ಶಾಸಕ ಜಮೀರ್ ಅಹ್ಮದ್​​ ನಮ್ಮ ಪಕ್ಷದ ಬಾಹುಬಲಿ ಇದ್ದಂತೆ: ಸತೀಶ್ ಜಾರಕಿಹೊಳಿ

ಶಾಸಕ ಜಮೀರ್ ಅಹ್ಮದ್​​ ನಮ್ಮ ಪಕ್ಷದ ಬಾಹುಬಲಿ ಇದ್ದಂತೆ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಹೇಳಿದ್ದಾರೆ.

ಶಾಸಕ ಜಮೀರ್ ಅಹ್ಮದ್​​ ನಮ್ಮ ಪಕ್ಷದ ಬಾಹುಬಲಿ ಇದ್ದಂತೆ: ಸತೀಶ್ ಜಾರಕಿಹೊಳಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೋಳಿ
TV9kannada Web Team

| Edited By: Vivek Biradar

Jul 23, 2022 | 3:58 PM

ಬೆಳಗಾವಿ:  ಶಾಸಕ ಜಮೀರ್ ಅಹ್ಮದ್ (Zameer Ahmed)​​ ನಮ್ಮ ಪಕ್ಷದ ಬಾಹುಬಲಿ ಇದ್ದಂತೆ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಬೆಳಗಾವಿಯಲ್ಲಿ (Belagavi) ಹೇಳಿದ್ದಾರೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಚಿಂತನಾ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಮಾತನಾಡಿ ಆಗಸ್ಟ  3ರಂದು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಹುಟ್ಟುಹಬ್ಬದ ಕಾರ್ಯಕ್ರಮ ಇದೆ. ಕಾರ್ಯಕರ್ತರನ್ನು ಆಹ್ವಾನಿಸಲು ಜಮೀರ್ ಬಂದಿದ್ದಾರೆ. ಜಮೀರ್ ಅಹ್ಮದ್ ನಮ್ಮ ಪಕ್ಷದ ಉನ್ನತ ನಾಯಕ. ಜಮೀರ್ ಅಹ್ಮದ್ ಅವರನ್ನು ನೀವು ಎಲ್ಲ ರೀತಿಯಿಂದ ಬೆಳಸಬೇಕು. ಜಾಫರ್ ಶರೀಫ್ ಬಳಿಕ ಮುಸ್ಲಿಂ ನಾಯಕರಾಗುವ ಅವಕಾಶ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು .

ಒಂಬತ್ತು ತಿಂಗಳಲ್ಲಿ ಚುನಾವಣೆ ಬರ್ತಾಯಿದೆ, ಈ ಚುನಾವಣೆಯಲ್ಲಿ ಒಕ್ಕಟಾಗಬೇಕು ನೀವು. ನೀವೆಲ್ಲಾ ಬರುವ ಚುನಾವಣೆಯಲ್ಲಿ ಗಟ್ಟಿಯಾಗಿರಬೇಕು ಅಂತಾ ಮನವಿ ಮಾಡುತ್ತೇವೆ. ಎಲ್ಲೇ ಹೋದರೈ ಜಮೀರ್ ಐದರಿಂದ ಹತ್ತು ಲಕ್ಷ ಜೇಬಿನಲ್ಲಿರುತ್ತೆ‌. ನಮ್ಮ ಬಳಿ ಅಷ್ಟು ಹಣ ಇಟ್ಕೊಳ್ಳುವುದಿಲ್ಲ. ವಾಪಸ್ ಹೋಗುವಾಗ ಖಾಲಿ ಜೇಬಿನಿಂದ ಹೋಗುತ್ತಾರೆ. ಇಡಿ, ಐಟಿ ನಿಮ್ಮ ಹಿಂದೆ ಬಿದ್ದಿದೆ ಆದರೇ ನಿಮ್ಮ ಜತೆಗೆ ಪಕ್ಷ ಮತ್ತು ಸಮುದಾಯ ಇದೆ. ಮುಂದಿನ ದಿನಗಳಲ್ಲಿ ಅಚ್ಚೆದಿನ್ ಬರುತ್ತೆ ಕಾಯೀರಿ ಎಂದು ಜಮೀರ್​ ಅಹ್ಮದ್​ಗೆ ಜಾಕರಿಹೊಳಿ ಹೇಳಿದ್ದಾರೆ.

ನಿಮ್ಮ ಶಕ್ತಿ ಕಾಂಗ್ರೆಸ್ ಶಕ್ತಿ ಎಲ್ಲರೂ ಒಗ್ಗಟ್ಟಾಗಿ ಇರೀ. ಮುಂದಿನ ದಿನಗಳಲ್ಲಿ ಜಮೀರ್ ಅಹ್ಮದ್ ಬೆಳಗಾವಿಗೆ ಆಗಮಿಸುತ್ತಾರೆ. ನಿಮಗೂ ಒಬ್ಬರು ಲೀಡರ್ ಬೇಕಾಗುತ್ತೆ ಬರ್ತಾರೆ ಎಲ್ಲ ಕಡೆ ಸಭೆಗಳನ್ನ ಮಾಡುತ್ತಾರೆ. ಅಲ್ಪಸಂಖ್ಯಾತ ಸಮುದಾಯದಿಂದ ಜಮೀರ್ ಅಹ್ಮದ್ ನಾವು ಕೂಡ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದೇವೆ. ನಮಗೂ ಸಾಕಷ್ಟು ಜನ ಕೇಳುತ್ತಾರೆ ಆದರೇ ನಮ್ಮ ಸರದಿ ಇನ್ನೂ ದೂರ ಇದೆ. ಈಗ ನಮ್ಮ ಜನರಿಗೆ ಸಮಾನತೆ ಬೇಕಾಗಿದೆ ಆ ನಿಟ್ಟಿನಲ್ಲಿ ನಮ್ಮ ಹೋರಾಟ ಇದೆ. ಈಗ ನಮ್ಮದು ಕುರ್ಚಿಗಾಗಿ ಪೈಟ್ ಇಲ್ಲ ಸಮಾನತೆಗಾಗಿ ಎಂದು  ತಿಳಿಸಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada