ಸಂಚಾರಿ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ 19.55 ಕೋಟಿ ರೂ. ದಂಡ ವಸೂಲಿ ಮಾಡಿದ ಪೊಲೀಸರು
ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಕೇಸ್ನಲ್ಲಿ 3,71,516 ವಾಹನ ಮಾಲೀಕರಿಂದ 19,54,16,400 ದಂಡ ವಸೂಲಿ ಮಾಡಲಾಗಿದೆ. ಆ ಮೂಲಕ ಪದೇಪದೆ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಬಿಗ್ ಶಾಕ್ ಕಾದಿದೆ. 2,742 ಬೈಕ್ ಸವಾರರಿಂದ 3,61,294 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಲಾಗಿದ್ದು, ಬೈಕ್ ಸವಾರರು 18,76,34,300 ರೂ. ದಂಡದ ಮೊತ್ತ ಪಾವತಿಸಬೇಕಾಗಿದೆ.
ಬೆಂಗಳೂರು, ಏಪ್ರಿಲ್ 22: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (bengaluru) ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿವೆ ಎಂದು ಇತ್ತೀಚೆಗೆ ವರಿದ ಆಗಿತ್ತು. ಇದೀಗ ನಗರದಲ್ಲಿ ಪೊಲೀಸರು 19.55 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ (Traffic violation) ಕೇಸ್ನಲ್ಲಿ 3,71,516 ವಾಹನ ಮಾಲೀಕರಿಂದ ಒಟ್ಟು 19,54,16,400 ದಂಡ ವಸೂಲಿ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ಪದೇಪದೆ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಬಿಗ್ ಶಾಕ್ ಕಾದಿದೆ.
1 ಲಕ್ಷಕ್ಕೂ ಹೆಚ್ಚು ದಂಡದ ಮೊತ್ತವಿರುವ 123 ವಾಹನಗಳ ಪಟ್ಟಿ ಸಿದ್ಧ ಮಾಡಲಾಗಿದ್ದು, ವಾಹನ ಮಾಲೀಕರ ಪತ್ತೆ ಹಚ್ಚಿ ನೋಟಿಸ್ ನೀಡಲು ಪೊಲೀಸರು ಚಿಂತನೆ ನಡೆಸಿದ್ದಾರೆ. ದಂಡ ಪಾವತಿಸದವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲು ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: Bangaluru: ಹೆಚ್ಚು ಖಾಸಗಿ ವಾಹನಗಳಿರುವ ನಗರಗಳಲ್ಲಿ ದೆಹಲಿಯನ್ನು ಹಿಂದಿಕ್ಕಿದ ಬೆಂಗಳೂರು ನಂ 1
2,742 ಬೈಕ್ ಸವಾರರಿಂದ 3,61,294 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಲಾಗಿದ್ದು, ಬೈಕ್ ಸವಾರರು 18,76,34,300 ರೂ. ದಂಡದ ಮೊತ್ತ ಪಾವತಿಸಬೇಕಾಗಿದೆ.
ಯಾವ ಕಾರಣಕ್ಕೆ ದಂಡ?
ಸವಾರ ಮತ್ತು ಹಿಂಬದಿ ಸವಾರ ಹೆಲ್ಮೆಟ್ ಇಲ್ಲದೆ ಸಂಚಾರ, ಸಿಗ್ನಲ್ ಜಂಪ್, ದೋಷಪೂರಿತ ನಂಬರ್ ಪ್ಲೇಟ್, ಡ್ರೈವಿಂಗ್ನಲ್ಲಿ ಮೊಬೈಲ್ ಫೋನ್ ಬಳಕೆ, ಸೀಟ್ ಬೆಲ್ಟ್ ಹಾಕದಿರುವುದು, ಒನ್ ವೇ ಎಂಟ್ರಿ ಮತ್ತು ಸರಿಯಾಗಿ ಪಾರ್ಕಿಂಗ್ ಮಾಡದಿರುವುದು ಹೀಗೆ ಹಲವು ವಿಚಾರಗಳಿಗೆ ದಂಡ ಹಾಕಲಾಗಿದೆ.
ಸಂಚಾರ ನಿಯಮ ಉಲ್ಲಂಘಿಸಿದ ಇತರೆ ವಾಹನಗಳು
- ಕಾರ್ಗಳ ಸಂಖ್ಯೆ: 100, ಒಟ್ಟು ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ್ದು: 8603, ಒಟ್ಟು ದಂಡ: 69,00,900 ರೂ.
- ವ್ಯಾನ್ಗಳ ಸಂಖ್ಯೆ: 09, ಒಟ್ಟು ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ್ದು: 848, ಒಟ್ಟು ದಂಡ: 4,67,500 ರೂ.
- ಸ್ಕೂಲ್ ಬಸ್ಗಳ ಸಂಖ್ಯೆ: 02, ಒಟ್ಟು ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ್ದು: 156, ಒಟ್ಟು ದಂಡ ಕಟ್ಟಬೇಕಾಗಿದ್ದು: 88,000 ರೂ.
- ಮ್ಯಾಕ್ಸಿ ಕ್ಯಾಬ್ಗಳ ಸಂಖ್ಯೆ: 01, ಒಟ್ಟು ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ್ದು: 82, ಒಟ್ಟು ದಂಡ ಕಟ್ಟಬೇಕಾಗಿದ್ದು: 56,000 ರೂ.
- ಇತರೆ ವಾಹನಗಳ ಸಂಖ್ಯೆ: 04, ಒಟ್ಟು ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ್ದು: 433, ಒಟ್ಟು ದಂಡ ಕಟ್ಟಬೇಕಾಗಿದ್ದು: 2,43,100 ರೂ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:14 pm, Mon, 22 April 24