ಭಕ್ತರ ಗಮನಕ್ಕೆ: ಯಲ್ಲಮ್ಮ ದೇವಿಗೆ ಸರ್ಪದೋಷ ಅಂತೆ ಕಂತೆಗಳಿಗೆ ತೆರೆ ಎಳೆದ ಅರ್ಚಕ; ದೇವಸ್ಥಾನ ಪ್ರಾಧಿಕಾರ

ಯಲ್ಲಮ್ಮನ ಪಾದುಕೆಯನ್ನು ಸರ್ಪ ನುಂಗಿದೆ ಎಂಬ ವದಂತಿ ಹರಡಿದ ಬೆನ್ನಲ್ಲೇ ಯಾದಗಿರಿಯ ಭೀಮಾನದಿ ತೀರದಲ್ಲಿ ಸಾವಿರಾರೂ ಮಹಿಳೆಯರು ಜಮಾಯಿಸಿದ ಘಟನೆ ನಡೆದಿದೆ. ಆದರೆ ಯಲ್ಲಮ್ಮ ದೇವಿಗೆ ಸರ್ಪದೋಷ ಎಂಬುದು ಸಂಪೂರ್ಣ ಸುಳ್ಳು ಸುದ್ದಿ ಎಂದು ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನದ ಅಧಿಕಾರಿಗಳು ಹಾಗೂ ಅರ್ಚಕರು ಈ ವದಂತಿಯನ್ನು ತಳ್ಳಿಹಾಕಿದ್ದಾರೆ.

ಭಕ್ತರ ಗಮನಕ್ಕೆ: ಯಲ್ಲಮ್ಮ ದೇವಿಗೆ ಸರ್ಪದೋಷ ಅಂತೆ ಕಂತೆಗಳಿಗೆ ತೆರೆ ಎಳೆದ ಅರ್ಚಕ; ದೇವಸ್ಥಾನ ಪ್ರಾಧಿಕಾರ
ಭೀಮಾ ನದಿ ತೀರ
Edited By:

Updated on: Nov 18, 2026 | 3:13 PM

ಮುಖ್ಯಾಂಶಗಳು

  • ಯಲ್ಲಮ್ಮ ದೇವಿಗೆ ಸರ್ಪ ದೋಷ ಎಂಬ ವಿಚಾರ
  • ಇದು ಸುಳ್ಳು ಸುದ್ದಿ ಎಂದ ದೇವಸ್ಥಾನ ಪ್ರಾಧಿಕಾರ
  • ವದಂತಿಗೆ ಯಾರು ಕಿವಿಗೊಡದಂತೆ ಮನವಿ

ಬೆಳಗಾವಿ\ಯಾದಗಿರಿ, ನವೆಂಬರ್​​ 18: ಸವದತ್ತಿ ಯಲ್ಲಮ್ಮಗೆ ಸರ್ಪ ದೋಷ ವದಂತಿ ಹಿನ್ನಲೆ ಯಾದಗಿರಿ ನಗರದ ಹೊರ ಭಾಗದ ಭೀಮಾನದಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಮಹಿಳೆಯರು ಮಂಗಳವಾರ ಪೂಜೆ ಸಲ್ಲಿಸಲು ಮುಗಿಬಿದ್ದ ಘಟನೆ ನಡೆದಿದೆ. ಮಹಿಳೆಯರು ಕೊರಳಿನ ಪಾದುಕೆ ವಿಸರ್ಜಿಸಿ ಹೊಸ ಪಾದುಕೆ ಧರಿಸಿದ್ದಾರೆ. ನಾನಾ ರೀತಿಯ ವಸ್ತುಗಳನ್ನ ಹಾಕಿದ್ದಕ್ಕೆ ನದಿ ಕಲುಷಿತವಾಗಿದೆ‌‌. ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರವೇ ಇದೆಲ್ಲಾ ಸಂಪೂರ್ಣ ಸುಳ್ಳು ಸುದ್ದಿ ಎಂದು ವದಂತಿಯನ್ನ ತಳ್ಳಿ ಹಾಕಿದೆ.

ಯಲ್ಲಮ್ಮಗೆ ಸರ್ಪ ದೋಷ ವದಂತಿ ಸುಳ್ಳು ಸುದ್ದಿ: ರಾಜಶ್ರೀ ಜೈನಾಪುರೆ

ಈ ಕುರಿತಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಾಜಶ್ರೀ ಜೈನಾಪುರೆ ಪ್ರತಿಕ್ರಿಯಿಸಿದ್ದು, ‘ಇದೆಲ್ಲಾ ಸಂಪೂರ್ಣ ಸುಳ್ಳು ಸುದ್ದಿ. ಈ ರೀತಿ ಏನೂ ಆಗುತ್ತಿಲ್ಲ, ಲಕ್ಷಾಂತರ ಭಕ್ತರು ಬರ್ತಿದ್ದಾರೆ. ಯಾದಗಿರಿಯಲ್ಲಿ ಮಾಡುತ್ತಿರುವುದು ಸುಳ್ಳು ಸುದ್ದಿ. ಭಕ್ತಿ, ಶ್ರದ್ಧೆಯಿಂದ ಇಲ್ಲಿಗೆ ಬನ್ನಿ. ಭೀಮಾ ತೀರದಲ್ಲಿ ನಡೆಯುತ್ತಿರುವುದು ಸುಳ್ಳು ವದಂತಿ. ಯಲ್ಲಮ್ಮ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡ್ತಿದ್ದೇವೆ. ಹೂಂಡಿ ಎಣಿಕೆ ಕೂಡ ಆಗುತ್ತಿದ್ದು, ಈ ಬಾರಿ ಹೆಚ್ಚು ಸಂಗ್ರಹ ಆಗಿದೆ. ಇದರಿಂದ ಗೊತ್ತಾಗುತ್ತೆ ಯಲ್ಲಮ್ಮ ದೇವಸ್ಥಾನಕ್ಕೆ ಹೆಚ್ಚು ಭಕ್ತರು ಬರುತ್ತಿರುವುದು. ಆದರೆ ಯಾರು ವದಂತಿಗಳಿತೆ ಕಿವಿಗೊಡಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.

Loading...

ಈ ರೀತಿ ಸುಳ್ಳು ಸುದ್ದಿ ಯಾರು ಹಬ್ಬಿಸಬಾರದು: ಅರ್ಚಕ ರಾಜು ಪಾಟೀಲ್

ಇನ್ನು ಸವದತ್ತಿ ಯಲ್ಲಮ್ಮ ದೇವಸ್ಥಾನದ ಅರ್ಚಕ ರಾಜು ಪಾಟೀಲ್​​ ಪ್ರತಿಕ್ರಿಯಿಸಿದ್ದು, ‘ಯಾದಗಿರಿಯಲ್ಲಿ ಆಚರಣೆ ಮಾಡುತ್ತಿರುವುದು ಗೊತ್ತಾಗಿದೆ. ಅಂತಹ ಆಚರಣೆ ಯಾರು ಮಾಡಬಾರದು. ನಮ್ಮದು ದೊಡ್ಡ ದೇಗುಲ, ಈ ವದಂತಿಗೆ ಯಾರು ಕಿವಿಗೊಡಬೇಡಿ. ಏನೇ ಆಚರಣೆ ಇದ್ದರೂ ನಿಮ್ಮ ನಿಮ್ಮ ಮನೆಯಲ್ಲಿ ಮಾಡಿ. ಇದೆಲ್ಲಾ ಸುಳ್ಳು ವದಂತಿ, ದೇವಿಗೆ ಸರ್ಪ ದೋಷ ಹೇಗೆ ಆಗುತ್ತೆ. ದೇವಿ ಎಲ್ಲರನ್ನೂ ಕಾಪಾಡುವವಳು. ಭಕ್ತರು ಇದಕ್ಕೆ ಕಿವಿಗೊಡಬಾರದು. ಈ ರೀತಿ ಸುಳ್ಳು ಸುದ್ದಿ ಯಾರು ಹಬ್ಬಿಸಬಾರದು’ ಎಂದು ಅವರು ಮನವಿ ಮಾಡಿದ್ದಾರೆ.

ಯಲ್ಲಮ್ಮಗೆ ಯಾವ ದೋಷ ಇರುವುದಿಲ್ಲ: ಯಡಿಯೂರಪ್ಪ

ಸವದತ್ತಿ ಯಲ್ಲಮ್ಮ ದೇವಸ್ಥಾನದ ಯಡಿಯೂರಪ್ಪ ಎಂಬುವವರು ಮಾತನಾಡಿದ್ದು, ‘ಸುಳ್ಳು ವದಂತಿ ಯಾರು ತಪ್ಪಾಗಿ ಬಿಂಬಿಸಬಾರದು. ತಮ್ಮ ಕೊರಳಲ್ಲಿರುವ ಮುತ್ತು, ಮಾಂಗಲ್ಯ ತೆಗೆಯಬಾರದು. ಹೊಸ ಪದ್ದತಿ ಯಾರು ಅನುಸರಿಸಬಾರದು. ಮೊದಲಿನಿಂದ ಯಾವ ರೀತಿ ಅನುಸರಿಸುತ್ತಿದ್ದಿರಿ ಅದನ್ನ ಅನುಸರಿಸಿ. ಸರ್ಪ ದೋಷ ಎನ್ನುವುದು ನಂಬಬಾರದು. ಯಲ್ಲಮ್ಮಗೆ ಯಾವ ದೋಷ ಇರುವುದಿಲ್ಲ’ ಎಂದಿದ್ದಾರೆ.

Yellamma Temple Rumours: 3,000 Women Perform Rituals, Bhima River Polluted
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us