ದೂರು ನೀಡಲು ಠಾಣೆಗೆ ಹೋದವರಿಗೆ ಅವಾಜ್ ಹಾಕಿ ಪಿಎಸ್‌ಐ ದರ್ಪ, ದೃಶ್ಯ ಮೊಬೈಲ್ನಲ್ಲಿ ಸೆರೆ
ಸೈಟ್ ವಿಚಾರವಾಗಿ 2 ಕುಟುಂಬಗಳ ನಡುವೆ ಗಲಾಟೆಯಾಗಿತ್ತು. ಹೀಗಾಗಿ ಸೈಟ್ನಲ್ಲಿ ಮನೆ ಕಟ್ಟಬಾರದೆಂದು ಆನಂದ್ ಎಂಬಾತ ಕೋರ್ಟ್‌ನಿಂದ ಸ್ಟೇ ತಂದಿದ್ದರು. ಆದ್ರೆ ಸ್ಟೇ ತಂದಿದ್ದರೂ ಸೈಟ್ ವಿಚಾರವಾಗಿ ಗಲಾಟೆಯಾದ ಹಿನ್ನೆಲೆಯಲ್ಲಿ ಆನಂದ್ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಪಿಎಸ್‌ಐ ಸಂಗಮೇಶ್ ದೂರು ನೀಡಲು ಬಂದವ ಮೇಲೆ ತಮ್ಮ ದರ್ಪ ತೋರಿದ್ದಾರೆ.

ದೇವನಹಳ್ಳಿ: ದೂರು ನೀಡಲು ಠಾಣೆಗೆ ಹೋದವರ ಮೇಲೆ ಪಿಎಸ್‌ಐ ದರ್ಪ ಮೆರೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಆನುಗೊಂಡನಹಳ್ಳಿ ಠಾಣೆಯಗೆ ದೂರು ನೀಡಲು ಬಂದವರ ಬಳಿಯಿಂದ ದೂರಿನ ಪ್ರತಿ ಮತ್ತು ಕೋರ್ಟ್ ತಡೆಯಾಜ್ಞೆಯ ಪತ್ರಗಳನ್ನ ಬಿಸಾಡಿ ಪಿಎಸ್‌ಐ ಸಂಗಮೇಶ್ ದರ್ಪ ಮೆರೆದಿರುವ ಆರೋಪ ಕೇಳಿ ಬಂದಿದೆ.
ಸೈಟ್ ವಿಚಾರವಾಗಿ 2 ಕುಟುಂಬಗಳ ನಡುವೆ ಗಲಾಟೆಯಾಗಿತ್ತು. ಹೀಗಾಗಿ ಸೈಟ್ನಲ್ಲಿ ಮನೆ ಕಟ್ಟಬಾರದೆಂದು ಆನಂದ್ ಎಂಬಾತ ಕೋರ್ಟ್‌ನಿಂದ ಸ್ಟೇ ತಂದಿದ್ದರು. ಆದ್ರೆ ಸ್ಟೇ ತಂದಿದ್ದರೂ ಸೈಟ್ ವಿಚಾರವಾಗಿ ಗಲಾಟೆಯಾದ ಹಿನ್ನೆಲೆಯಲ್ಲಿ ಆನಂದ್ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಪಿಎಸ್‌ಐ ಸಂಗಮೇಶ್ ದೂರು ನೀಡಲು ಬಂದವ ಮೇಲೆ ತಮ್ಮ ದರ್ಪ ತೋರಿದ್ದಾರೆ.
ಮತ್ತೊಂದು ಗುಂಪಿನ ಜೊತೆ ಶಾಮೀಲು ಆಗಿ ಈ ರೀತಿ ನಮ್ಮ ದೂರನ್ನು ತಿರಸ್ಕರಿಸಿದ್ದಾರೆ ಎಂದು ಪಿಎಸ್ಐ ಸಂಗಮೇಶ್ ವಿರುದ್ಧ ಆನಂದ್ ಆರೋಪ ಮಾಡಿದ್ದಾರೆ. ಪಿಎಸ್ಐ ಸಂಗಮೇಶ್ ದೂರಿನ ಪ್ರತಿ ಬಿಸಾಕುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಪೊಲೀಸರ ವಿರುದ್ಧ ನೊಂದ ಆನಂದ್ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: The Hundred: ಬ್ಯಾಟ್ಸ್ಮನ್ ಬಾರಿಸಿದ ಸಿಕ್ಸ್ಗೆ ಗ್ಯಾಲರಿಯಲ್ಲಿದ್ದ ಅಭಿಮಾನಿಯಿಂದ ಡೈವ್ ಹೊಡೆದು ಅದ್ಭುತ ಕ್ಯಾಚ್
ಸದಾಶಿವನಗರದಲ್ಲಿ ನಾಯಿ ಜೊತೆ ವಾಕಿಂಗ್ ಮಾಡ್ತಿದ್ದ ಮಹಿಳೆ ದರ್ಪ: ಮಾಸ್ಕ್ ಹಾಕಿಲ್ಲವೆಂದು ದೊಣ್ಣೆಯಿಂದ ಮಹಿಳೆಗೆ ಹೊಡೆತ