AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: 140 ಅಡಿ ಕಂದಕಕ್ಕೆ ಉರುಳಿ ಬಿದ್ದರೂ ಬದುಕಿ ಬಂದ ಯುವಕ; ಗೋಕಾಕ್ ಫಾಲ್ಸ್‌ನಲ್ಲಿ ಅಚ್ಚರಿ ಘಟನೆ

ಇಂದು ಬೆಳಗಿನಜಾವ 4 ಗಂಟೆಗೆ ಪ್ರದೀಪ್​ ಪ್ರಜ್ಞೆ ಬಂದ ಮೇಲೆ ತಾನೇ ಸ್ನೇಹಿತರಿಗೆ ಫೋನ್ ಮಾಡಿದ್ದಾರೆ. ಬಳಿಕ ಗೋಕಾಕ್​ನ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ಹಾಗೂ ಪೊಲೀಸರ ತಂಡ ಪ್ರದೀಪನನ್ನು ರಕ್ಷಣೆ ಮಾಡಿದೆ. ಸದ್ಯ ಪ್ರದೀಪನನ್ನು ರಕ್ಷಿಸಿ ಗೋಕಾಕದ ಖಾಸಗಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ.

ಬೆಳಗಾವಿ: 140 ಅಡಿ ಕಂದಕಕ್ಕೆ ಉರುಳಿ ಬಿದ್ದರೂ ಬದುಕಿ ಬಂದ ಯುವಕ; ಗೋಕಾಕ್ ಫಾಲ್ಸ್‌ನಲ್ಲಿ ಅಚ್ಚರಿ ಘಟನೆ
ಗೋಕಾಕ್​ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ಹಾಗೂ ಪೊಲೀಸರ ತಂಡ ಪ್ರದೀಪನನ್ನು ರಕ್ಷಣೆ ಮಾಡಿದೆ
TV9 Web
| Updated By: preethi shettigar|

Updated on:Oct 03, 2021 | 9:24 AM

Share

ಬೆಳಗಾವಿ:  ಕಲ್ಲು ಬಂಡೆಗಳ ನಡುವೆ 140 ಅಡಿ ಕಂದಕಕ್ಕೆ‌ ಬಿದ್ದರೂ ಯುವಕ ಪವಾಡಸದೃಶ್ಯ ಎಂಬಂತೆ ಬದುಕಿ ಬಂದಿದ್ದಾನೆ. ಸ್ನೇಹಿತರೊಂದಿಗೆ ಬೆಳಗಾವಿ ಜಿಲ್ಲೆಯ ಗೋಕಾಕ್​ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಪ್ರದೀಪ ಸಾಗರ್, ಆಯತಪ್ಪಿ ನಿನ್ನೆ (ಅಕ್ಟೋಬರ್​ 2) ಸಂಜೆ 140 ಅಡಿ ಆಳದ ಕಂದಕಕ್ಕೆ ಬಿದ್ದಿದ್ದ. ಕೂಡಲೇ ಪ್ರದೀಪ್​ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಗೋಕಾಕ್​ ಪೊಲೀಸರು ಹಾಗೂ ಅಗ್ನಿಶಾಮಕ ದಳದ‌ ಸಿಬ್ಬಂದಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ. ಕತ್ತಲಾದ ಹಿನ್ನೆಲೆ ಕಾರ್ಯಾಚರಣೆ ‌‌ಸ್ಥಗಿತಗೊಳಿಸಿ ನಿನ್ನೆ ಸಿಬ್ಬಂದಿಗಳು ವಾಪಸ್ ತೆರಳಿದ್ದರು. 140 ಅಡಿ ಆಳದ ಕಂದಕಕ್ಕೆ ಬಿದ್ದ ಪ್ರದೀಪ ಪ್ರಜ್ಞೆ ಕಳೆದುಕೊಂಡಿದ್ದರು. ಹೀಗಾಗಿ ಇಡೀ ರಾತ್ರಿ ಕಂದಕದಲ್ಲೆ ಪ್ರದೀಪ ಸಾಗರ್ ಕಾಲ ಕಳೆಯಬೇಕಾಗಿತು.

ಆದರೆ ಇಂದು ಬೆಳಗಿನಜಾವ 4 ಗಂಟೆಗೆ ಪ್ರದೀಪ್​ ಪ್ರಜ್ಞೆ ಬಂದ ಮೇಲೆ ತಾನೇ ಸ್ನೇಹಿತರಿಗೆ ಫೋನ್ ಮಾಡಿದ್ದಾರೆ. ಬಳಿಕ ಗೋಕಾಕ್​ದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ಹಾಗೂ ಪೊಲೀಸರ ತಂಡ ಪ್ರದೀಪನನ್ನು ರಕ್ಷಣೆ ಮಾಡಿದೆ. ಸದ್ಯ ಪ್ರದೀಪನನ್ನು ರಕ್ಷಿಸಿ ಗೋಕಾಕದ ಖಾಸಗಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಬೆಳಗಾವಿಯ ನಗರದಲ್ಲಿ ವಾಸವಿದ್ದ ಪ್ರದೀಪ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: Meghalaya: ಮಧ್ಯರಾತ್ರಿ ನದಿಗೆ ಬಿದ್ದ ಬಸ್​; ಚಾಲಕ ಸೇರಿ 6 ಮಂದಿ ದುರ್ಮರಣ, 16 ಪ್ರಯಾಣಿಕರ ರಕ್ಷಣೆ

120 ಅಡಿ ಆಳಕ್ಕೆ ಬಿದ್ದ ನಾಯಿ ರಕ್ಷಣೆ; ಶಿವಮೊಗ್ಗ ಜಿಲ್ಲೆಯ ಅಗ್ನಿಶಾಮಕ ದಳದ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ

Published On - 9:24 am, Sun, 3 October 21