DCC ಬ್ಯಾಂಕ್​ ಪಟ್ಟಕ್ಕೇರೋಕೆ ಪೈಪೋಟಿ, BSYಗೆ ತಲೆನೋವಾದ ಸ್ವಪಕ್ಷೀಯರ ಪ್ರತಿಷ್ಠೆ

ಬೆಳಗಾವಿ: ಕುಂದಾನಗರಿಯಲ್ಲಿ ಚುನಾವಣೆ ನಡೆದ್ರೆ ಕೊತ ಕೊತ ಅನ್ನೋದು ಫಿಕ್ಸ್.. ಅದ್ರಲ್ಲೂ ಪಿಎಲ್​ಡಿ ಬ್ಯಾಂಕ್ ಎಲೆಕ್ಷನ್ ಅಂದಿನ ಸಮ್ಮಿಶ್ರ ಸರ್ಕಾರವನ್ನೇ ಅಲುಗಾಡಿಸಿ ಬಿಟ್ಟಿತ್ತು. ಆದ್ರೀಗ ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿ ಚುನಾವಣೆಗೆ ಬಿಜೆಪಿಯಲ್ಲೇ ಭಾರಿ ಪೈಪೋಟಿ ಶುರುವಾಗಿದೆ. ಇದು ಸಿಎಂ ಬಿಎಸ್​​ವೈ ಸರ್ಕಾರಕ್ಕೆ ಢವ ಢವ ಶುರುವಾಗಿದೆ. ಕುಂದಾನಗರಿಯಲ್ಲಿ ಡಿಸಿಸಿ ಬ್ಯಾಂಕ್​ ಪಟ್ಟಕ್ಕೇರೋಕೆ ‘ಕತ್ತಿ’ವರಸೆ! ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್​ ಚುನಾವಣೆ ಬರೋ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯಲಿದೆ. ಮಾರ್ಚ್ ತಿಂಗಳಿನಿಂದಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. […]

DCC ಬ್ಯಾಂಕ್​ ಪಟ್ಟಕ್ಕೇರೋಕೆ ಪೈಪೋಟಿ, BSYಗೆ ತಲೆನೋವಾದ ಸ್ವಪಕ್ಷೀಯರ ಪ್ರತಿಷ್ಠೆ
Follow us
ಸಾಧು ಶ್ರೀನಾಥ್​
|

Updated on:Feb 23, 2020 | 2:50 PM

ಬೆಳಗಾವಿ: ಕುಂದಾನಗರಿಯಲ್ಲಿ ಚುನಾವಣೆ ನಡೆದ್ರೆ ಕೊತ ಕೊತ ಅನ್ನೋದು ಫಿಕ್ಸ್.. ಅದ್ರಲ್ಲೂ ಪಿಎಲ್​ಡಿ ಬ್ಯಾಂಕ್ ಎಲೆಕ್ಷನ್ ಅಂದಿನ ಸಮ್ಮಿಶ್ರ ಸರ್ಕಾರವನ್ನೇ ಅಲುಗಾಡಿಸಿ ಬಿಟ್ಟಿತ್ತು. ಆದ್ರೀಗ ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿ ಚುನಾವಣೆಗೆ ಬಿಜೆಪಿಯಲ್ಲೇ ಭಾರಿ ಪೈಪೋಟಿ ಶುರುವಾಗಿದೆ. ಇದು ಸಿಎಂ ಬಿಎಸ್​​ವೈ ಸರ್ಕಾರಕ್ಕೆ ಢವ ಢವ ಶುರುವಾಗಿದೆ.

ಕುಂದಾನಗರಿಯಲ್ಲಿ ಡಿಸಿಸಿ ಬ್ಯಾಂಕ್​ ಪಟ್ಟಕ್ಕೇರೋಕೆ ‘ಕತ್ತಿ’ವರಸೆ! ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್​ ಚುನಾವಣೆ ಬರೋ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯಲಿದೆ. ಮಾರ್ಚ್ ತಿಂಗಳಿನಿಂದಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಅಧ್ಯಕ್ಷ ಗಾದಿಗೇರೋಕೆ ಪ್ರಭಾವಿ ನಾಯಕರು ಒಂದೇ ಪಕ್ಷದಲ್ಲಿದ್ಕೊಂಡೆ ಗೇಮ್ ಪ್ಲ್ಯಾನ್ ಮಾಡ್ತಿದ್ದಾರೆ.

ಒಂದ್ಕಡೆ ಡಿಸಿಸಿ ಬ್ಯಾಂಕ್ ಪಟ್ಟ ಗಿಟ್ಟಿಸಿಕೊಳ್ಳೋಕೆ ಮಾಜಿ ಸಂಸದ ರಮೇಶ್ ಕತ್ತಿ ರಣತಂತ್ರ ಹೆಣೆದಿದ್ದಾರೆ. ಅದ್ರಲ್ಲೂ, ಸಹೋದರ ಉಮೇಶ್​ ಕತ್ತಿ ಸಹಾಯದಿಂದ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಇನ್ನೂ ಕತ್ತಿ ಬ್ರದರ್ಸ್ ಬೆನ್ನಿಗೆ ಜಾರಕಿಹೊಳಿ ಬ್ರದರ್ಸ್ ಕೂಡ ನಿಂತಿದ್ದಾರೆ.

ಇನ್ನು, ಡಿಸಿಎಂ ಲಕ್ಷ್ಮಣ ಸವದಿ ಈ ಬಾರಿಯಾದ್ರೂ ಡಿಸಿಸಿ ಬ್ಯಾಂಕ್ ತಮ್ಮ ಹಿಡಿತಕ್ಕೆ ಪಡೆಯೋಕೆ ತಂತ್ರ ಹೆಣೆದಿದ್ದಾರೆ. ಸವದಿ ಕೂಡ ಕೆಲ ನಿರ್ದೇಶಕರನ್ನ ತಮ್ಮ ಬಳಿ ಸೆಳೆದಿದ್ದಾರಂತೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಸವದಿಗೆ ಬೆನ್ನಿಗೆ ನಿಂತಿದ್ದಾರಂತೆ.

ಡಿಸಿಸಿ ಬ್ಯಾಂಕ್​​ಗೆ ಕುಮಟಳ್ಳಿಯನ್ನ ನಾಮನಿರ್ದೇಶನ ಮಾಡಿ ಅಧ್ಯಕ್ಷರನ್ನಾಗಿ ಮಾಡುವಂತೆ ಒತ್ತಡ ಹೇರ್ತಿದ್ದಾರೆನ್ನಲಾಗಿದೆ. ಇನ್ನು, ಈ ಕುರಿತು ಪ್ರತಿಕ್ರಿಯಿಸಿರೋ ಮಹೇಶ್ ಕುಮಟಳ್ಳಿ ನಾನು ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನ ಮಾಡುವಂತೆ ಕೇಳಿಲ್ಲ. ಚುನಾವಣೆಯಲ್ಲಿ ಡಿಸಿಎಂ ಸವದಿಗೆ ಬೆಂಬಲವಿದೆ ಅನ್ನೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಒಟ್ನಲ್ಲಿ ಪಿಎಲ್​ಡಿ ಬ್ಯಾಂಕ್ ಎಲೆಕ್ಷನ್​ ಬೈಎಲೆಕ್ಷನ್​​ನಲ್ಲಿ ಕೊತ ಕೊತ ಕುದ್ದು ಹೋಗಿದ್ದ ಕುಂದಾನಗರಿ ಅಖಾಡ ಈಗ ರಂಗೇರಿದೆ. ಇದೀಗ ಡಿಸಿಸಿ ಬ್ಯಾಂಕ್​ ಎಲೆಕ್ಷನ್​​​ನಲ್ಲಿ ಸಾಹುಕಾರ್ ಟೀಂ ಹಾಗೂ ಸವದಿ ಟೀಂ ನಡುವೆ ಗೇಮ್ ಪ್ಲ್ಯಾನ್ ಶುರುವಾಗಿದೆ. ಇನ್ನೊಂದ್ಕಡೆ ಸ್ವಪಕ್ಷೀಯದವರಲ್ಲೇ ಶುರುವಾಗಿರೋ ಯುದ್ಧವನ್ನ​ ಸಿಎಂ ಬಿಎಸ್​ವೈ ಹೇಗೆ ನಿಭಾಯಿಸ್ತಾರೆ ನೋಡ್ಬೇಕು.

Published On - 2:30 pm, Sun, 23 February 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ