ಬೆಳಗಾವಿ: ಗಣೇಶ ವಿಸರ್ಜನೆ ಹಿನ್ನೆಲೆ ಈದ್ ಮೆರವಣಿಗೆ ಮುಂದೂಡಿ ಸೌಹಾರ್ದತೆ ಮೆರೆದ ಮುಸ್ಲಿಂ ಮುಖಂಡರು
ಈದ್ ಮಿಲಾದ್ ಮೆರವಣಿಗೆ ಸೆ.16ಕ್ಕೆ ಇದೆ. ಇದೇ ದಿನ ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ ಕೂಡ ನಡೆಯಬೇಕಿದೆ. ಬೆಳಗಾವಿಯಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆ ಬಹಳ ಅದ್ಧೂರಿಯಾಗಿ ನಡೆಯಲಿದ್ದು, ಲಕ್ಷಾಂತರ ಜನ ಸೇರುತ್ತಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಮುಸ್ಲಿಂ ಮುಖಂಡರು ಸಭೆ ನಡೆಸಿ ಈದ್ ಮೆರವಣಿಗೆ ಮುಂದೂಡಲು ತೀರ್ಮಾನಿಸಿದ್ದಾರೆ.
ಬೆಳಗಾವಿ, ಸೆ.08: ಬೆಳಗಾವಿಯಲ್ಲಿ ಮುಸ್ಲಿಂ ಮುಖಂಡರು ಮತ್ತೊಮ್ಮೆ ಸೌಹಾರ್ದತೆ ಸಾರಿದ್ದಾರೆ. ಸೆಪ್ಟೆಂಬರ್16 ರಂದು ಅದ್ಧೂರಿ ಗಣೇಶ ವಿಸರ್ಜನೆ (Ganesha Visarjan) ಮೆರವಣಿಗೆ ಹಿನ್ನೆಲೆ ಸೆಪ್ಟೆಂಬರ್ 16ರಂದು ನಡೆಯಬೇಕಿದ್ದ ಈದ್ (Eid Milad) ಮೆರವಣಿಗೆಯನ್ನು ಮುಂದೂಡಲಾಗಿದೆ. ಸೆಪ್ಟೆಂಬರ್ 22ರಂದು ಈದ್ ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಬೆಳಗಾವಿಯಲ್ಲಿ ಸಭೆ ನಡೆಸಿದ ಮುಸ್ಲಿಂ ಸಮಾಜದ ಧರ್ಮಗುರು ಹಾಗೂ ಮುಖಂಡರು ಒಮ್ಮತದಿಂದ ತೀರ್ಮಾನಿಸಿದ್ದಾರೆ.
ಸೆ. 16 ರಂದು ಸರಳವಾಗಿ ಮನೆಯಲ್ಲಿ ಈದ್ ಮೀಲಾದ್ ಹಬ್ಬ ಆಚರಣೆ ಮಾಡಿ ಸೆ.22ರಂದು ಅದ್ದೂರಿಯಾಗಿ ಮೆರವಣಿಗೆ ಮೂಲಕ ಹಬ್ಬ ಆಚರಣೆಗೆ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಸಭೆಯಲ್ಲಿ ಶಾಸಕ ಆಸೀಫ್ ಸೇಠ್ ಸೇರಿ ಸಮಾಜದ ಹಲವು ಮುಖಂಡರು ಭಾಗಿಯಾಗಿದ್ದರು.
ಇದನ್ನೂ ಓದಿ: ಪೊಲೀಸ್ ಠಾಣೆ ಒಳಗೆ ಎಎಸ್ಐ ಮೇಲೆ ಹಲ್ಲೆ ನಡೆಸಿದ ಯುವಕರು
ಕ್ಯಾಲೆಂಡರ್ ಪ್ರಕಾರ ಈದ್ ಮಿಲಾದ್ ಮೆರವಣಿಗೆ ಸೆ.16ಕ್ಕೆ ಇದೆ. ಇದೇ ದಿನ ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ ಕೂಡ ನಡೆಯಬೇಕಿದೆ. ಬೆಳಗಾವಿಯಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆ ಬಹಳ ಅದ್ಧೂರಿಯಾಗಿ ನಡೆಯಲಿದ್ದು, ಲಕ್ಷಾಂತರ ಜನ ಸೇರುತ್ತಾರೆ. ಈ ವೇಳೆ ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ಶುಕ್ರವಾರ ಸಭೆ ಸೇರಿದ್ದ ಮುಸ್ಲಿಂ ಸಮಾಜದ ಹಿರಿಯರು, ವಿವಿಧ ಕಮಿಟಿಗಳ ಪದಾಧಿಕಾರಿಗಳು ಹಾಗೂ ಧರ್ಮಗುರುಗಳು ಈದ್ ಮಿಲಾದ್ ಮೆರವಣಿಗೆಯನ್ನು ಮುಂದೂಡಲು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.
ಕಳೆದ ವರ್ಷ ಕೂಡ ಈದ್ ಮಿಲಾದ್ ಮತ್ತು ಗಣೇಶೋತ್ಸವ ಮೆರವಣಿಗೆ ಎರಡೂ ಒಟ್ಟಿಗೆ ಬಂದಿದ್ದವು. ಆಗಲೂ ಮುಸ್ಲಿಂ ಮುಖಂಡರು ಈದ್ ಮಿಲಾದ್ ಮೆರವಣಿಗೆ ಮುಂದೂಡಿ ಕೋಮು ಸಾಮರಸ್ಯದ ಸಂದೇಶ ಸಾರಿದ್ದರು. ಈ ವರ್ಷವೂ ಕೂಡ ಅದೇ ನಿರ್ಧಾರ ಕೈಗೊಳ್ಳುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:01 pm, Sun, 8 September 24