತೆ. ಸವದಿ ಕಾಂಗ್ರೆಸ್ ನಲ್ಲಿ ಇನ್ನಷ್ಟು ಆ್ಯಕ್ಟೀವ್ ಆಗಿ ಕೆಲಸ ಮಾಡಲು ಅನುಕೂಲವಾಗುತ್ತೆ ಎಂದು ಕಾಂಗ್ರೆಸ್ ಚಿಂತಿಸುತ್ತಿದ್ದು ಚಿದಾನಂದ ಸವದಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: Lok Sabha Elections 2024: ದಕ್ಷಿಣ ಕನ್ನಡ ಕಾಂಗ್ರೆಸ್​​ನಲ್ಲಿ ಟಿಕೆಟ್​ಗೆ ಪೈಪೋಟಿ, ಮುನ್ನೆಲೆಗೆ ಬಂತು ಯುಟಿ ಖಾದರ್ ಹೆಸರು!

ಇನ್ನು ಮತ್ತೊಂದೆಡೆ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಗಣೇಶ್ ಹುಕ್ಕೇರಿ ಅವರ ಹೆಸರು ಕೂಡ ಹೇಳಿ ಬಂದಿದೆ. ಗಣೇಶ್ ಹುಕ್ಕೇರಿ, ಜೊಲ್ಲೆ ಕುಟುಂಬದ ವಿರುದ್ಧ ಪ್ರಬಲ ಸ್ಪರ್ಧಿ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಮತ್ತು ಪುತ್ರ ಗಣೇಶ್ ಹುಕ್ಕೇರಿ ಉತ್ತಮ ನಂಟು, ಬಾಂಧವ್ಯ ಹೊಂದಿದ್ದಾರೆ. ಗೆಲ್ಲಿಸಿದ್ರೇ ಕೆಲಸ ಮಾಡ್ತಾರೆ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತೆ ಅನ್ನೋ ಜನರ ಮನಸ್ಥಿತಿಗೆ ಪೂರಕವಾಗುತ್ತೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಗಣೇಶ್ ಹುಕ್ಕೇರಿಯನ್ನ ಶಾಂತ ಮಾಡಿದಂತಾಗುತ್ತೆ. ಗೆಲ್ಲುವ ದೃಷ್ಟಿಕೋನದಿಂದ ನೋಡಿದ್ರೆ ಗಣೇಶ್ ಹುಕ್ಕೇರಿಗೆ ಟಿಕೆಟ್ ಕೊಟ್ರೆ ಹೆಚ್ಚಿನ ಶ್ರಮ ಹಾಕದೇ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಇದೆ. ಹೀಗಾಗಿ ಗಣೇಶ್ ಹುಕ್ಕೇರಿ ಹೆಸರು ಪ್ರಸ್ತಾಪ ಆಗಿದೆ. ಆದರೆ ಫೈನಲ್ ಆಗಿ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಯಾರಿಗೆ ಕೊಡುತ್ತಾರೆ ಎಂಬುವುದು ಕುತೂಹಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ