ಭೂಕುಸಿತದಿಂದ ರದ್ದಾಗಿದ್ದ ಬೆಂಗಳೂರು-ಮಂಗಳೂರು ರೈಲು ಸಂಚಾರ ಪುನರಾರಂಭ

ಭೂಕುಸಿತದಿಂದಾಗಿ ರದ್ದಾಗಿದ್ದ ಬೆಂಗಳೂರು-ಮಂಗಳೂರು ರೈಲು ಸಂಚಾರದಲ್ಲಿ ಇದೀಗ ಪ್ಯಾಸೆಂಜರ್ ರೈಲು ಸೇವೆಗಳನ್ನು ನೈಋತ್ಯ ರೈಲ್ವೆ ಪುನರಾರಂಭಿಸಿದೆ. ಜುಲೈ 26ರಂದು ಸಕಲೇಶಪುರ-ಸುಬ್ರಹ್ಮಣ್ಯ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ಈ ಮಾರ್ಗದ ಸಂಚಾರ ಅಸ್ತವ್ಯಸ್ತವಾಗಿತ್ತು. ಇದೀಗ ಕೊಚ್ಚೊಹೋಗಿದ್ದ ರೈಲ್ವೆ ಹಳಿ ದುರಸ್ತಿ ಕಾರ್ಯ ಪೂರ್ಣವಾಗಿದ್ದು, ಇಂದಿನಿಂದ ಪ್ಯಾಸೆಂಜರ್ ರೈಲು ಸಂಚಾರ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಭೂಕುಸಿತದಿಂದ ರದ್ದಾಗಿದ್ದ ಬೆಂಗಳೂರು-ಮಂಗಳೂರು ರೈಲು ಸಂಚಾರ ಪುನರಾರಂಭ
ಭೂಕುಸಿತದಿಂದ ರದ್ದಾಗಿದ್ದ ಬೆಂಗಳೂರು-ಮಂಗಳೂರು ರೈಲು ಸಂಚಾರ ಪುನರಾರಂಭ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 08, 2024 | 9:40 PM

ಹಾಸನ, ಆಗಸ್ಟ್​ 08: ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್‌, ಎಡಕುಮೇರಿ ನಡುವೆ ಭೂಕುಸಿತ (landslides) ಸಂಭವಿಸಿ ಬೆಂಗಳೂರು-ಮಂಗಳೂರು (Bangaluru-Mangaluru) ಮಧ್ಯೆ ರೈಲು ಸಂಚಾರ ರದ್ದಾಗಿತ್ತು. ಇದೀಗ ಕೊಚ್ಚೊಹೋಗಿದ್ದ ರೈಲ್ವೆ ಹಳಿ ದುರಸ್ತಿ ಕಾರ್ಯ ಪೂರ್ಣವಾಗಿದ್ದು, ಇಂದಿನಿಂದ ಪ್ಯಾಸೆಂಜರ್ ರೈಲು ಸಂಚಾರ ಆರಂಭಕ್ಕೆ ನೈಋತ್ಯ ರೈಲ್ವೆ ಗ್ರೀನ್ ಸಿಗ್ನಲ್​ ನೀಡಿದೆ. ಆ ಮೂಲಕ ಹದಿನೈದು ದಿನಗಳ ಬಳಿಕ ಯಶವಂತಪುರ- ಮಂಗಳೂರು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಸಂಚರಿಸಿದೆ.

ಕಳೆದ 20 ದಿನಗಳಿಂದ ಪ್ಯಾಸೆಂಜರ್ ರೈಲು ಸಂಚಾರ ಬಂದ್ ಆಗಿತ್ತು. ಹಾಸನ- ಮಂಗಳೂರು ನಡುವೆ ಬಂದ್ ಆಗಿದ್ದ ರೈಲು ಸಂಚಾರ ಪುನಾರಾರಂಭ ಮಾಡಲಾಗಿದೆ. ಎರಡು ದಿನಗಳ ಹಿಂದಷ್ಟೆ ಗೂಡ್ಸ್ ರೈಲು ಓಡಿಸುವ ಮೂಲಕ ರೈಲ್ವೆ ಇಲಾಖೆ ಹಳಿ ಚೆಕ್ ಮಾಡಲಾಗಿತ್ತು.

ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ಮಣ್ಣು ಕುಸಿತ: ಬೆಂಗಳೂರು-ಮಂಗಳೂರು ಮಾರ್ಗದ 8 ರೈಲುಗಳ ಸಂಚಾರ ರದ್ದು

ಎಡೆಕುಮರಿ ಬಳಿ ಹಗಲಿರುಳು 400ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಹಳಿ ದುರಸ್ತಿ ಕಾರ್ಯ ನಡೆದಿತ್ತು. ನಿರಂತರ ಕಾಮಗಾರಿ ನಡೆಸಿ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಮುಕ್ತಗೊಳಿಸಿದೆ.

ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಕೂಡ ಇತ್ತೀಚೆಗೆ ಮುಕ್ತಾಯಗೊಳಿಸಲಾಗಿತ್ತು. ರೈಲು ಮಾರ್ಗ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿತ್ತು. ಗೋಡೆಯ ನಿರ್ಮಾಣದಲ್ಲಿ ಕಬ್ಬಿಣವನ್ನು ಬಳಸಲಾಗಿದೆ. ಹೆಚ್ಚುವರಿ ಹಂತದ ಬಂಡೆಗಳನ್ನು ಜೋಡಿಸುವ ಕಾರ್ಯ ಕೂಡ ಮುಗಿದಿದೆ.

ಇದನ್ನೂ ಓದಿ: ಹಾಸನ: ಶಿರಾಡಿ ಘಾಟ್​​​ನಲ್ಲಿ ಭಾರೀ ಭೂಕುಸಿತ, ಮಣ್ಣಿನಡಿ‌ ಸಿಲುಕಿದ ಹಲವು ವಾಹನಗಳು

ಜುಲೈ 26ರಿಂದ ಬೆಂಗಳೂರು-ಮಂಗಳೂರು ಮಾರ್ಗ ಬಂದ್ ಆಗಿತ್ತು. ಕಿ.ಮೀ ನಂ.63ರಲ್ಲಿ ರೈಲ್ವೆ ಹಳಿ ಮೇಲೆ‌ ಗುಡ್ಡ ಕುಸಿದಿತ್ತು. 11 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಇಲಾಖೆ ಕಾರ್ಮಿಕರು ಹಳಿ ಮರುಸ್ಥಾಪಿಸಿದ್ದರು.

ಬೆಂಗಳೂರು ಮತ್ತು ವಿಜಯಪುರದಿಂದ ರಾತ್ರಿಯ ರೈಲುಗಳು ಶೀಘ್ರದಲ್ಲೇ ಪುನರಾರಂಭಗೊಳ್ಳಲಿವೆ. ಮಂಗಳೂರು, ಕಾರವಾರ ಮತ್ತು ಮಂಗಳೂರು ಜಂಕ್ಷನ್‌ನಿಂದ ವಾಪಸ್ಸಾಗುವ ರೈಲು ಸೇವೆಗಳು ಶುಕ್ರವಾರದಿಂದ ಪ್ರಾರಂಭವಾಗಲಿವೆ. ಆದಾಗ್ಯೂ, ಎಡಕುಮಾರಿ ಮತ್ತು ಕಡಗರವಳ್ಳಿ ನಡುವಿನ ಭೂಕುಸಿತ ಹಿನ್ನಲೆ ಈ ಮಾರ್ಗದಲ್ಲಿ ಮುಂದಿನ ಸೂಚನೆವರೆಗೂ ರೈಲುಗಳು 15 ಕಿಮೀ ಕಡಿಮೆ ವೇಗದಲ್ಲಿ ಸಂಚರಿಸಲಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.