ಮೈಸೂರಿನಲ್ಲಿ ಬೀದಿ ಬದಿ ಹಾಡುತ್ತಾ ಸ್ವಾಭಿಮಾನಿ ಜೀವನ ನಡೆಸ್ತಿದ್ದ ಕಣ್ಣು ಕಾಣದ ವಿಶೇಷ ಚೇತನರಿಗೂ ಮೋಸ ಮಾಡಿದ ಐನಾತಿ ಆಸಾಮಿ!

Mysore News: ಈ ಮೂವರೂ ಕಣ್ಣು ಕಾಣದಿದ್ದರು ಭಿಕ್ಷೆ ಬೇಡದೆ ಬೀದಿ ಬದಿಯಲ್ಲಿ ಹಾಡು ಹಾಡುತ್ತಾ ಜನರನ್ನು ರಂಜಿಸುತ್ತಾ ಜನರು ಕೊಟ್ಟ ಹಣದಿಂದ ಜೀವನ ನಡೆಸುತ್ತಿದ್ದ ಸ್ವಾಭಿಮಾನಿಗಳು. ಇವರಿಗೆ ಪರಿಚಯದ ಮೈಸೂರಿನ ಹಿನಕಲ್ ನಿವಾಸಿ ಕೆಂಪಣ್ಣ ಎಂಬಾತ ಮೋಸ ಮಾಡಿದ್ದಾನೆ.

ಮೈಸೂರಿನಲ್ಲಿ ಬೀದಿ ಬದಿ ಹಾಡುತ್ತಾ ಸ್ವಾಭಿಮಾನಿ ಜೀವನ ನಡೆಸ್ತಿದ್ದ ಕಣ್ಣು ಕಾಣದ ವಿಶೇಷ ಚೇತನರಿಗೂ ಮೋಸ ಮಾಡಿದ ಐನಾತಿ ಆಸಾಮಿ!
ಕಣ್ಣು ಕಾಣದ ವಿಶೇಷ ಚೇತನರಿಗೂ ಮೋಸ ಮಾಡಿದ ಐನಾತಿ ಆಸಾಮಿ!
Follow us
TV9 Web
| Updated By: Digi Tech Desk

Updated on:Dec 13, 2022 | 2:06 PM

ಪ್ರತಿನಿತ್ಯ ಮೋಸ ವಂಚನೆ ಪ್ರಕರಣಗಳ ಬಗ್ಗೆ‌ ಕೇಳಿರ್ತೀರಾ, ನೋಡಿರ್ತೀರಾ! ಆದ್ರೆ ಮೈಸೂರಿನಲ್ಲಿ ಬೆಳಕಿಗೆ ಬಂದಿರುವ ಪ್ರಕರಣ ನಿಜಕ್ಕೂ ಅಮಾನವೀಯ. ಹೃದಯಹೀನರು ಕಣ್ಣು ಕಾಣದವರಿಗೂ ವಂಚನೆ ಮಾಡಿದ್ದಾರೆ. ಅದೂ ಪರಿಚಯದವನಿಂದಲೇ ಮೋಸವಾಗಿದ್ದು (Fraud) ಅಂಧರು‌ (visually impaired) ಈಗ ಕಣ್ಣೀರಿಡುವಂತಾಗಿದೆ. ರಸ್ತೆ ಬದಿಯಲ್ಲಿ ಹಾಡು ಹೇಳುತ್ತಾ ಕುಳಿತಿರೋ ಕಣ್ಣು ಕಾಣದ ವಿಶೇಷ ಚೇತನರು ಇವರು. ಹೆಸರುಗಳು… ಕುಮಾರ, ಅವರ ಪತ್ನಿ‌ ಸುಧಾಮಣಿ ಹಾಗೂ ಭಾಸ್ಕರ. ಇವರೆಲ್ಲಾ ಮೈಸೂರು ಜಿಲ್ಲೆ (mysore) ಪಿರಿಯಾಪಟ್ಟಣ ತಾಲ್ಲೂಕಿನ ನಿವಾಸಿಗಳು. ಕಣ್ಣು ಕಾಣದಿದ್ದರು (blind) ಭಿಕ್ಷೆ ಬೇಡದೆ ಬೀದಿ ಬದಿಯಲ್ಲಿ ಹಾಡು ಹಾಡುತ್ತಾ ಜನರನ್ನು ರಂಜಿಸುತ್ತಾ ಜನರು ಕೊಟ್ಟ ಹಣದಿಂದ ಜೀವನ ನಡೆಸುತ್ತಿದ್ದ ಸ್ವಾಭಿಮಾನಿಗಳು.

ಈ ಮೂವರು ಮೈಸೂರಿನ ವಿವಿಧ ಬಡಾವಣೆ ಮುಖ್ಯ ರಸ್ತೆ ಹಾಗೂ ವೃತ್ತಗಳಲ್ಲಿ ಹಾಡು ಹಾಡುತ್ತಿದ್ದರು. ಭಕ್ತಿ ಗೀತೆಗಳು, ಸಿನಿಮಾ ಗೀತೆಗಳನ್ನು ಹಾಡುತ್ತಿದ್ದರು. ಇವರ ಹಾಡಿಗೆ ಮನಸೋತು ಜನರು ತಮ್ಮ‌ ಕೈಲಾದಷ್ಟು ಹಣವನ್ನು ನೀಡುತ್ತಿದ್ದರು. ಈ ರೀತಿ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಿದ್ದ ಇವರಿಗೆ ಪರಿಚಯದ ಮೈಸೂರಿನ ಹಿನಕಲ್ ನಿವಾಸಿ ಕೆಂಪಣ್ಣ ಎಂಬಾತ ಮೋಸ ಮಾಡಿದ್ದಾನೆ.

ಹೌದು ಕೆಂಪಣ್ಣ ಇವರ ಪರಿಚಯದವನೇ ಆಗಿದ್ದ. ಡಬ್ಬ ತಮಟೆ ಬಳಸಿ ಹಾಡು ಹಾಡುತ್ತಿದ್ದವರಿಗೆ ತನ್ನ ಬಳಿ ಹೊಸ ಮ್ಯೂಸಿಕ್ ಸಿಸ್ಟಂ ಇದೆ. ಅದರ ಬೆಲೆ 8 ಸಾವಿರ. ನಿಮಗೆ ಅಂತಾ 6 ಸಾವಿರಕ್ಕೆ ಕೊಡುತ್ತೇನೆ ಅಂತಾ ಹೇಳಿದ್ದಾನೆ. ಆತನ ಮಾತು ನಂಬಿದ ಅಂಧರು ಮ್ಯೂಸಿಕ್ ಸಿಸ್ಟಂ ಖರೀದಿಸಿದ್ದಾರೆ. ಮ್ಯೂಸಿಕ್ ಸಿಸ್ಟಂ ಖರೀದಿ ಮಾಡಿದ ಒಂದೇ ದಿನಕ್ಕೆ ಕೈ ಕೊಟ್ಟಿದೆ.

Also Read: ಸ್ವತಃ ತಹಶೀಲ್ದಾರ್ ನಾಹೀದ ಕುಟುಕು ಕಾರ್ಯಾಚರಣೆ ನಡೆಸಿದರು, ಕೊರಟಗೆರೆ ಆಂಬ್ಯುಲೆನ್ಸ್ ಸಿಬ್ಬಂದಿಯ ಬೇಜವಾಬ್ದಾರಿತನ ಬಯಲಿಗೆ ಬಿತ್ತು!

ಈ ಬಗ್ಗೆ ಕೆಂಪಣ್ಣನನ್ನು ಸಂಪರ್ಕಿಸಲು ಇವರೆಲ್ಲಾ ಪ್ರಯತ್ನಪಟ್ಟಿದ್ದಾರೆ. ಆದರೆ ಕೆಂಪಣ್ಣ ಇವರ ಕೈಗೆ ಸಿಗುತ್ತಿಲ್ಲ. ಮೊಬೈಲ್‌ಗೆ ಕರೆ ಮಾಡಿದ್ರು ಕರೆ ಸ್ವೀಕರಿಸುತ್ತಿಲ್ಲ. ಇದರಿಂದ ಇವರೆಲ್ಲಾ ಕಂಗಾಲಾಗಿದ್ದಾರೆ. ಇರಲು ಮನೆಯೂ ಇಲ್ಲದೆ, ಕಣ್ಣು ಕಾಣದೆ ಏನು‌ ಮಾಡಬೇಕೆಂದು ತೋಚದೆ ಕಂಗಾಲಾಗಿದ್ದಾರೆ. ಕೆಂಪಣ್ಣಗಾಗಿ ಎಲ್ಲಾ ಕಡೆ ಹುಡುಕಾಟ‌ ನಡೆಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಇದರಿಂದ ಮುಂದೇನೂ‌ ಅಂತಾ ಅಂಧರು ಕಂಗಾಲಾಗಿದ್ದಾರೆ. ದಯಮಾಡಿ ನಮಗೆ ಸಹಾಯ ಮಾಡಿ ಅಂತಾ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.

ಕಣ್ಣು ಕಾಣದ ಇವರಿಗೆ ದಿಕ್ಕೇ ತೋಚದಂತಾಗಿತ್ತು. ಹೀಗಾಗಿ‌ ಟಿವಿ 9 ವತಿಯಿಂದ ಇವರ ಬಗ್ಗೆ ಮೈಸೂರಿನ ವಿಜಯ ನಗರ ಪೋಲಿಸರಿಗೆ‌ ವಿಷಯ ತಿಳಿಸಿ ಮೋಸ ಮಾಡಿದ ಕೆಂಪಣ್ಣನನ್ನು ಪತ್ತೆ ಮಾಡಿ ಕೊಡುವಂತೆ ಮನವಿ ಮಾಡಲಾಗಿದೆ. ಪೊಲೀಸರು ಸಹಾ ಕೆಂಪಣ್ಣನನ್ನು ಹುಡುಕಿ ಅಂಧರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ಇದೆಲ್ಲಾ ಏನೇ ಇರಲಿ ಕಣ್ಣು ಕಾಣದವರನ್ನೂ ಬಿಡದೆ ಮೋಸ‌ ಮಾಡೋ ಇಂತಹವರಿಗೆ ಏನನ್ನ ಬೇಕೋ ಗೊತ್ತಿಲ್ಲ. (ವರದಿ: ರಾಮ್, ಟಿವಿ 9, ಮೈಸೂರು)

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:49 pm, Tue, 13 December 22

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್