ದೇಶ ವಿರೋಧಿ ಪೋಸ್ಟ್; ಬೆಂಗಳೂರಿನಲ್ಲಿ ಕಾಶ್ಮೀರ ಮೂಲದ ವ್ಯಕ್ತಿ ಅರೆಸ್ಟ್
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವಂತಹ ಕೆಲಸಗಳು ಬೆಳಕಿಗೆ ಬರುತ್ತಿವೆ. ಅದರಂತೆ ಇದೀಗ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಕಾಶ್ಮೀರ ಮೂಲದ ವ್ಯಕ್ತಿಯನ್ನು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸರು (Madanayakanahalli Police) ಬಂಧಿಸಿದ್ದಾರೆ.
ಬೆಂಗಳೂರು, ಜೂ.20: ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಕಾಶ್ಮೀರ ಮೂಲದ ವ್ಯಕ್ತಿಯನ್ನು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸರು(Madanayakanahalli Police) ಬಂಧಿಸಿದ್ದಾರೆ. ಫಾಹಿಮ್ ಫಿರ್ ದೋಸ್ ಖುರೇಷಿ ಬಂಧಿತ ವ್ಯಕ್ತಿ. ಇತ ಇಲ್ಲಿಯೇ ವ್ಯಾಸಂಗ ಮಾಡಿ, ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ(BIEC)ನಲ್ಲಿ ಮಾರ್ಕೆಟಿಂಗ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದ.
ಇದರ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ಹಾಗೂ ಸಾಮಾಜಿಕ ನೆಮ್ಮದಿ ಹಾಳು ಮಾಡುವ ವಿಕೃತಿ ಹೊಂದಿದ್ದ ಫಾಹಿಮ್ ಫಿರ್ ದೋಸ್ ಖುರೇಷಿ, ಸಾಮಾಜಿಕ ಜಾಲತಾಣವಾದ ‘ಎಕ್ಸ್’ ನಲ್ಲಿ ಹಲವಾರು ದೇಶ ವಿರೋಧಿ ಪೋಸ್ಟ್ ಹಾಕಿದ್ದ. ಅದರಲ್ಲೂ ‘When “I” is replaced by “We” India becomes wendia, Meaning we will end India’ ಎಂದು ಟ್ವೀಟ್ ಮಾಡಿದ್ದ. ಇದನ್ನೂ ಕೆಲ ದೇಶವಿರೋಧಿಗಳು ಶ್ಲಾಘಿಸಿದ್ದರು. ಈ ಹಿನ್ನಲೆ ಈ ದೇಶದ್ರೋಹಿ ಕೃತ್ಯವೆಸಗಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲ್ಯಾಪ್‌ಟಾಪ್,ಬೈಕ್,ಮೊಬೈಲ್ ಜಪ್ತಿ
ಇನ್ನು ಇತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು, ಆತ ವಾಸವಿದ್ದ ಪೀಣ್ಯಾ ಪ್ಲಾಟಿನಮ್ ಸಿಟಿ ಅಪಾರ್ಟ್ಮೆಂಟ್ ಹಾಗೂ BIECನಲ್ಲಿ ಸ್ಥಳ ಮಹಜರು ಮಾಡುತ್ತಿದ್ದಾರೆ. ಜೊತೆಗೆ ಖುರೇಷಿ ಉಪಯೋಗಿಸುತ್ತಿದ್ದ ಲ್ಯಾಪ್‌ಟಾಪ್, ಬೈಕ್ ಹಾಗೂ ಮೊಬೈಲ್ನ್ನು ಜಪ್ತಿ ಮಾಡಿ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ IPC 1860-505(1)B,153B ರೀತ್ಯಾ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Thu, 20 June 24