
ಆನೇಕಲ್: ರೋಲ್ಕಾಲ್ ನೀಡದಿದ್ದಕ್ಕೆ ಪಟಾಕಿ ಅಂಗಡಿ ಮಾಲೀಕರಿಗೆ ಆನೇಕಲ್ ಪುರಸಭೆ ಬಿಜೆಪಿ ಸದಸ್ಯೆಯ ಪತಿ, ಬಿಜೆಪಿ (BJP) ಮುಖಂಡ ಚರಣ್ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿರುವ ಘಟನೆ ಆನೇಕಲ್ (Anekal) ತಾಲೂಕಿನ ಹೊಸೂರು ಮುಖ್ಯರಸ್ತೆಯ ನೆರಳೂರು ಗೇಟ್ ಬಳಿ ನಡೆದಿದೆ. ಎಸ್.ಎಲ್.ವಿ ಪಟಾಕಿ ಅಂಗಡಿ ಮಾಲೀಕರಾದ ಕಿರಣ್ ಮತ್ತು ಹರೀಶ್ ಮೇಲೆ ಬಿಜೆಪಿ ಮುಖಂಡ ಚರಣ, ತೇಜಸ್, ಹರೀಶ, ಗುರುರಾಜ್ ಸೇರಿದಂತೆ 10 ಜನರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ರಾತ್ರಿ ವೇಳೆ ಪಟಾಕಿ ಅಂಗಡಿ ಹೋಗಿದ್ದ ಚರಣ್ ಪಟಾಕಿ ಕೊಡು ಎಂದು ಕೇಳಿದ್ದಾನೆ. ಅದಕ್ಕೆ ಮಾಲಿಕರು ಅಂಗಡಿ ಬಾಗಿಲು ಮುಚ್ಚಿದ್ದೇವೆ ಬೆಳಗ್ಗೆ ಬನ್ನಿ ಎಂದಿದ್ದಾರೆ. ಇದಕ್ಕೆ ಧಮ್ಕಿ ಹಾಕಿ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಇದರಿಂದ ಪಟಾಕಿ ಅಂಗಡಿ ಮಾಲೀಕರಿಗೆ ಎದೆ, ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಂಭೀರ ಗಾಯಗೊಂಡ ಕಿರಣ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:36 pm, Tue, 25 October 22