ಫ್ಲೈ ಓವರ್ ಇಲ್ಲದ್ದಕ್ಕೆ ವಾಹನ ಡಿಕ್ಕಿಯಾಗಿ ವ್ಯಕ್ತಿ ಸಾವು; ತಹಶೀಲ್ದಾರ್ ಕಚೇರಿ ಮುಂದೆ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ
ಸೇತುವೆ ಇಲ್ಲದಕ್ಕೆ ಸಾಕಷ್ಟು ಅಪಘಾತ ಆಗುತ್ತಿವೆ. ಕೂಡಲೇ ಸೇತುವ ನಿರ್ಮಾಣ ಮಾಡುವಂತೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ. ರಾಮಚಂದ್ರ ಮೃತದೇಹ ತಹಶೀಲ್ದಾರ್ ಕಚೇರಿಯ ಮುಂದೆ ಇಟ್ಟು ಪ್ರತಿಭಟನೆಗೆ ಮುಂದಾಗಿದ್ದು, ತಹಶೀಲ್ದಾರ್ ಸೇತುವೆ ನಿರ್ಮಾಣದ ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸಿದ್ದಾರೆ.
ಬೆಳಗಾವಿ, ಸೆ.21: ಫ್ಲೈ ಓವರ್ ಇಲ್ಲದ್ದಕ್ಕೆ ರಸ್ತೆ ದಾಟುವಾಗ ವಾಹನ ಡಿಕ್ಕಿಯಾಗಿ ವ್ಯಕ್ತಿ ಸಾವನ್ನಪ್ಪಿದ್ದು, ಈ ಹಿನ್ನಲೆ ಮೃತನ ಶವ ತಂದು ತಹಶೀಲ್ದಾರ್(Tahasildar)ಕಚೇರಿ ಮುಂದಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿ(Belagavi) ಜಿಲ್ಲೆಯ ಕಿತ್ತೂರು ತಹಶೀಲ್ದಾರ್ ಕಚೇರಿ ಮುಂದೆ ನಡೆದಿದೆ. ರಾಮಚಂದ್ರ ಮಣಿಯಾರ(60) ರಸ್ತೆ ದಾಟುವಾಗ ವಾಹನ ಹರಿದು ಮೃತಪಟ್ಟ ರ್ದುದೈವಿ. ಹೌದು, ಗ್ರಾಮಗಳಿಗೆ ತೆರಳಲು ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು-ಪುಣೆ ದಾಟಬೇಕಾದ ಪರಿಸ್ಥಿತಿ ಇದೆ.
ಇನ್ನು ಸೇತುವೆ ಇಲ್ಲದಕ್ಕೆ ಸಾಕಷ್ಟು ಅಪಘಾತ ಆಗುತ್ತಿವೆ. ಕೂಡಲೇ ಸೇತುವ ನಿರ್ಮಾಣ ಮಾಡುವಂತೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ. ರಾಮಚಂದ್ರ ಮೃತದೇಹ ತಹಶೀಲ್ದಾರ್ ಕಚೇರಿಯ ಮುಂದೆ ಇಟ್ಟು ಪ್ರತಿಭಟನೆಗೆ ಮುಂದಾಗಿದ್ದು, ತಹಶೀಲ್ದಾರ್ ಸೇತುವೆ ನಿರ್ಮಾಣದ ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸಿದ್ದಾರೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ದಕ್ಷಿಣ ಕನ್ನಡ: ಕಾರು, ಬೈಕ್ ನಡುವೆ ಡಿಕ್ಕಿ; ಓರ್ವ ಯುವತಿ ಸಾವು; ಅಪಘಾತ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ
ಪೊಲೀಸ್ ಜೀಪ್ಗೆ ಗುದ್ದಿದ ಮರಳು ತುಂಬಿದ ಲಾರಿ
ಕೋಲಾರ: ಮುಳಬಾಗಿಲು ತಾಲೂಕಿನ ಹನುಮನಹಳ್ಳಿ ಟೋಲ್ನಲ್ಲಿ ಪೊಲೀಸ್ ಜೀಪ್ಗೆ ಹಿಂದಿನಿಂದ ಮರಳು ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಪೊಲೀಸ್ ಜೀಪ್ನಲ್ಲಿದ್ದ ಡಿವೈಎಸ್ಪಿ ಗೋಪಾಲ ನಾಯ್ಕ್ ಅವರಿಗೆ ಯಾವುದೇ ಪ್ರಾಣಾಪಾಯ ಆಗಿಲ್ಲ. ಇನ್ನು ಅಪಘಾತದ ಬಳಿಕ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Thu, 21 September 23