ಶಂಕರಲಿಂಗ ಜಾತ್ರೆ ಪ್ರಯುಕ್ತ ಬುಲೆಟ್ ಸೌಂದರ್ಯ ಸ್ಪರ್ಧೆ: ಅದ್ಭುತ ಲುಕ್ಗೆ ಮುಗಿಬಿದ್ದ ಜನತೆ
ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬ್ಯೂಟಿಫುಲ್ ಬುಲೆಟ್ ಬೈಕ್ಗಳು ಹವಾ ಎಬ್ಬಿಸಿದ್ವು. ಇಂದಿನಿಂದ ಸಂಕೇಶ್ವರ ಪಟ್ಟಣದಲ್ಲಿ 3 ದಿನಗಳ ಕಾಲ ಶಂಕರಲಿಂಗ ಜಾತ್ರೆ ಶುರುವಾಗುತ್ತೆ. ಇದ್ರ ಅಂಗವಾಗಿ ನಿನ್ನೆ ಬುಲೆಟ್ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಕರ್ನಾಟಕದಲ್ಲೇ ಮೊದಲ ಬಾರಿಗೆ ಬುಲೆಟ್ ಬೈಕ್ಗಳ ಬ್ಯೂಟಿ ಕಾಂಪಿಟೇಷನ್ ನಡೀತು. 180ಕ್ಕೂ ಅಧಿಕ ಬುಲೆಟ್ ಬೈಕ್ಗಳು ಭಾಗವಹಿಸಿದ್ವು. ಕೆಲವೊಂದರ ಮುಂಭಾಗದಲ್ಲಿ ಡಿಫ್ರೆಂಟ್ ಸ್ಟೀಕರ್ ಹಚ್ಚಿದ್ರೆ, ಇನ್ನೂ ಕೆಲವು ಬುಲೆಟ್ಗಳ ಮೇಲೆ ತಲ್ವಾರ್ ಫಿಕ್ಸ್ ಮಾಡಲಾಗಿತ್ತು. ಹೀಗೆ […]

ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬ್ಯೂಟಿಫುಲ್ ಬುಲೆಟ್ ಬೈಕ್ಗಳು ಹವಾ ಎಬ್ಬಿಸಿದ್ವು. ಇಂದಿನಿಂದ ಸಂಕೇಶ್ವರ ಪಟ್ಟಣದಲ್ಲಿ 3 ದಿನಗಳ ಕಾಲ ಶಂಕರಲಿಂಗ ಜಾತ್ರೆ ಶುರುವಾಗುತ್ತೆ. ಇದ್ರ ಅಂಗವಾಗಿ ನಿನ್ನೆ ಬುಲೆಟ್ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಕರ್ನಾಟಕದಲ್ಲೇ ಮೊದಲ ಬಾರಿಗೆ ಬುಲೆಟ್ ಬೈಕ್ಗಳ ಬ್ಯೂಟಿ ಕಾಂಪಿಟೇಷನ್ ನಡೀತು. 180ಕ್ಕೂ ಅಧಿಕ ಬುಲೆಟ್ ಬೈಕ್ಗಳು ಭಾಗವಹಿಸಿದ್ವು.
ಕೆಲವೊಂದರ ಮುಂಭಾಗದಲ್ಲಿ ಡಿಫ್ರೆಂಟ್ ಸ್ಟೀಕರ್ ಹಚ್ಚಿದ್ರೆ, ಇನ್ನೂ ಕೆಲವು ಬುಲೆಟ್ಗಳ ಮೇಲೆ ತಲ್ವಾರ್ ಫಿಕ್ಸ್ ಮಾಡಲಾಗಿತ್ತು. ಹೀಗೆ ಬಗೆ ಬಗೆ ಬಣ್ಣ.. ಹಾರನ್.. ಸ್ವಚ್ಛವಾಗಿ ಬೈಕ್ ಇಟ್ಕೊಳ್ಳೋದ್ರಿಂದ ಹಿಡಿದು ಎಲ್ಲ ಅಂಶಗಳ ಆಧಾರದ ಮೇಲೆ ಬಹುಮಾನ ವಿತರಿಸಲಾಯ್ತು. ಸ್ಪರ್ಧೆಗೆ ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದಲೂ ಬೈಕ್ಗಳು ಬಂದಿದ್ವು. ಮಿರ ಮಿರ ಮಿಂಚುತ್ತಿದ್ದ ಬೈಕ್ಗಳು ಎಲ್ಲರನ್ನು ಸೆಳೆದ್ವು.
ಬುಲೆಟ್ ರಾಣಿಯರ ಸೌಂದರ್ಯಕ್ಕೆ ಜನ ಮನಸೋತಿದ್ರು. ಅವುಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ರು. ಒಟ್ನಲ್ಲಿ, ಕುಂದಾನಗರಿಯಲ್ಲಿ ಬುಲೆಟ್ ರಾಣಿಯರ ಬ್ಯೂಟಿಫುಲ್ ಕಾಂಪಿಟೇಷನ್ ಮಸ್ತ್ ಆಗಿತ್ತು. ಅದ್ಭುತ ಲುಕ್ ನೋಡಿ ಕಿಕ್ಕಿರಿದು ಸೇರಿದ್ದ ಜನ ಮಜಾ ಮಾಡಿದ್ರು.