AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಷ್ಟೇ ಜನದಟ್ಟಣೆ, ಅಷ್ಟೇ ಕೋಚ್​ಗಳು: ಬೆಂಗಳೂರು ಮೆಟ್ರೋ ಟಿಕೆಟ್ ದರ ದೆಹಲಿಗಿಂತ ಎರಡು ಪಟ್ಟು ಹೆಚ್ಚೇಕೆ? ಮತ್ತೆ ವ್ಯಕ್ತವಾಯ್ತು ಆಕ್ರೋಶ

ಬೆಂಗಳೂರು ಮೆಟ್ರೋ ದರ ಹೆಚ್ಚಳದ ಕುರಿತಾಗಿ ಸಾರ್ವಜನಿಕರು ಹಲವಾರು ಬಾರಿ ಧ್ವನಿ ಎತ್ತಿದ್ದಾರೆ. ಅಂತೆಯೇ ಈಗಲೂ ಸಹ ಎಂ.ಪಿ ತೇಜಸ್ವಿ ಸೂರ್ಯ ಮತ್ತು ಕಾಯ್ನ್ ಸ್ವಿಚ್ ಕಂಪಿನಿಯ ಮಾಲೀಕ ಆಶಿಸ್ ಸಿಂಘಲ್ ಸಹ ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿಯಷ್ಟೇ ಜನಸಂದಣಿ , ಅದೇ ಸೇವೆ , ಅದೇ ಕೋಚ್​ಗಳಿದ್ದರೂ ಬೆಂಗಳೂರು ಮೆಟ್ರೋ ದರ ದೆಹಲಿಯ ಎರಡರಷ್ಟಿದೆಯೇಕೆ ಎಂದು BMRCL ಅನ್ನು ಪ್ರಶ್ನಿಸಿದ್ದಾರೆ.

ಅಷ್ಟೇ ಜನದಟ್ಟಣೆ, ಅಷ್ಟೇ ಕೋಚ್​ಗಳು: ಬೆಂಗಳೂರು ಮೆಟ್ರೋ ಟಿಕೆಟ್ ದರ ದೆಹಲಿಗಿಂತ ಎರಡು ಪಟ್ಟು ಹೆಚ್ಚೇಕೆ? ಮತ್ತೆ ವ್ಯಕ್ತವಾಯ್ತು ಆಕ್ರೋಶ
ನಮ್ಮ ಮೆಟ್ರೋ ದರ ಏರಿಕೆ ವಿರುದ್ಧ ಕಾಯ್ನ್ ಸ್ವಿಚ್ ಕಂಪನಿ ಮಾಲೀಕ ಗರಂ
ಭಾವನಾ ಹೆಗಡೆ
|

Updated on: Oct 01, 2025 | 10:43 AM

Share

ಬೆಂಗಳೂರು, ಅಕ್ಟೋಬರ್ 1: ಬೆಂಗಳೂರಿನ ಮೆಟ್ರೋ (Bengaluru metro) ದರ ಏರಿಕೆಯ ಕುರಿತಾಗಿ ಹಲವಾರು ವಿಮರ್ಶೆಗಳು ಹುಟ್ಟಿಕೊಂಡಿವೆ. ಈ ಮೊದಲೂ ಎಂ.ಪಿ ತೇಜಸ್ವಿ ಸೂರ್ಯ ಸೇರಿದಂತೆ ಹಲವರು ದರ ಏರಿಕೆಯನ್ನು ಪ್ರಶ್ನಿಸಿದ್ದರು. ಅಂತೆಯೇ ಈಗ ಕಾಯ್ನ್ ಸ್ವಿಚ್ ಕಂಪನಿಯ ಮಾಲೀಕ ಆಶಿಶ್ ಸಿಂಘಲ್ ಈ ಕುರಿತು ಲಿಂಕ್​ಡಿನ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ದೆಹಲಿ ಮೆಟ್ರೋದಲ್ಲಿರುವ ಸೌಲಭ್ಯಗಳೇ ಬೆಂಗಳೂರಿನಲ್ಲಿದ್ದರೂ ದರ ಮಾತ್ರ ದೆಹಲಿಯ ಎರಡು ಪಟ್ಟಿನಷ್ಟಿದೆಯೇಕೆ ಎಂದು ಪ್ರಶ್ನಿಸಿದ್ದಾರೆ. ಆದರೆ BMCRL ಮಾತ್ರ ಬೆಲೆಯೇರಿಕೆಯ ಸಮರ್ಥನೆ ಮಾಡಿಕೊಂಡಿದೆ.

ಮೆಟ್ರೋ ದರ ಹೆಚ್ಚಳದ ವಿರುದ್ಧ ತೇಜಸ್ವಿ ಸೂರ್ಯ ಗರಂ

ಫೆಬ್ರುವರಿಯಲ್ಲೇ ಬೆಂಗಳೂರು ಮೆಟ್ರೋ ದರ ಏರಿಕೆಯಾಗಿದ್ದರೂ ಅದು ಬೆಳಕಿಗೆ ಬಂದಿದ್ದು ಇತ್ತೀಚಿನ ದಿನಗಳಲ್ಲಿ. ಈ ಕರಿತು ಬಿಜೆಪಿ ಎಂ.ಪಿ ತೇಜಸ್ವಿ ಸೂರ್ಯ “ಬೆಂಗಳೂರು ಮೆಟ್ರೋ ದರ ಗಗನಕ್ಕೇರಿದೆ. ಇಡೀ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ನಮ್ಮದಾಗಿದೆ. ಪ್ರತಿನಿತ್ಯ ನಮ್ಮ ಮೆಟ್ರೋದಲ್ಲಿ 25 ಕಿ.ಮೀ ಗಿಂತ ಜಾಸ್ತಿ ದೂರ ಪ್ರಯಾಣಿಸುವವರು 90 ರೂ.ಗಳಷ್ಟು ಶುಲ್ಕ ಪಾವತಿಸಬೇಕು. ಹೀಗೆ ಮುಂದುವರೆದರೆ ಸಾರ್ವಜನಿಕರು ಖಾಸಗೀ ವಾಹನಗಳಲ್ಲೇ ಸಂಚರಿಸಬೇಕಾಗುತ್ತದೆ.  ಇದನ್ನು ದೆಹಲಿಯೊಂದಿಗೆ ಹೋಲಿಸಿ ನೋಡಿದರೆ ಅವರು ಕೈಗೆಟಕುವಷ್ಟೇ ಬೆಲೆ ಏರಿಕೆ  ಮಾಡಿದ್ದಾರೆ.” ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ ಅತ್ಯಂತ ದುಬಾರಿ ನಮ್ಮ ಮೆಟ್ರೋ: ದೆಹಲಿ ಮೆಟ್ರೋ ದರ ಏರಿಕೆ ಜತೆ ಹೋಲಿಸಿ ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ

ಆಶಿಶ್ ಸಿಂಘಲ್​ನ ಪೋಸ್ಟ್​ನಲ್ಲೇನಿದೆ?

ಕಾಯ್ನ್ ಸ್ವಿಚ್ ಕಂಪನಿಯ ಮಾಲೀಕ ಆಶಿಶ್ ಸಿಂಘಲ್ ಸಹ ಈ ಕುರಿತಾಗಿ ತಮ್ಮ ಲಿಂಕ್​ಡಿನ್ ಖಾತೆಯಲ್ಲಿ ಪೋಸ್ಟ್ ಮಾಡಿ, ‘ಬೆಂಗಳೂರು ಮೆಟ್ರೋ ಇದೀಗ ದೇಶದಲ್ಲೇ ಅತಿ ದುಬಾರಿ ಎನಿಸಿಕೊಂಡಿದೆ. 60 ರೂ.ಗಳಷ್ಟಿದ್ದ ಗರಿಷ್ಟ ಶುಲ್ಕವನ್ನು ರಾತ್ರೋರಾತ್ರಿ 90 ರೂ.ಗಳಿಗೆ ಏರಿಸಿದ್ದಾರೆ. ದೆಹಲಿ ಮೆಟ್ರೋದ ಗರಿಷ್ಟ ಶುಲ್ಕ 60 ರೂ, ಮುಂಬೈನಲ್ಲಿ 50ರೂ. ಮತ್ತು ಕೋಲ್ಕತ್ತಾದಲ್ಲಿ ಕೇವಲ 30 ರೂ.ಗಳಷ್ಟು ಗರಿಷ್ಟ ಶುಲ್ಕವಿದೆ. ದೆಹಲಿ ಮೆಟ್ರೋ ಸಹ ಇಲ್ಲಿಯಷ್ಟೇ ಜನದಟ್ಟಣೆ, ಕೋಚ್​ಗಳು ಮತ್ತು ಇತರ ಸೇವೆಗಳನ್ನು ಒದಗಿಸುತ್ತಿದೆ. ಆದರೆ ಬೆಂಗಳೂರಿಗರು ಮೆಟ್ರೋದಲ್ಲಿ ಪ್ರಯಾಣಿಸಲು ದೆಹಲಿಯ ಎರಡು ಪಟ್ಟು ಶುಲ್ಕ ಪಾವತಿಸಬೇಕಿದೆ’ ಎಂದಿದ್ದಾರೆ.

ಆಶಿಶ್ ಸಿಂಘಲ್​ನ ಪೋಸ್ಟ್ ಇಲ್ಲಿದೆ

‘BMCRL ಈ ದರ ಏರಿಕೆಯನ್ನು ತನ್ನದೇ ಶೈಲಿಯಲ್ಲಿ ಸಮರ್ಥಿಸಿಕೊಳ್ಳುತ್ತಿದೆ. 2017 ರಿಂದ ಸಿಬ್ಬಂದಿಯ ಸಂಬಳ, ವಿದ್ಯುತ್ ದರ, ನಿರ್ವಹಣೆ ಇವೆಲ್ಲವುಗಳಲ್ಲೂ ಏರಿಕೆಯಾಗಿರುವುದರಿಂದ ಮೆಟ್ರೋ ದರ ಹೆಚ್ಚಿಸಿದ್ದೇವೆ ಎಂದಿದೆ. ಹಣದುಬ್ಬರವಾಗಿರುವುದು ಒಪ್ಪಿಕೊಳ್ಳೋಣ, ಆದರೆ ಮೆಟ್ರೂದಲ್ಲಿ ಓಡಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ಮೆಟ್ರೋದ ಆದಾಯದಲ್ಲೂ ಏರಿಕೆಯಾಗಿದೆ. ಆದರೂ ದರ ಹೆಚ್ಚಿಸಿದ್ದೇಕೆ’ ಎಂದು ಪ್ರಶ್ನಿಸಿದ್ದಾರೆ.

‘ಇಷ್ಟೇ ಅಲ್ಲದೇ  BMCRL  ವಾರ್ಷಿಕ 5 % ದರ ಹೆಚ್ಚಳದ ಚಿಂತನೆ ಮಾಡಿದೆಯಂತೆ. ನಮ್ಮ ಆಸೆಯಂತೆ ಅತ್ಯುತ್ತಮ ಮೆಟ್ರೋ ಸೌಲಭ್ಯವೇನೋ ಸಿಕ್ಕಿದೆ. ಇದು ಇಷ್ಟು ದುಬಾರಿಯಾಗಲಿದೆ ಎಂದು ನಾನು ಎಣಿಸಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ