ಬೈಕ್​​​ಗೆ ಲಾರಿ ಡಿಕ್ಕಿ; 3 ವರ್ಷದ ಮಗು ಸಾವು, ತಂದೆ-ತಾಯಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗೇಟ್ ಬಳಿ ಬೈಕ್ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ (Accident) ವಾಗಿದ್ದು, ತಂದೆ ಆಂಜಿನೇಯ-ತಾಯಿ ಮಮತಾಗೆ ಗಂಭೀರ ಗಾಯವಾದರೆ, ಮೂರು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.

ಬೈಕ್​​​ಗೆ ಲಾರಿ ಡಿಕ್ಕಿ; 3 ವರ್ಷದ ಮಗು ಸಾವು, ತಂದೆ-ತಾಯಿಗೆ ಗಂಭೀರ ಗಾಯ
ದೊಡ್ಡಬಳ್ಳಾಪುರ ಹೆದ್ದಾರಿಯಲ್ಲಿ 3 ವರ್ಷದ ಮಗು ಸಾವು, ತಂದೆ-ತಾಯಿಗೆ ಗಂಭೀರ ಗಾಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 21, 2024 | 3:46 PM

ಬೆಂಗಳೂರು ಗ್ರಾಮಾಂತರ, ಜೂ.21: ಹೆದ್ದಾರಿಯಲ್ಲಿ ಬೈಕ್ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ (Accident) ವಾಗಿದ್ದು, ತಂದೆ ಆಂಜಿನೇಯ-ತಾಯಿ ಮಮತಾ ಎಂಬುವವರಿಗೆ ಗಂಭೀರ ಗಾಯವಾದರೆ, ಮೂರು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗೇಟ್ ಬಳಿ ನಡೆದಿದೆ. ಧನ್ವಿತ್(3) ಮೃತ ಮಗು. ಅಪಘಾತ ಮಾಡಿ ಲಾರಿಯನ್ನು ಚಾಲಕ ಒಂದು ಕಿ.ಮೀ ದೂರ ಚಲಿಸಿಕೊಂಡು ಹೋಗಿದ್ದಾನೆ. ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಫುಟ್ ಪಾತ್ ಏರಿ ಅಂಗಡಿಗೆ ನುಗ್ಗಿದ ಪಿಕಪ್ ವಾಹನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿಯಂತ್ರಣ ತಪ್ಪಿ ಪಿಕಪ್ ವಾಹನ ಅಪಘಾತವಾದ ಘಟನೆ ನಿನ್ನೆ ಮಧ್ಯಾಹ್ನ 2.30 ಕ್ಕೆ ಸುಬ್ರಹ್ಮಣ್ಯನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಫುಟ್ ಪಾತ್ ಏರಿ ಅಂಗಡಿಗೆ ನುಗ್ಗಿದ್ದು, ಓರ್ವ ವ್ಯಕ್ತಿಯ ಕಾಲು ಮುರಿದಿದೆ. ರಸ್ತೆಯಲ್ಲಿ ಬೈಕ್ ನಿಲ್ಲಿಸಿ ನಿಂತಿದ್ದ ಸವಾರ ಅದೃಷ್ಟವಶಾತ್​ ಪಾರಾಗಿದ್ದಾನೆ. ಗಾಯಾಳು ವ್ಯಕ್ತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಚಾಮರಾಜನಗರ: ಡೆಡ್ಲಿ ಹೈವೇಯಾಗಿ ಬದಲಾದ ರಾಷ್ಟ್ರೀಯ ಹೆದ್ದಾರಿ, 15 ದಿನಗಳಲ್ಲಿ 5 ಭೀಕರ ಅಪಘಾತ, ಐವರ ದುರ್ಮರಣ

ರೈಲಿಗೆ ಸಿಲುಕಿ ಇಂಜಿನಿಯರಿಂಗ್​​ ವಿದ್ಯಾರ್ಥಿನಿಗೆ ಗಾಯ

ಮಂಡ್ಯ: ರೈಲಿಗೆ ಸಿಲುಕಿ ಮಂಡ್ಯದ ಪಿಇಎಸ್ ಇಂಜಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಗಂಭೀರ ಗಾಯಗೊಂಡಿರುವ ಘಟನೆ ಮಂಡ್ಯ ನಗರದ ಕನಕ ಭವನ ಹಿಂಭಾಗದ ರೈಲೆ ಟ್ರ್ಯಾಕ್​ನಲ್ಲಿ ನಡೆದಿದೆ. ಲಾವಣ್ಯ(18) ರೈಲಿಗೆ‌ ಸಿಲುಕಿ ಗಾಯಗೊಂಡ ವಿದ್ಯಾರ್ಥಿನಿ. ಇನ್ನು ಮೇಲ್ನೋಟಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಇಂದು (ಜೂ.21) ಬೆಳಿಗ್ಗೆ ಕಾಲೇಜಿಗೆ ಬಂದಿದ್ದರು. ಮಧ್ಯಾಹ್ನದ ವೇಳೆ ರೈಲಿಗೆ ಸಿಲುಕಿ ಗಂಭೀರ ಗಾಯವಾಗಿದೆ. ಕೂಡಲೇ ರೈಲ್ವೆ ಪೊಲೀಸರು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಧ್ಯ ವಿದ್ಯಾರ್ಥಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ. ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ