ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿ ನಗದು ಹಣವಿಲ್ಲ ಎಂದು ನುಣುಚಿಕೊಳ್ಳುವಂತಿಲ್ಲ… ಏಕೆ ಗೊತ್ತಾ?
ಬೆಂಗಳೂರಿನಲ್ಲಿ ಇನ್ನು ಮುಂದೆ ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಗೆ ನಗದು ಹಣವಿಲ್ಲ ಎನ್ನುವ ಸಬೂಬು ಹೇಳಿ ತಪ್ಪಿಸಿಕೊಳ್ಳುವ ಹಾಗಿಲ್ಲ. ಕಾರಣ, ಡಿಜಿಟಲ್ ಪಾವತಿ ಮೂಲಕ ದಂಡ ಕಟ್ಟಲು ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದೆ.
ಬೆಂಗಳೂರು: ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುವ ವಾಹನಗಳಿಗೆ ಪೊಲೀಸರು ದಂಡ ವಿಧಿಸಿದರೆ, ನಗದು ಹಣವಿಲ್ಲ ಎಂದು ಹೇಳಿ ನುಣುಚಿಕೊಳ್ಳುವ ಸಂದರ್ಭ ಇನ್ನು ಮುಂದೆ ಬರುವುದಿಲ್ಲ. ಹೌದು. ಬೆಂಗಳೂರಿನಲ್ಲಿ ಇಂದು ಪೇಟಿಎಂ ಮೂಲಕ ದಂಡ ಪಾವತಿ ತಂತ್ರಜ್ಞಾನಕ್ಕೆ ಚಾಲನೆ ನೀಡಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಈ ನೂತನ ತಂತ್ರಜ್ಞಾನಕ್ಕೆ ಚಾಲನೆ ನೀಡಿದ್ದಾರೆ.
ಈ ಮೊದಲು ಡಿಜಿಟಲ್ ಮೂಲಕ ದಂಡ ಪಾವತಿಗೆ ಅವಕಾಶವಿರಲಿಲ್ಲ. ದಂಡವೇನಿದ್ದರೂ ನಗದು ರೂಪದಲ್ಲಿಯೇ ಪೊಲೀಸರಿಗೆ ಕಟ್ಟಬೇಕಿತ್ತು. ಈಗ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ಪೇಟಿಎಂ ಡಿಜಿಟಲ್ ತಂತ್ರಜ್ಞಾನದ ಮೂಲಕ ದಂಡ ಪಾವತಿ ಮಾಡಬಹುದಾಗಿದೆ.
ಕರೊನಾ ಸಮಸ್ಯೆಯೂ ಇರುವುದರಿಂದ ನಗದು ರಹಿತ ದಂಡ ಪಾವತಿಗೆ ಪೊಲಿಸ್ ಇಲಾಖೆ ಈ ಮಾದರಿಯನ್ನು ಕಂಡುಕೊಂಡಿದೆ. ಟೆಲಿಬ್ರಹ್ಮ ಸಾಫ್ಟ್ವೇರ್ ಸರ್ವಿಸಸ್ ಇದಕ್ಕೆ ಸಹಯೋಗ ನೀಡಿದೆ. ವೆಬ್ಸೈಟ್, ಪಿಡಿಎ ಮಷೀನ್ಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ನಗದು ರಹಿತ ದಂಡ ಪಾವತಿಗೆ ರೂಪಿಸಿದ ಈ ಹೊಸ ಮಾರ್ಗದಿಂದಾಗಿ ಇನ್ನು ಮುಂದೆ ದಂಡ ಕಟ್ಟದೆ ತಪ್ಪಿಸುವುದು ಕಡಿಮೆಯಾಗಲಿದೆ.
ಇದನ್ನೂ ಓದಿ: Shopsy App: ಸ್ಥಳೀಯ ಉದ್ಯಮಿಗಳ ನೆರವಿಗಾಗಿ ಫ್ಲಿಪ್ಕಾರ್ಟ್ನಿಂದ ಆರಂಭವಾಯಿತು ಹೊಸ ಆ್ಯಪ್; ಇದರ ಕೆಲಸ ಏನು ಗೊತ್ತಾ?
ಇದನ್ನೂ ಓದಿ: ಬೆಂಗಳೂರು ಸಂಚಾರ ವ್ಯವಸ್ಥೆ ಜೀವನಾಡಿಯಾದ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಶಿಫಾರಸು!
(Bengaluru traffic police starts digital payment system for traffic fines)
Published On - 6:14 pm, Mon, 5 July 21